ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 30 ಮಾರ್ಚ್ 2020
ಶಿವಮೊಗ್ಗದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಇರುವ ಅಂಗಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಕೆಲವೇ ನಿಮಿಷದಲ್ಲಿ ಅಂಗಡಿ ಸಂಪೂರ್ಣ ಭಸ್ಮವಾಗಿದೆ. ಅಗ್ನಿಶಾಮಕ ಸಿಬ್ಬಂದಿಯ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಮೂವರ ಪ್ರಾಣ ಉಳಿದಿದೆ.
ಅಗ್ನಿ ಅವಘಡಕ್ಕೆ ಕಾರಣವೇನು?
ದೇಗುಲದ ಮುಂದೆ ಇರುವ ಮಂಡಕ್ಕಿ ಅಂಗಡಿಯಲ್ಲಿ ರಾತ್ರಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಶಾರ್ಟ್ ಸರ್ಕಿಟ್’ನಿಂದಾಗಿ ಬೆಂಕಿ ಹೊತ್ತುಕೊಂಡಿದೆ ಎಂದು ತಿಳಿದು ಬಂದಿದೆ. ಕೆಲವೇ ನಿಮಿಷದಲ್ಲಿ ಬೆಂಕಿ ಜೋರಾಗಿ ಹೊತ್ತು ಉರಿದಿದೆ. ಇದರಿಂದ ಅಂಗಡಿಯಲ್ಲಿದ್ದ ಎರಡು ಟಿವಿ, ಫ್ರಿಡ್ಜ್ ಸೇರಿದಂತೆ ಹಲವು ವಸ್ತುಗಳು ಧಗಧಗ ಹೊತ್ತು ಉರಿದಿವೆ. ಸುಮಾರು ಏಳು ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಮೂವರ ಪ್ರಾಣ ಉಳಿಸಿದ ಅಗ್ನಿಶಾಮಕ ಸಿಬ್ಬಂದಿ
ಮಂಡಕ್ಕಿ ಅಂಗಡಿಯು ರಾಧಾಕೃಷ್ಣ ಕಾಮತ್ ಮತ್ತು ಗಣಪತಿ ಕಾಮತ್ ಎಂಬುವವರಿಗೆ ಸೇರಿದೆ. ಅಂಗಡಿ ಇದ್ದ ಕಟ್ಟಡದಲ್ಲೇ ಎರಡು ಕುಟುಂಬ ವಾಸವಿತ್ತು. ರಾಧಾಕೃಷ್ಣ ಕಾಮತ್ ಅವರು ಅಂಗಡಿಯ ಹಿಂಭಾಗದಲ್ಲಿ ವಾಸವಾಗಿದೆ. ಗಣಪತಿ ಕಾಮತ್ ಅವರ ಕುಟುಂಬ ಅಂಗಡಿಯ ಮೇಲ್ಭಾಗದಲ್ಲಿ ಇತ್ತು. ಬೆಂಕಿ ಹೊತ್ತುಕೊಳ್ಳುತ್ತಿದ್ದಂತೆ ರಾಧಾಕೃಷ್ಣ ಕಾಮತ್ ಅವರ ಕುಟುಂಬ ಪಾರಾಗಿ ಬಂದಿದೆ.
ಆದರೆ ಕಟ್ಟಡದ ಮರದ ಮೆಟ್ಟಿಲುಗಳು ಸುಟ್ಟು ಹೋಗಿದ್ದರಿಂದ ಗಣಪತಿ ಕಾಮತ್ ಅವರ ಕುಟುಂಬ ಪಾರಾಗಲು ಪರದಾಡಬೇಕಾಯಿತು. ಕೊನೆಗೆ ಅಗ್ನಿಶಾಮಕ ಸಿಬ್ಬಂದಿಯ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಗಣಪತಿ ಕಾಮತ್, ಪತ್ನಿ ಆಶಾ ಕಾಮತ್, ಮಗಳು ಸೌಮ್ಯ ಅವರನ್ನು ರಕ್ಷಿಸಲಾಗಿದೆ.
ಅಗ್ನಿಶಾಮಕ ದಳದ ಡಿಎಫ್ಒ ಅಶೋಕ್ ಕುಮಾರ್, ಸಿಬ್ಬಂದಿಗಳಾದ ಹುಲಿಯಪ್ಪ, ಬಿ.ಟಿ.ನಾಗೇಶ್, ಆನಂದಪ್ಪ, ವಿಷ್ಣುನಾಯ್ಕ್, ವಿನಯ್ ಕುಮಾರ್, ಪೊಲೀಸ್ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422