ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 9 JANUARY 2023
ಶಿವಮೊಗ್ಗ : ಜಿಲ್ಲಾ ಪಂಚಾಯಿತಿ ಮುಂಭಾಗ ಭೂಪಾಳಂ ನಿವಾಸದಲ್ಲಿ ಅಗ್ನಿ ಅವಘಡ (fire incident) ಸಂಭವಿಸಿ, ಉದ್ಯಮಿ ಭೂಪಾಳಂ ಶರತ್ ಅವರು ಸಾವನ್ನಪ್ಪಿದ್ದಾರೆ. ಈ ಸಂದರ್ಭ ರಕ್ಷಣಾ ಕಾರ್ಯಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬಳಿ ಅಗತ್ಯ ರಕ್ಷಣಾ ಸಾಮಾಗ್ರಿಗಳು ಇರಲಿಲ್ಲ. ಕೂಡಲೆ ಸರ್ಕಾರ ಸೂಕ್ತ ಉಪಕರಣಗಳನ್ನು ಒದಗಿಸಬೇಕು ಎಂದು ಆಗ್ರಹಿಸಿ ಮಹಾನಗರ ಪಾಲಿಕೆ ವಿರೋಧ ಪಕ್ಷದ ಸದಸ್ಯರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಪಾಲಿಕೆ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್ ಅವರ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ನಾಗೇಂದ್ರ ಎಫ್.ಹೊನ್ನಳ್ಳಿ ಅವರಿಗೆ ಮನವಿ ಸಲ್ಲಿಸಲಾಯಿತು.
ಪಾಲಿಕೆ ಸದಸ್ಯರ ಆಗ್ರಹವೇನು?
ಪ್ರತಿಷ್ಠಿತ ಉದ್ಯಮಿ ಮನೆಯಲ್ಲಿ ಅಗ್ನಿ ಅವಘಡ (fire incident) ಸಂಭವಿಸಿತ್ತು. ಈ ಸಂದರ್ಭ ರಕ್ಷಣೆಗೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಉಪಯೋಗಿಸುತ್ತಿದ್ದ ಮಾಸ್ಕ್ ನಲ್ಲಿ ಆಕ್ಸಿಜನ್ ವ್ಯವಸ್ಥೆ ಇರಲಿಲ್ಲ. ಟೋಪಿಯಲ್ಲಿ ಲೈಟ್ ಇರಲಿಲ್ಲ. ಬೆಂಕಿ ತಾಗದೆ ಸಿಬ್ಬಂದಿಯನ್ನು ರಕ್ಷಿಸುವ ಜಾಕೆಟ್ ಇರಲಿಲ್ಲ ಎಂದು ಆರೋಪಿಸಿದರು.
ಭೂಪಾಳಂ ಅವರ ಮನೆಯ ಮೊದಲನೆ ಮಹಡಿಗೆ ಹೋಗಲು ಯಾವುದೆ ಉಪಕರಣಗಳು ಅಗ್ನಿಶಾಮಕ ಸಿಬ್ಬಂದಿಗೆ ಒದಗಿಸಿಲ್ಲ. ಶಿವಮೊಗ್ಗದಲ್ಲಿ ಸದ್ಯ ಬಹು ಮಹಡಿ ಕಟ್ಟಡಗಳಿವೆ. ತುರ್ತು ಸಂದರ್ಭ ಈ ಕಟ್ಟಡದ ಮಹಡಿಗಳಿಗೆ ಅಗ್ನಿಶಾಮಕ ಸಿಬ್ಬಂದಿ ತಲುಪಲು ಸೂಕ್ತ ಉಪಕರಣಗಳಿಲ್ಲ ಎಂದು ಪಾಲಿಕೆಯ ವಿರೋಧ ಪಕ್ಷದ ಸದಸ್ಯರು ಆರೋಪಿಸಿದರು.
ಇದನ್ನೂ ಓದಿ – ಕೊನೆವರೆಗು ಹೋರಾಡಿದ ಉದ್ಯಮಿ ಶರತ್ ಭೂಪಾಳಂ, ಭಾನುವಾರ ಬೆಳಗಿನ ಜಾವ ಏನೇನಾಯ್ತು?
ಈ ಕೂಡಲೆ ಜಿಲ್ಲಾಧಿಕಾರಿ ಅವರು ಪರಿಶೀಲನೆ ನಡೆಸಿ, ಅಗ್ನಿಶಾಮಕ ದಳಕ್ಕೆ ಅಗತ್ಯವಿರುವ ಉಪಕರಣಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ಪಾಲಿಕೆ ಸದಸ್ಯರಾದ ಹೆಚ್.ಸಿ.ಯೋಗೇಶ್, ನಾಗರಾಜ್ ಕಂಕರಿ, ಮಂಜುಳಾ ಶಿವಣ್ಣ, ಮಾಜಿ ಉಪ ಮೇಯರ್ ಹೆಚ್.ಪಾಲಾಕ್ಷಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಗಿರೀಶ್ ಪ್ರಮುಖರಾದ ಭಾಸ್ಕರ್, ಪ್ರಶಾಂತ್ ರಾಯ್, ಮೋಹನ್ ಸೋಮಿನಕೊಪ್ಪ ಇತರರು ಈ ಸಂದರ್ಭ ಇದ್ದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422