ಶಿವಮೊಗ್ಗದ ಆಸ್ಪತ್ರೆಗೆ ಲಕ್ಷ ಲಕ್ಷ ವಂಚಿಸಿದ ನೌಕರ, ಹೇಗಾಯ್ತು ವಂಚನೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 18 DECEMBER 2023

SHIMOGA : ಆಸ್ಪತ್ರೆಯೊಂದರ ಫಾರ್ಮಸಿಯ ಬಿಲ್ಲಿಂಗ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ನೌಕರನೊಬ್ಬ ಲಕ್ಷಾಂತರ ರೂ. ವಂಚಿಸಿದ್ದಾನೆ ಎಂದು ಆರೋಪಿಸಿ ವೈದ್ಯರೊಬ್ಬರು ದೂರು ನೀಡಿದ್ದಾರೆ. ಕುವೆಂಪು ರಸ್ತೆಯಲ್ಲಿರುವ ಕಣ್ಣಿನ ಆಸ್ಪತ್ರೆಯೊಂದರ ಫಾರ್ಮಸಿಯಲ್ಲಿ ಕೆಲಸ ಮಾಡುತ್ತಿದ್ದ ನೌಕರ ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಫಾರ್ಮಸಿಯಿಂದ ಈಚೆಗೆ ಕಡಿಮೆ ಹಣ ಬರುತ್ತಿತ್ತು. ಈ ಹಿನ್ನೆಲೆ ಫಾರ್ಮಸಿಗೆ ತರಿಸಿದ್ದ ಔಷಧ ಮತ್ತು ಮಾರಾಟ ಮಾಡಿದ ಔಷಧದ ವಿವರ ಪರಿಶೀಲಿಸಿದಾಗ 5.37 ಲಕ್ಷ ರೂ. ವ್ಯತ್ಯಸ ಕಂಡು ಬಂದಿದೆ. ಈ ಬಗ್ಗೆ ಪ್ರಶ್ನಿಸಿದಾಗ ಕೆಲವು ರೋಗಿಗಳಿಗೆ ಬಿಲ್‌ ಇಲ್ಲದೆ ಔಷಧ ಮಾರಾಟ ಮಾಡಿದ್ದು ಆ ಹಣವನ್ನು ಸ್ವಂತಕ್ಕೆ ಬಳಕೆ ಮಾಡಿಕೊಂಡಿದ್ದಾಗಿ ನೌಕರ ತಿಳಿಸಿದ್ದ. ಅಲ್ಲದೆ ಹಣವನ್ನು ಹಿಂತಿರುಗಿಸುವುದಾಗಿ ಭರವಸೆ ನೀಡಿದ್ದ. ಆದರೆ ಈತನಕ ಹಣ ಪಾವತಿಸಿಲ್ಲ ಎಂದು ಆರೋಪಿಸಿ ದೊಡ್ಡಪೇಟೆ ಠಾಣೆಯಲ್ಲಿ ಡಾ.ಮೇಘರಾಜ್‌ ಎಂಬುವವರು ದೂರು ನೀಡಿದ್ದಾರೆ.

ಇದನ್ನೂ ಓದಿ – ನಟಿ ಮಾಳವಿಕ ಅವಿನಾಶ್‌ಗೆ ಎದುರಾಗಿದ್ದ ಸಂಕಷ್ಟ ನಾಳೆ ನಿಮ್ಮನ್ನೂ ಕಾಡಬಹುದು, ಏನದು? ಪಾರಾಗೋದು ಹೇಗೆ?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment