ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗ: ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಶಿವಮೊಗ್ಗಕ್ಕೆ ಆಗಮಿಸಿದ್ದ ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರಿಗೆ ವಿಮಾನ ಕ್ಯಾನ್ಸಲ್ (Cancel) ಬಿಸಿ ತಟ್ಟಿದೆ. ಹಾಗಾಗಿ ತರಾತುರಿಯಲ್ಲಿ ಕಲ್ಯಾಣ ಮಂಟಪಕ್ಕೆ ಆಗಮಿಸಿ ಮರಳಿದರು.
ಶಿವಮೊಗ್ಗದ ಒಡ್ಡಿನಕೊಪ್ಪ ಸಮೀಪದ ಮಲ್ಲೇಶ್ ಕನ್ವೆನ್ಷನ್ ಹಾಲ್‌ನಲ್ಲಿ ನಡೆಯುತ್ತಿದ್ದ ಪರಿಚಿತರೊಬ್ಬರ ಮದುವೆ ಸಮಾರಂಭದಲ್ಲಿ ಮಾಜಿ ಐಪಿಎಸ್ ಅಧಿಕಾರಿ, ಬಿಜೆಪಿ ಮುಖಂಡ ಅಣ್ಣಾಮಲೈ ಭಾಗವಹಿಸಿದ್ದರು.
ವಿಮಾನ ಕ್ಯಾನ್ಸಲ್ ಬಿಸಿ
ಅಣ್ಣಾಮಲೈ ಅವರು ಚೆನ್ನೈನಿಂದ ಶಿವಮೊಗ್ಗಕ್ಕೆ ನೇರವಾಗಿ ವಿಮಾನದಲ್ಲಿ ಆಗಮಿಸಬೇಕಿತ್ತು. ಆದರೆ ಸ್ಪೈಸ್ ಜೆಟ್ ವಿಮಾನ ರದ್ದಾಗಿದ್ದರಿಂದ ಬೆಂಗಳೂರಿಗೆ ಆಗಮಿಸಿ ಅಲ್ಲಿಂದ ವಿಮಾನದಲ್ಲಿ ಶಿವಮೊಗ್ಗಕ್ಕೆ ಬಂದಿದ್ದರು. ಅದೇ ವಿಮಾನದಲ್ಲಿ ಪುನಃ ಬೆಂಗಳೂರಿಗೆ ಮರಳಬೇಕಿತ್ತು. ಹಾಗಾಗಿ ತರಾತುರಿಯಲ್ಲಿ ಆಗಮಿಸಿ ಮರಳಿದರು.

‘ಮತ್ತೆ ಬರ್ತಿನಿ, ಮಾತಾಡ್ತೀನಿʼ
ಇನ್ನು, ತಮಿಳುನಾಡು ಬಿಜೆಪಿಯೊಳಗಿನ ಸಂಘರ್ಷ, ಇತ್ತೀಚೆಗೆ ಅಣ್ಣಾಮಲೈ ನೀಡಿದ್ದ ಹೇಳಿಕೆ ಸಂಬಂಧ ಮಾಧ್ಯಮಗಳು ಪ್ರಶ್ನಿಸಿದಾಗ, ‘10ನೇ ತಾರೀಖಿನ ನಂತರ ಪುನಃ ಬರುತ್ತೇನೆ. ಆಗ ಮಾತನಾಡುತ್ತೇನೆ’ ಎಂದು ತಿಳಿಸಿದರು.
ಇಲ್ಲಿದೆ ವಿಡಿಯೋ
Cancel






