ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 23 ಜನವರಿ 2020
ಗಣರಾಜ್ಯೋತ್ಸವ ಅಂಗವಾಗಿ ಜ.24ರಿಂದ 27ರವರೆಗೆ 50ನೇ ಫಲಪುಷ್ಪ ಪ್ರದರ್ಶನ ಹಾಗೂ ಹಣ್ಣುಗಳ ಮೇಳವನ್ನು ಏರ್ಪಡಿಸಲಾಗಿದೆ. ಜಿಲ್ಲಾ ಉದ್ಯಾನ ಕಲಾ ಸಂಘ ಮತ್ತು ವಿವಿಧ ಇಲಾಖೆಗಳ ಆಶ್ರಯದಲ್ಲಿ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಜಿಪಂ ಸಿಇಓ ಎಂ.ಎಲ್.ವೈಶಾಲಿ ತಿಳಿಸಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಗಾಂಧಿಪಾರ್ಕ್’ನ ತೋಟಗಾರಿಕೆ ಇಲಾಖೆ ಹಾಗೂ ಅಂಬೇಡ್ಕರ್ ಭವನದ ಆವರಣದಲ್ಲಿ ಫಲಪುಷ್ಪ ಪ್ರದರ್ಶನ, ಹಣ್ಣುಗಳ ಮೇಳ, ಆಹಾರ ಮೇಳ, ಪಾತ್ಯಕ್ಷಿಕೆ, ಮಳಿಗೆಗಳು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಆಟಿಕೆಗಳ ಅಮ್ಯೂಸ್ಮೆಂಟ್ ಪಾರ್ಕ್ ಆಕರ್ಷಣೀಯವಾಗಲಿವೆ ಎಂದರು.
ಜ.24ರ ಸಂಜೆ 5ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಫಲಪುಷ್ಪ ಪ್ರದರ್ಶನ ಉದ್ಘಾಟಿಸುವರು. ಜ.27ರ ಸಂಜೆ 6 ಗಂಟೆಗೆ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭ ಆಯೋಜಿಸಲಾಗಿದೆ ಎಂದು ವೈಶಾಲಿ ತಿಳಿಸಿದರು.
ವಿವಿಧ ಸ್ಪರ್ಧೆಗಳು, ಹೂವಿನಲ್ಲಿ ಬಸವಣ್ಣ
ವಿವಿಧ ಹೂವಿನ ರಂಗೋಲಿ ಸ್ಪರ್ಧೆಯನ್ನು ಸಾರ್ವಜನಿಕರಿಗಾಗಿ ಆಯೋಜಿಸಲಾಗಿದೆ. ವಿವಿಧ ಸ್ಪರ್ಧೆಗಳು ಸಸ್ಯ ಭಾಗಗಗಳು, ಹೂವು, ಎಲೆ, ಧಾನ್ಯಗಳನ್ನು ಬಳಸಿ ರಂಗೋಲಿ ರಚಿಸುವುದು ಕೂಡ ಸ್ಪರ್ಧೆಯ ಭಾಗವಾಗಿದೆ ಎಂದು ಜಿಪಂ ಸಿಇಒ ಎಂ.ಎಲ್.ವೈಶಾಲಿ ಹೇಳಿದರು. ನಗರಪಾಲಿಕೆ ಪ್ರಾಯೋಜಕತ್ವದಲ್ಲಿ ಶಾಲಾ ಮಕ್ಕಳಿಗೆ ಸ್ವಚ್ಛ ಭಾರತದ ಕುರಿತು ಘೋಷವಾಕ್ಯ ಮತ್ತು ಚಿತ್ರಕಲೆ ರಚಿಸುವ ಸ್ಪರ್ಧೆ ಏರ್ಪಡಿಸಲಾಗಿದೆ. ರೈತರಿಗೆ ಕೃಷಿ ಉತ್ಪನ್ನಗಳ ಪ್ರದರ್ಶನ ಸ್ಪರ್ಧೆ, ಖಾಸಗಿ ವ್ಯಕ್ತಿಗಳಿಗೆ ಕೈತೋಟ, ತಾರಸಿ ತೋಟ, ಉದ್ಯಾನ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದರು.
ಇನ್ನು, ಈ ಬಾರಿ ಹೂವಿನಿಂದ ಅಲಂಕೃತವಾದ ಬಸವಣ್ಣ ಮತ್ತು ಉಳುವ ರೈತನ ಪ್ರತಿಕೃತಿ, ಸಿರಿಧಾನ್ಯದಲ್ಲಿ ತೋಟಗಾರಿಕೆ ಪಿತಾಮಹ ಡಾ.ಮರೀಗೌಡರ ಪ್ರತಿಕೃತಿಯನ್ನು ಹೂವಿನಲ್ಲಿ ರಚಿಸಲಾಗುತ್ತದೆ ಎಂದರು.
ಪ್ರದರ್ಶನದ ಅವಧಿ ಎಷ್ಟು?
ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಫಲಪುಷ್ಪ ಪ್ರದರ್ಶನ ವೀಕ್ಷಿಸಬಹುದು. ಮಕ್ಕಳಿಗೆ 5 ರೂ. ಹಾಗೂ ವಯಸ್ಕರಿಗೆ 10 ರೂ. ಪವೇಶ ಶುಲ್ಕ ನಿಗದಿಪಡಿಸಲಾಗಿದೆ. ಶಾಲಾ ಸಮವಸ್ತ್ರ ಧರಿಸಿ ಶಿಕ್ಷಕರೊಂದಿಗೆ ತೆರಳುವ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶವಿದೆ. ಫಲಪುಷ್ಪ ಪ್ರದರ್ಶನದಲ್ಲಿ ಆಹಾರ ಮೇಳವನ್ನೂ ಏರ್ಪಡಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಚ್.ಆರ್.ಯೋಗೇಶ್ ತಿಳಿಸಿದರು.
ಉದ್ಯಾನಕಲಾ ಸಂಘದ ಉಪಾಧ್ಯಕ್ಷ ಸಿದ್ದಪ್ಪ ಹರಳೆಣ್ಣೆಯವರ್, ಖಜಾಂಚಿ ಜಿ.ಎಂ.ರಘು ದುಮ್ಮಳ್ಳಿ, ನಿರ್ದೇಶಕರಾದ ಕಡಿದಾಳು ಗೋಪಾಲ್, ಚಂದಕಲಾ ಅರಸ್, ಲೋಕೇಶ್ವರಿ ಚೋಳಕೆ ಇತರರಿದ್ದರು.
- ಶಿವಮೊಗ್ಗದಲ್ಲಿ ಐದು ತಿಂಗಳ ಹಿಂದೆಯೇ ಪತ್ತೆಯಾಗಿತ್ತು HMP ಸೋಂಕು, ಡಾ.ಸರ್ಜಿ ಹೇಳಿದ್ದೇನು?
- ಹುಲಿಕಲ್ ಘಾಟ್ನಲ್ಲಿ ಪ್ರಪಾತಕ್ಕೆ ಉರುಳಿದ ಬಸ್, ಆಗಿದ್ದೇನು?
- ಕನಸಿನಕಟ್ಟೆಯಲ್ಲಿ ವಿದ್ಯುತ್ ಶಾಕ್ಗೆ ಯುವಕ ಸಾವು, ಹೇಗಾಯ್ತು ಘಟನೆ?
- ಆನೆ ದಾಳಿ, ಸಾಗರದಲ್ಲಿ MLA ನೇತೃತ್ವದಲ್ಲಿ ಮಹತ್ವದ ಮೀಟಿಂಗ್, ಏನೆಲ್ಲ ಚರ್ಚೆಯಾಯ್ತು?
- ಅಡಿಕೆ ಧಾರಣೆ | 6 ಜನವರಿ 2025 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]