ದೂರದ ಊರಿನಿಂದ ಹೂವು ತಂದು ಶಿವಮೊಗ್ಗ ಪೊಲೀಸ್ ಚೌಕಿಯಲ್ಲಿ ಸುರಿದ ಬೆಳೆಗಾರ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗ ಲೈವ್.ಕಾಂ | SHIMOGA NEWS | 12 MAY 2021

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಹೂವು ಬೆಳೆಗಾರರಿಗೆ ಮತ್ತು ಪುಷ್ಪೋದ್ಯಮಕ್ಕೆ ಲಾಕ್ ಡೌನ್ ಭಾರಿ ಪೆಟ್ಟು ಕೊಟ್ಟಿದೆ. ಹೂವು ಖರೀದಿಗೆ ಯಾರೊಬ್ಬರು ಮುಂದೆ ಬರುತ್ತಿಲ್ಲ. ಇದೆ ಕಾರಣಕ್ಕೆ ಶಿವಮೊಗ್ಗದಲ್ಲಿ ರೈತರೊಬ್ಬರು ತಾವು ಬೆಳೆದ ಹೂವನ್ನು ರಸ್ತೆಗೆ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ವಿನೋಬನಗರ ಪೊಲೀಸ್ ಚೌಕಿ ಸರ್ಕಲ್‍ನಲ್ಲಿ ಘಟನೆ ನಡೆದಿದೆ. ಶಿಕಾರಿಪುರ ತಾಲೂಕು ಯಡವಾಲ ಗ್ರಾಮದಿಂದ ಬಂದಿದ್ದ ರೈತ ಹೂವನ್ನು ರಸ್ತೆಗೆ ಚೆಲ್ಲಿದ್ದಾರೆ.

ಬೆಳೆಗಾರನ ಆಕ್ರೋಶಕ್ಕೇನು ಕಾರಣ?

ಬೆಳಗ್ಗೆ ಮಾತ್ರ ಮಾರಾಟಕ್ಕೆ ಅವಕಾಶವಿದೆ. ಈ ವೇಳೆ ಜನರು ಅಗತ್ಯ ವಸ್ತುಗಳನ್ನಷ್ಟೆ ಖರೀದಿಸುತ್ತಾರೆ. ಹೂವು ಕೇಳೋರಿಲ್ಲ.

ಮಧ್ಯಾಹ್ನದವರೆಗೆ ಮಾರಾಟಕ್ಕೆ ಅವಕಾಶ ಕೊಟ್ಟಿದ್ದರೆ ಹೂವು ವ್ಯಾಪಾರವಾಗುತ್ತಿತ್ತು. ಆದರೆ ನಿಗದಿತ ಸಮಯ ಮುಗಿದ ಬಳಿಕ ಪೊಲೀಸರು ಓಡಾಡೋಕೆ ಬಿಡುವುದಿಲ್ಲ.

ಇದನ್ನೂ ಓದಿ | ರೈತರಿಗೆ ಲಾಕ್ ಡೌನ್ ಬಿಸಿ, ಅನ್ನದಾತರಿಗೆ ಪಾಸ್ ಇಲ್ಲ, ಐಡಿ ಕಾರ್ಡು ಇಲ್ಲ, ಜಮೀನಗೆ ಹೋಗೋಕು ಆಗ್ತಿಲ್ಲ

ಈ ಲಾಕ್‍ ಡೌನ್‍ನಿಂದಾಗಿ ಈಗಾಗಲೇ ಈ ಹೂವು ಒಂದು ದಿನ ತಡವಾಗಿ ಮಾರುಕಟ್ಟೆಗೆ ತಂದಿದ್ದೀನಿ. ಈಗ ಮನೆಗೆ ಕೊಂಡೊಯ್ದು ಏನು ಮಾಡಲಿ. ಎರಡ್ಮೂರು ಸಾವಿರದ ಹೂವು ಇದು. ಅದಕ್ಕೆ ರಸ್ತೆಗೆ ಸುರಿಯುತ್ತಿದ್ದೇನೆ.

ಹೂವು ಬೆಳೆಗಾರರನ್ನು ಸಾರ್ವಜನಿಕರು, ಪೊಲೀಸರು ಸಮಾಧಾನಪಡಿಸಿ ಕಳುಹಿಸಿದರು.

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment