ಶಿವಮೊಗ್ಗ ಲೈವ್.ಕಾಂ | SHIMOGA | 12 ಏಪ್ರಿಲ್ 2020
ಲಾಕ್‌ಡೌನ್ ಹಿನ್ನೆಲೆ ಪೆಟ್ರೋಲ್ ಸಿಗುವುದೆ ಕಷ್ಟ. ಇಂತಹ ಪರಿಸ್ಥಿತಿಯಲ್ಲಿ ಶಿವಮೊಗ್ಗದ ಪೆಟ್ರೋಲ್ ಬಂಕ್ ಒಂದರ ಮಾಲೀಕರು ಪ್ರತಿ ಗಾಡಿಗೆ ಒಂದು ಲೀಟರ್ ಪೆಟ್ರೋಲ್ ಉಚಿತ ಎಂಬ ಆಫರ್ ನೀಡಿದ್ದಾರೆ. ಇದು ಒಂದು ದಿನದ ಆಫರ್. ಹಾಗಾಗಿ ಇವತ್ತು ಆ ಪೆಟ್ರೋಲ್ ಬಂಕ್ ಮುಂದೆ ಜನ ಸಾಗರವೇ ಸೇರಿತ್ತು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಯಾರಿಗೆಲ್ಲ ಇತ್ತು ಆಫರ್?
ಕರೋನ ವಿರುದ್ಧ ಶಿವಮೊಗ್ಗದಲ್ಲಿ ಹೋರಾಡುತ್ತಿರುವವರಿಗೆ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಸಹ್ಯಾದ್ರಿ ಪೆಟ್ರೋಲ್ ಬಂಕ್‌ನಲ್ಲಿ ಆಫರ್ ನೀಡಲಾಗಿತ್ತು. ವೈದ್ಯರು, ವೈದ್ಯಕೀಯ ಸಿಬ್ಬಂದಿ ಮತ್ತು ಪೊಲೀಸರಿಗೆ ಈ ಆಫರ್ ಅನ್ವಯವಾಗಿತ್ತು. ಒಂದು ದಿನದ ಆಫರ್ ಈ ದಿನ ಮಧ್ಯಾಹ್ನಕ್ಕೆ ಮುಗಿದಿದೆ.
ಆಫರ್ ಕೊಟ್ಟಿದ್ದು ಏಕೆ?
ಕರೋನ ವಿರುದ್ಧ ಹೋರಾಡುವವರಿಗೆ ಹುರಿದುಂಬಿಸುವ ಸಲುವಾಗಿ ಇಂತಹ ಆಫ್ ನೀಡಲಾಗಿದೆ. ಈಗ ವೈದ್ಯರು, ವೈದ್ಯಕೀಯ ಸಿಬ್ಬಂದಿ ಮತ್ತು ಪೊಲೀಸರಿಗೆ ಉಚಿತ ಪೆಟ್ರೋಲ್ ಹಾಕಲಾಗುತ್ತಿದೆ. ಇದೇ ರೀತಿ ಕರೋನ ವಿರುದ್ಧ ಹೋರಾಟ ನಡೆಸುತ್ತಿರುವ ಇನ್ನಷ್ಟು ಜನರಿಗೆ ಈ ಆಫರ್ ನೀಡಲಾಗುತ್ತದೆ ಎಂದು ಸಹ್ಯಾದ್ರಿ ಪೆಟ್ರೋಲ್ ಬಂಕ್ ಮಾಲೀಕ ಸುಹಾಸ್ ತಿಳಿಸಿದ್ದಾರೆ.
ಸಾಮಾಜಿಕ ಅಂತರಕ್ಕಿಲ್ಲ ಕವಡೆ ಕಿಮ್ಮತ್ತು
ಉಚಿತ ಪೆಟ್ರೋಲ್ ಆಫರ್ ಇದ್ದಿದ್ದರಿಂದ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದರು. ಪ್ರತಿದಿನ ಸಾಮಾಜಿಕ ಅಂತರದ ಪಾಠ ಮಾಡುತ್ತಿದ್ದವರೆ ಅಂತರವಿರಲ್ಲದೆ ಪೆಟ್ರೋಲ್‌ಗೆ ನೂಕುನುಗ್ಗಲು ಮಾಡಿದರು. ತಿಳಿ ಹೇಳುವವರೆ ಸಾಮಾಜಿಕ ಅಂತರ ಪಾಲಿಸದಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಯಿತು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]