ಬೆಂಗಳೂರು : ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಬಂಧನವಾಗಿದೆ. ನಕಲಿ ಬಂಗಾರ ಅಡಮಾನ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇ.ಡಿ) ಮಂಜುನಾಥ ಗೌಡ ಅವರನ್ನು ಬಂಧಿಸಿ (Arrest), ವಿಚಾರಣೆ ನಡೆಸುತ್ತಿದೆ. ಸದ್ಯ ನ್ಯಾಯಾಲಯ ಮಂಜುನಾಥ ಗೌಡ ಅವರನ್ನು 14 ದಿನ ಇ.ಡಿ. ಕಸ್ಟಡಿಗೆ ನೀಡಿದೆ.
ನ್ಯಾಯಾಲಯದಿಂದ ಮೂರು ಪ್ರಮುಖ ಸೂಚನೆ
ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆರ್.ಎಂ.ಮಂಜುನಾಥ ಗೌಡ ಅವರನ್ನು ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು 14 ದಿನ ಇ.ಡಿ. ಕಸ್ಟಡಿಗೆ ವಹಿಸಿದ್ದಾರೆ. ಅಲ್ಲದೆ ಮೂರು ಪ್ರಮುಖ ಸೂಚನೆ ನೀಡಿ ಆದೇಶಿಸಲಾಗಿದೆ.
ಸೂಚನೆ 1 : ಪ್ರತಿದಿನ 30 ನಿಮಿಷ ವಕೀಲರ ಭೇಟಿಗೆ ಅವಕಾಶ ನೀಡಬೇಕು.
ಸೂಚನೆ 2 : ವಿಚಾರಣೆ ಸಂದರ್ಭ ವಿಸಿಬಲ್ ಡಿಸ್ಟೆನ್ಸ್‌ನಲ್ಲಿ ವಕೀಲರು ಇರಲು ಅವಕಾಶ ಕೊಡಬೇಕು.
ಸೂಚನೆ 3 : ಮಂಜುನಾಥ ಗೌಡ ಅವರಿಗೆ ಅರೋಗ್ಯದ ಸಮಸ್ಯೆ ಇರುವುದರಿಂದ ಅಗತ್ಯ ಸವಲತ್ತು ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಇ.ಡಿ. ಕಚೇರಿಗೆ ಮಂಜುನಾಥ ಗೌಡ ರವಾನೆ
ನ್ಯಾಯಾಲಯ ಮಂಜುನಾಥ ಗೌಡ ಅವರನ್ನು ಇ.ಡಿ. ಕಸ್ಟಡಿಗೆ ವಹಿಸುತ್ತಿದ್ದಂತೆ, ಇ.ಡಿ. ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದರು. ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣದ ಆವರಣದಲ್ಲಿರುವ ಇ.ಡಿ. ಕಚೇರಿಯಲ್ಲಿ ಕರೆದೊಯ್ದರು (Arrest). ಇಲ್ಲಿಯೇ ಅವರನ್ನು ವಿಚಾರಣೆ ಮಾಡಲಾಗುತ್ತಿದೆ.
ದಾಳಿ, ವಿಚಾರಣೆ, ಅರೆಸ್ಟ್, ಈತನಕ ಏನೇನಾಯ್ತು?
ಏಪ್ರಿಲ್ 8ರಂದು ಬೆಳಗ್ಗೆ ಅಪೆಕ್ಸ್ ಬ್ಯಾಂಕ್‌ನ ಅತಿಥಿಗೃಹದಲ್ಲಿ ಆರ್.ಎಂ.ಮಂಜುನಾಥಗೌಡ ಉಳಿದಿದ್ದ ಕೊಠಡಿ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದರು. ಸಂಜೆ 6 ಗಂಟೆವರೆಗೆ ಕೊಠಡಿಯಲ್ಲೇ ಮಂಜುನಾಥ ಗೌಡ ವಿಚಾರಣೆಗೆ ಒಳಪಡಿಸಿದರು. ಈ ಸಂದರ್ಭ ಸ್ಥಳೀಯ ಪೊಲೀಸರು, ಕೇಂದ್ರ ಮೀಸಲು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು.
ಏಪ್ರಿಲ್ 8ರ ಸಂಜೆ ಮಂಜುನಾಥ ಗೌಡ ಅವರನ್ನು ಅಪೆಕ್ಸ್ ಬ್ಯಾಂಕ್ ಅತಿಥಿ ಗೃಹದಿಂದ ಶಾಂತಿ ನಗರದ ಇ.ಡಿ. ಕಚೇರಿಗೆ ಕರೆದೊಯ್ಯಲಾಯಿತು. ಇ.ಡಿ. ಕಚೇರಿಯಲ್ಲಿ ವಿಚಾರಣೆ ಮುಂದುವರೆಸಲಾಯಿತು.
ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯಲ್ಲಿ ಎರಡನೇ ದಿನವು ಮುಂದುವರೆದ ಇ.ಡಿ ದಾಳಿ, ಎಲ್ಲೆಲ್ಲಿ ದಾಳಿಯಾಗಿದೆ?
ಏಪ್ರಿಲ್ 9ರ ಬೆಳಗ್ಗೆ ಮಂಜುನಾಥ ಗೌಡ ಅವರನ್ನು ಬಂಧಿಸಿ (Arrest), ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮೆಡಿಕಲ್ ಟೆಸ್ಟ್ ಮಾಡಿಸಲಾಯಿತು.

ಏಪ್ರಿಲ್ 9ರ ಮಧ್ಯಾಹ್ನ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಮಂಜುನಾಥ ಗೌಡ ಅವರನ್ನು ಕರೆತಂದ ಇ.ಡಿ. ಅಧಿಕಾರಿಗಳು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶರು 14 ದಿನ ಇ.ಡಿ. ಕಸ್ಟಡಿಗೆ ವಹಿಸಿ ಆದೇಶಿಸಿದರು.
ಏಪ್ರಿಲ್ 9ರ ಮಧ್ಯಾಹ್ನ ಇ.ಡಿ. ಅಧಿಕಾರಿಗಳು ಮಂಜುನಾಥ ಗೌಡ ಅವರನ್ನು ಬೆಂಗಳೂರಿನ ಶಾಂತಿ ನಗರದಲ್ಲಿರುವ ಇ.ಡಿ. ಕಚೇರಿಗೆ ಕರೆದೊಯ್ದು ವಿಚಾರಣೆ ಆರಂಭಿಸಿದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200