ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 24 DECEMBER 2023
SHIMOGA : ಬಸ್‌ನಲ್ಲಿ ಪರಿಚಯವಾದ ಮಹಿಳೆಯೊಬ್ಬಳು ವ್ಯಕ್ತಿಯೊಬ್ಬನನ್ನು ಲಾಡ್ಜ್‌ಗೆ ಕರೆದೊಯ್ದು ಚಿನ್ನಾಭರಣ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾಳೆ. ಮರ್ಯಾದೆಗೆ ಅಂಜಿದ ವ್ಯಕ್ತಿ ತಡವಾಗಿ ದೂರು ನೀಡಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಬಸ್ ಇಳಿದು ಲಾಡ್ಜ್‌ಗೆ ಕರೆದೊಯ್ದ ಮಹಿಳೆ
ಲಾರಿ ಚಾಲಕರೊಬ್ಬರು (ಹೆಸರು ಗೌಪ್ಯ) ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಹೊನ್ನಾವರದಿಂದ ಶಿವಮೊಗ್ಗಕ್ಕೆ ಬರುತ್ತಿದ್ದರು. ಪಕ್ಕದ ಸೀಟಿನಲ್ಲಿದ್ದ ಸುಮಾರು 35 ವರ್ಷದ ಮಹಿಳೆ ಪರಿಚಯವಾಗಿದ್ದಳು. ಇಬ್ಬರು ಪರಸ್ಪರ ಮೊಬೈಲ್ ನಂಬರ್ ಹಂಚಿಕೊಂಡಿದ್ದರು. ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಂತೆ ಮಹಿಳೆ ಚಾಲಕನನ್ನು ಎನ್.ಟಿ.ರಸ್ತೆಯ ಲಾಡ್ಜ್ ಒಂದಕ್ಕೆ ಕರೆದೊಯ್ದಿದ್ದಳು.
‘ನಮ್ಮ ಸ್ವಾಮೀಜಿ ಹೇಳಿದ್ದಾರೆ’
ರೂಂನಲ್ಲಿ ತನ್ನೊಂದಿಗೆ ಮಲಗಬೇಕಿದ್ದರೆ ಮೈಮೇಲಿನ ಚಿನ್ನಾಭರಣವನ್ನು ತೆಗೆದಿಡಬೇಕು. ಹೀಗಂತ ನಮ್ಮ ಸ್ವಾಮೀಜಿ ಹೇಳಿದ್ದಾರೆ ಎಂದು ಮಹಿಳೆ ನಂಬಿಸಿದಳು. ಅದರಂತೆ ಚಾಲಕ ತನ್ನ ಕೊರಳಲ್ಲಿದ್ದ ಚಿನ್ನದ ಸರ, ಡೈಮೆಂಡ್ ಹರಳಿನ ಉಂಗುರ ತೆಗೆದು ತನ್ನದೆ ಬ್ಯಾಗಿನಲ್ಲಿ ಇಟ್ಟಿದ್ದರು. ಸ್ವಲ್ಪ ಸಮಯದ ಬಳಿಕ ಮಹಿಳೆ ತನಗೆ ಕುಡಿಯಲು ನೀರು ಬೇಕು ಎಂದು ಕೇಳಿದ್ದಕ್ಕೆ ಚಾಲಕ ಲಾಡ್ಜ್‌ನಿಂದ ಹೊರ ಹೋಗಿ ನೀರು, ಊಟ ತರಲು ತೆರಳಿದ್ದರು.
ವಾಪಸ್ ಬಂದಾಗ ಮಹಿಳೆ ನಾಪತ್ತೆ
ಊಟ, ನೀರು ತೆಗೆದುಕೊಂಡು ಚಾಲಕ ಲಾಡ್ಜ್‌ಗೆ ಹಿಂತಿರುಗಿದಾಗ ಮಹಿಳೆ ನಾಪತ್ತೆಯಾಗಿದ್ದಳು. ಬ್ಯಾಗ್ ಪರಿಶೀಲಿಸಿದಾಗ ಚಿನ್ನಾಭರಣ ಮತ್ತು ಲಾರಿಯ ಬಾಡಿಗೆ ಹಣ ನಾಪತ್ತೆಯಾಗಿತ್ತು. ಕೂಡಲೆ ಮಹಿಳೆಯ ನಂಬರ್‌ಗೆ ಕರೆ ಮಾಡಿದ್ದು ಆಕೆ ಸ್ವೀಕರಿಸಲಿಲ್ಲ. ಮರ್ಯಾದೆಗೆ ಅಂಜಿ ದೂರು ನೀಡದೆ ಆಕೆಗಾಗಿ ಚಾಲಕ ಎಲ್ಲೆಡೆ ಹುಡುಕಿದರು. ಕೊನೆಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. 50 ಸಾವಿರ ರೂ. ನಗದು ಸೇರಿ 1.24 ಲಕ್ಷ ರೂ. ಚಿನ್ನಾಭರಣ ಕಳುವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇದನ್ನೂ ಓದಿ – ಶಿವಮೊಗ್ಗ ಜನಶತಾಬ್ದಿ, ತಾಳಗುಪ್ಪ ಎಕ್ಸ್‌ಪ್ರೆಸ್ ಸೇರಿ 19 ರೈಲುಗಳಿಗೆ ಹೆಚ್ಚುವರಿ ಬೋಗಿ, ಯಾವ್ಯಾವ ರೈಲುಗಳು?
LATEST NEWS
- ಶಿವಮೊಗ್ಗ ಡಿ.ಸಿ ಎದುರು ಮೈದಾನಕ್ಕೆ ಬ್ಯಾರಿಕೇಡ್, ಹಿಂದೂ ಸಂಘಟನೆಗಳು ಗರಂ, ಕಾರಣವೇನು?

- ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್

- ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

- ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

- ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

About The Editor
ನಿತಿನ್ ಆರ್.ಕೈದೊಟ್ಲು
















