ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 28 MARCH 2024
SHIMOGA : ದುರ್ಗಿಗುಡಿ ದುರ್ಗಮ್ಮ ಜಾತ್ರೆ ವೇಳೆ ಮಹಿಳೆಯೊಬ್ಬರ ಚಿನ್ನದ ಸರ ಕಳ್ಳತನವಾಗಿದೆ. ದೇಗುಲದ ಮುಂದೆ ನಿಂತಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ.
ಬಾಪೂಜಿನಗರ ನಿವಾಸಿ ಯಶೋಧ ಅವರು ತನ್ನ ತಂಗಿ ಮತ್ತು ಅಕ್ಕನ ಮಗಳ ಜೊತೆಗೆ ದುರ್ಗಿಗುಡಿಯ ದುರ್ಗಮ್ಮ ಜಾತ್ರೆಗೆ ಆಗಮಿಸಿದ್ದರು. ದೇವರ ದರ್ಶನಕ್ಕೆಂದು ದೇಗುಲದ ಮುಂದೆ ನಿಂತಿದ್ದಾಗ ಯಶೋಧ ಅವರ ಭುಜದ ಮೇಲೆ ಲಕ್ಷ್ಮಿ ಪೆಂಡೆಂಟ್ ಸಿಕ್ಕಿಬಿದ್ದಿತ್ತು. ಇದನ್ನು ಗಮನಿಸಿದ ತಂಗಿ ಯಶೋಧ ಅವರಿಗೆ ತಿಳಿಸಿದ್ದರು. ಪರಿಶೀಲಿಸಿದಾಗ ಕೊರಳಲ್ಲಿದ್ದ ಚಿನ್ನದ ಸರ ನಾಪತ್ತೆಯಾಗಿತ್ತು.
ಜಾತ್ರೆಗೆ ತೆರಳಿದ್ದ ಸಂದರ್ಭ 38 ಗ್ರಾಂ ತೂಕದ ಚಿನ್ನದ ಸರ ಕಳ್ಳತನ ಮಾಡಲಾಗಿದೆ. ಇದರ ಮೌಲ್ಯ ಅಂದಾಜು 1.50 ಲಕ್ಷ ರೂ. ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಈಶ್ವರಪ್ಪ ಬೈಕ್ ರ್ಯಾಲಿ ವಿರುದ್ದ ಪ್ರಕರಣ ದಾಖಲು, ಎರಡು ಕಾರಣ ನೀಡಿದ ಚುನಾವಣಾಧಿಕಾರಿಗಳು, ಏನದು?
LATEST NEWS
- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

About The Editor
ನಿತಿನ್ ಆರ್.ಕೈದೊಟ್ಲು






