ಶಿವಮೊಗ್ಗ: ದೀಪಾವಳಿ ಸಂದರ್ಭ ಮಲೆನಾಡು ಭಾಗದಲ್ಲಿ ಗೋಪೂಜೆ (Gow Pooje) ನೆರವೇರಿಸಲಾಗುತ್ತದೆ. ಶಿವಮೊಗ್ಗ ನಗರದಲ್ಲಿ ಇವತ್ತು ಗೋವರ್ಧನ ಟ್ರಸ್ಟ್ ವತಿಯಿಂದ ದೀಪಾವಳಿ ಗೋಪೂಜೆ ಆಯೋಜಿಸಲಾಗಿತ್ತು.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ವಿನೋಬನಗರ ಶಿವಾಲಯದ ಆವರಣದಲ್ಲಿ ಯಡಿಯೂರಿನ ರಂಭಾಪುರಿ ಶಾಖಾಮಠದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಬಿಳಿಕಿ ಹಿರೇಮಠದ ಶ್ರೀರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಗೋಪೂಜೆ ನೆರವೇರಿಸಲಾಯಿತು. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಈ.ಕಾಂತೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಗೋವುಗಳಿಗೆ ಪೂರ್ಣ ರಕ್ಷಣೆ, ಸಾಧು – ಸಂತರಿಗೆ ಪೂರ್ಣ ಭಕ್ತಿ, ದೇವರುಗಳಿಗೆ ಗೌರವ ಸಿಗದಿರುವುದು ಸ್ವಾತಂತ್ರ್ಯ ಸಿಕ್ಕರು ಪೂರ್ಣ ವ್ಯರ್ಥ. ಕೋಟ್ಯಂತರ ಜನರು ಗೋವಿಗೆ ತಾಯಿಯಂತೆ ಗೌರವಿಸುತ್ತಾರೆ. ಅದರೆ ‘ಯಾರೋ ಗೋವುಗಳನ್ನು ಕಡಿದು ತಿನ್ನುತ್ತಾರೆ, ತಿನ್ನಲಿಬಿಡಿʼ ಎಂದು ಉನ್ನತ ಹುದ್ದೆಯಲ್ಲಿರುವವರು ಹೇಳುತ್ತಾರೆ. ಇದು ಹಿಂದುಗಳ ಭಾವನಕ್ಕೆ ಧಕ್ಕೆ ತರುತ್ತಿದೆ.
- ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ
![]()
ನಗರದ ಆರು ಕಡೆ ಗೋವರ್ಧನ ಸಮಿತಿ ವತಿಯಿಂದ ಗೋ ಪೂಜೆ ಆಯೋಜಿಸಲಾಗಿದೆ. ವಿನೋಬನಗರದ ಶಿವಾಲಯ, ರವೀಂದ್ರನಗರದ ಗಣಪತಿ ದೇವಾಲಯ, ಶಾಂತಿನಗರದ ಶನೈಶ್ಚರ ದೇವಾಲಯ, ಸ್ವಾಮಿ ವಿವೇಕಾನಂದ ಬಡಾವಣೆಯ ನಾಗಸುಬ್ರಹ್ಮಣ್ಯ ದೇವಸ್ಥಾನ, ಹರಿಗೆಯ ಪಾರ್ವತಮ್ಮ ದೇವಾಲಯ ಹಾಗೂ ವಾಸವಿ ಪಬ್ಲಿಕ್ ಶಾಲೆ ಅವರಣದಲ್ಲಿ ಗೋ ಪೂಜೆ ಆಯೋಜಿಸಲಾಗಿದೆ.




ಇದನ್ನೂ ಓದಿ » ದೀಪಾವಳಿ: ಶಿವಮೊಗ್ಗ, ತಾಳಗುಪ್ಪದಿಂದ ಮೆಜಸ್ಟಿಕ್, ಯಶವಂತಪುರ, ಕಂಟೋನ್ಮೆಂಟ್‌ಗೆ ವಿಶೇಷ ರೈಲುಗಳು
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು





