ಹೊಸ ವರ್ಷ, ಶಿವಮೊಗ್ಗದ ಜಿಮ್‌ಗಳು, ಯೋಗ ತರಬೇತಿ ಕೇಂದ್ರಗಳಿಗೆ ಅಡ್ಮಿಷನ್‌ ಹೆಚ್ಚಳ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 1 JANUARY 2023

SHIMOGA : ಹೊಸ ವರ್ಷದ ಆರಂಭದಲ್ಲಿ ಜಿಮ್‌ಗಳ ಮೆಂಬರ್‌ಶಿಪ್‌ಗೆ ಡಿಮಾಂಡ್‌ ಹೆಚ್ಚಾಗಿದೆ. ನಗರದ ಬಹುತೇಕ ಜಿಮ್‌ಗಳಿಗೆ ಹೊಸ ವರ್ಷದಂದು ಹೊಸ ಅಡ್ಮಿಷನ್‌ಗಳಾಗಿವೆ. ಈ ವಾರದಲ್ಲಿ ಮತ್ತಷ್ಟು ಮಂದಿ ಜಿಮ್‌ ಸೇರುವ ಸಾಧ್ಯತೆ ಇದೆ.

ಜಿಮ್‌, ಯೋಗ ಕ್ಲಾಸ್‌ನತ್ತ ಹೆಚ್ಚಿದ ಆಸಕ್ತಿ

ಬಹುತೇಕರು ಹೊಸ ವರ್ಷಕ್ಕೆ ಹೊಸ ನಿರ್ಣಯಗಳನ್ನು ಕೈಗೊಳ್ಳುತ್ತಾರೆ. ಆರೋಗ್ಯ ಮತ್ತು ಫಿಟ್ನೆಸ್‌ ಕುರಿತು ನಿರ್ಣಯ ತೆಗೆದುಕೊಳ್ಳುವವರು ಜಿಮ್‌ ಮತ್ತು ಯೋಗ ಕ್ಲಾಸ್‌ಗಳತ್ತ ಮುಖ ಮಾಡುತ್ತಾರೆ. ಶಿವಮೊಗ್ಗ ನಗರದಲ್ಲಿ 25ಕ್ಕೂ ಹೆಚ್ಚು ಜಿಮ್‌ಗಳಿವೆ. ಇಂದಿನಿಂದ ಎಲ್ಲೆಡೆ ಹೊಸ ಅಡ್ಮಿಷನ್‌ಗಳು ಆರಂಭವಾಗಿವೆ. ಈ ಪ್ರಕ್ರಿಯೆ ಇನ್ನೂ ಒಂದು ವಾರ ಮುಂದುವರೆಯಲಿದೆಯಂತೆ.

Bodybuilder Dyani from Shimoga

ಪ್ರತಿ ತಿಂಗಳು ನಮ್ಮ ಜಿಮ್‌ಗೆ 10 ರಿಂದ 15 ಮಂದಿ ಹೊಸಬರು ಸೇರ್ಪಡೆಯಾಗುತ್ತಾರೆ. ಹೊಸ ವರ್ಷದಲ್ಲಿ ದಾಖಲಾತಿ ಎರಡು ಪಟ್ಟಾಗಲಿದೆ. ಇದರಲ್ಲಿ ಕೆಲವರು ನಿರಂತರವಾಗಿ ಜಿಮ್‌ಗೆ ಬರುತ್ತಾರೆ.ಡ್ಯಾನಿ, ಡಿ ಫಿಟ್‌ ಜಿಮ್‌, ಶಿವಮೊಗ್ಗ (ಮೊ. 9972545427)

ಯೋಗ ಕ್ಲಾಸ್‌ಗು ಡಿಮಾಂಡ್‌

ಇನ್ನು, ನಗರದಲ್ಲಿ ಯೋಗ ಕ್ಲಾಸ್‌ಗಳ ದಾಖಲಾತಿಗು ಡಿಮಾಂಡ್‌ ಹೆಚ್ಚಾಗಿದೆ. ವಿವಿಧೆಡೆ ತರಬೇತುದಾರರನ್ನು ಸಂಪರ್ಕಿಸಿ ಹಲವರು ಯೋಗ ಕ್ಲಾಸ್‌ಗಳಿಗೆ ದಾಖಲಾಗುತ್ತಿದ್ದಾರೆ. ಇಲ್ಲಿಯು ದಾಖಲಾತಿ ಸಂಖ್ಯೆ ಪ್ರತಿ ತಿಂಗಳಿಗಿಂತಲು ಹೆಚ್ಚಾಗಿದೆ.

ವರ್ಷಾರಂಭದಲ್ಲಿ ಹುಮ್ಮಸ್ಸಿನಿಂದ ಜಿಮ್‌, ಯೋಗ ಕೇಂದ್ರಗಳಿಗೆ ದಾಖಲಾಗುತ್ತಾರೆ. ಈ ಪೈಕಿ ಹಲವರು ವಿವಿಧ ಕಾರಣಕ್ಕೆ ಆರಂಭದಲ್ಲೇ ಜಿಮ್‌, ಯೋಗ ಕೇಂದ್ರಗಳಿಗೆ ಗುಡ್‌ ಬೈ ಹೇಳುತ್ತಾರೆ. ಬೆರಳೆಣಿಕೆ ಮಂದಿ ತರಬೇತಿ ಮುಂದುವರೆಸಿ ಫಿಟ್ನೆಸ್‌ ಕಾಪಾಡಿಕೊಳ್ಳುತ್ತಾರೆ.

ಇದನ್ನೂ ಓದಿ – ಶಿವಮೊಗ್ಗದ ಸ್ಮಾರ್ಟ್‌ ಸಿಟಿ ಗಡಿಯಾರದಲ್ಲಿ ದಿಕ್ಕಿಗೊಂದು ಟೈಮ್‌

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment