SHIVAMOGGA LIVE NEWS | 31 MARCH 2024
SHIMOGA : ಸಾಹಿತಿ ಡಾ. ಮೋಹನ ಚಂದ್ರಗುತ್ತಿ ಅವರ ‘ಹಸೆ ಚಿತ್ತಾರ’ ಹಾಗೂ ‘ಹೆಚ್ಚೆಯ ಶಿವಪ್ಪ ಮಾಸ್ತಾರ್ ಅವರ ಡೊಳ್ಳಿನ ಪದಗಳು’ ಪುಸ್ತಕ ಬಿಡುಗಡೆ ಮಾಡಲಾಯಿತು. ಸಹ್ಯಾದ್ರಿ ಕಲಾ ಕಾಲೇಜು, ಗೀತಾಂಜಲಿ ಪ್ರಕಾಶನ, ಶಿಕಾರಿಪುರ ಸುವ್ವಿ ಪ್ರಕಾಶನ ವತಿಯಿಂದ ಸಹ್ಯಾದ್ರಿ ಕಲಾ ಕಾಲೇಜು ಆವರಣದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಯಾರೆಲ್ಲ ಏನೇನು ಹೇಳಿದರು?
ಮನುಷ್ಯ, ಸಂಬಂಧಗಳನ್ನು ಕಳೆದುಕೊಳ್ಳುವ ಕಾಲಘಟ್ಟದಲ್ಲಿದ್ದಾನೆ. ಇಂತಹ ಸಂದರ್ಭ ವೇದನೆ ಹಾಗೂ ಸಂವೇದನೆಗಳನ್ನು ದಾಖಲಿಸಿಡಲು ಹೊರಟಿರುವುದು ದೊಡ್ಡ ಸಾಧನೆ. ಶಿವಪ್ಪ ಮಾಸ್ತಾರ್ ಅವರು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಅರ್ಹರು. ಆದರೆ, ಅಂದಿನ ಕಾಲಘಟ್ಟದಲ್ಲಿ ಸಮರ್ಪಕ ವೇದಿಕೆ ಸಿಗಲಿಲ್ಲ.ಜಿ.ಪ್ರಶಾಂತ ನಾಯಕ, ಪ್ರಾಧ್ಯಾಪಕ, ಕುವೆಂಪು ವಿಶ್ವವಿದ್ಯಾಲಯ ಕನ್ನಡ ವಿಭಾಗ
ಮೋಹನ್ ಚಂದ್ರಗುತ್ತಿ ಅವರು ದಾಖಲಿಸಿರುವ ಡೊಳ್ಳಿನ ಪದಗಳು ಶಿವಪ್ಪ ಮಾಸ್ತಾರರ ಸ್ವಂತ ರಚನೆ. ಡೊಳ್ಳು ಹಾಲುಮತ ಸಮುದಾಯದ ಆರಾಧ್ಯ ದೈವ. ಇದನ್ನು ಮಲೆನಾಡಿನ ದೀವರು ಅತ್ಯಂತ ಪ್ರೀತಿಯಿಂದ ಗೌರವಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿದ್ದಾರೆ. ಜನಪದ ಕಲೆ, ಸಂಸ್ಕೃತಿ ಶ್ರಮ ಜೀವಿಗಳಲ್ಲಿ ಮಾತ್ರ ಕಾಣಲು ಸಾಧ್ಯ. ದುಡಿಯುವ ವರ್ಗಗಳಲ್ಲಿ ಮಾತ್ರ ಅದ್ಬುತವಾದ ಜನಪದ ಸಂಪತ್ತು, ಸಿರಿವಂತಿಕೆ ಇರುತ್ತದೆ.ಡಾ.ಜಿ.ಸಣ್ಣಹನುಮಪ್ಪ, ಜನಪದ ತಜ್ಞ
ನನ್ನ ಅವ್ವ (ರೇಣುಕಮ್ಮ ಶಿವಪ್ಪ ಮಾಸ್ತಾರ್) ಕೂಡ ದೊಡ್ಡ ಕಲಾವಿದೆ. ಆಕೆಯೇ, ನನಗೆ ಬರೆಯಲು ಶಕ್ತಿ ತುಂಬಿದವಳು. ಗರ್ಭಿಣಿ ಆಗಿದ್ದಾಗಲೇ ಕಾದಂಬರಿಗಳನ್ನು ಓದುತ್ತ, ನನಗೆ ಸಾಹಿತ್ಯದ ಅರಿವು ಮೂಡಿಸಿದಳು. ನಾನು ಜನಿಸಿದಾಗ ನನ್ನ ಮನೆಯಲ್ಲಿ ಹಿಡಿಯಷ್ಟು ಅನ್ನ ಇರಲಿಲ್ಲ. ಇದು ನನಗೆ ಕೊರತೆಯಾಗಿ ಕಾಣ ಕೂಡದು ಎಂದು ಅಕ್ಷರ ಕಲಿಸಿ, ಸ್ವಾಭಿಮಾನದ ನೆಲೆಯನ್ನು ರೂಪಿಸಿ ಸುಂದರ ಬದುಕನ್ನು ಕಲ್ಪಿಸಿಕೊಟ್ಟಳು. ಅನೇಕ ಸವಾಲುಗಳ ಮಧ್ಯೆ ‘ಹಸೆ ಚಿತ್ತಾರ’ ಪುಸ್ತಕ ಬಿಡುಗಡೆಗೊಳಿಸಿದ್ದೇನೆ.ಮೋಹನ ಚಂದ್ರಗುತ್ತಿ, ಸಾಹಿತಿ
ಸಾಹಿತಿ ಮೋಹನ್ ಚಂದ್ರಗುತ್ತಿ ಅವರ ತಾಯಿ ರೇಣುಕಮ್ಮ ಶಿವಪ್ಪ ಮಾಸ್ತಾರ್, ಸುಮಿತ್ರಾ ಮೋಹನ್ ಚಂದ್ರಗುತ್ತಿ, ಗೀತಾಂಜಲಿ ಪ್ರಕಾಶನದ ಜಿ.ಬಿ.ಟಿ.ಮೋಹನ್, ಸುವ್ವಿ ಪ್ರಕಾಶನದ ಬಿ.ಎನ್.ಸುನಿಲ್ ಕುಮಾರ್, ಅಣ್ಣಪ್ಪ ಮಳೀಮಠ, ಟಿ.ಶೃಂಗಶ್ರೀ ಇದ್ದರು.
ಇದನ್ನೂ ಓದಿ – ಸಿನಿಮಾ ನಟ, ರಂಗಭೂಮಿ ಕಲಾವಿದ ಯೇಸು ಪ್ರಕಾಶ್ ಇನ್ನಿಲ್ಲ, ಸಾಗರದಲ್ಲಿ ಅಂತಿಮ ದರ್ಶನ, ರಂಗ ನಮನ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200