ಶಿವಮೊಗ್ಗದ NH ಆಸ್ಪತ್ರೆಯಿಂದ ಕಾರ್ಯಾಗಾರ, 40 ಮಕ್ಕಳಿಗೆ ಮಾತ್ರ ಅವಕಾಶ, ಏನೇನಿರುತ್ತೆ?

Published On : ಮಾರ್ಚ್ 28, 2026

Published By : ನಿತಿನ್‌ ಆರ್‌.ಕೈದೊಟ್ಲು 

ಶಿವಮೊಗ್ಗ: ಮಕ್ಕಳಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ನಾರಾಯಣ ಹೆಲ್ತ್ ಸಂಸ್ಥೆಯು ಶಿವಮೊಗ್ಗದಲ್ಲಿ 5 ರಿಂದ 12 ವರ್ಷದೊಳಗಿನ ಮಕ್ಕಳಿಗಾಗಿ ಒಂದು ವಾರದ ಹೆಲ್ದಿ ಕಿಡ್ಸ್ ಗೇಟ್‌ವೇ (Healthy Kids) ಕಾರ್ಯಾಗಾರ ಆಯೋಜಿಸಿದೆ.

Sunrise Facility Services, Sri sai Trust Shimoga

ಕಾರ್ಯಾಗಾರವು ಮಾರ್ಚ್ 30 ರಿಂದ ಏಪ್ರಿಲ್ 4ರವರೆಗೆ, ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ ನಗರದ ಕುವೆಂಪು ರಸ್ತೆಯಲ್ಲಿರುವ ನಂಬಲ ಏಟ್ರಿಯಂನಲ್ಲಿ ನಡೆಯಲಿದೆ. ಸಂವಾದಾತ್ಮಕ ತರಗತಿ ಮತ್ತು ಚಟುವಟಿಕೆ ಮೂಲಕ ಮಕ್ಕಳಲ್ಲಿ ಮೋಜು, ಕಲಿಕೆ ಮತ್ತು ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸುವುದು ಕಾರ್ಯಕ್ರಮದ ಉದ್ದೇಶವಾಗಿದೆ.

Sahyadri-Narayana-Multispeciality-hospital-NH-Hospital.

ವೈಯಕ್ತಿಕ ಸ್ವಚ್ಛತೆ ಬಗ್ಗೆ ಮಕ್ಕಳಿಗೆ ಶಿಕ್ಷಣ ನೀಡಲು ಕ್ಲೀನ್ ಆ್ಯನ್ ಶೈನ್ ಹ್ಯಾಬಿಟ್ಸ್, ಆರೋಗ್ಯಕರ ಆಹಾರ ಪದ್ಧತಿ ಪ್ರೋತ್ಸಾಹಿಸಲು ಈಟ್ ಸ್ಮಾರ್ಟ್, ಗೋ ಸ್ಟ್ರಾಂಗ್, ಹಾಗೂ ದೈಹಿಕ ದೃಢತೆ ಉತ್ತೇಜಿಸಲು ಫಿಸಿಯೋಥೆರಪಿ ಆಧಾರಿತ ಮೋಜಿನ ಆಟಗಳನ್ನು ಒಳಗೊಂಡ ಜಂಪ್, ಸ್ಟ್ರೆಚ್ ಆ್ಯಂಡ್ ಪ್ಲೇ ಎಂಬ ವಿಷಯಗಳು ಇರಲಿವೆ.

ಇದನ್ನೂ ಓದಿ – ಕಾರು ಚೇಸ್‌ ಮಾಡಿಕೊಂಡು ಬಂದು ಕಾಚಿನಕಟ್ಟೆ ಬಳಿ ಅಡ್ಡಗಟ್ಟಿ ಗುತ್ತಿಗೆದಾರನ ಮೇಲೆ ಹಲ್ಲೆ

ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲಾ ಮಕ್ಕಳಿಗೆ ಉಚಿತ ದಂತ ತಪಾಸಣೆ ಮಾಡಲಾಗುತ್ತದೆ. ಶಿಬಿರದಲ್ಲಿ 40 ಮಕ್ಕಳಿಗೆ ಮಾತ್ರ ಅವಕಾಶ ಇರಲಿದೆ. ₹199 ಪ್ರವೇಶ ಶುಲ್ಕ ಪಾವತಿಸಿ ಹೆಸರು ನೋಂದಾಯಿಸಿಕೊಳ್ಳಬಹುದು. ಆಸಕ್ತ ಪೋಷಕರು ಹೆಚ್ಚಿನ ಮಾಹಿತಿಗಾಗಿ 98864 13131ಗೆ ಸಂಪರ್ಕಿಸಬಹುದು.

Number 1 News Website in shimoga - Shivamogga Live
JNN College of Engineering Admissions started

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಮಾರ್ಚ್ 28, 2026

Leave a Comment