SHIVAMOGGA LIVE NEWS | 11 JULY 2024
FATAFAT NEWS : ಶಿವಮೊಗ್ಗ ಜಿಲ್ಲೆಯ ಮೂರು ಪ್ರಮುಖ ಸುದ್ದಿಗಳು ಇಲ್ಲಿವೆ. ಒಂದೊಂದೆ ಸುದ್ದಿಯನ್ನು ನಂಬರ್ ಸಹಿತ ಪ್ರಕಟಿಸಲಾಗಿದೆ.
ಜು.19ಕ್ಕೆ ಹೆಜ್ಜಾರು ಸಿನಿಮಾ ರಿಲೀಸ್
SHIMOGA : ಕನ್ನಡದ ಮೊಟ್ಟಮೊದಲ ಪ್ಯಾರಲಲ್ ಲೈಫ್‌ನ ಕಥೆಯುಳ್ಳ ಹೆಜ್ಜಾರು ಸಿನಿಮಾ (Movie) ಜು.19ರಂದು ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಹರ್ಷಪ್ರಿಯ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಬ್ಬರ ಜೀವನದಲ್ಲಿ ನಡೆದ ಘಟನೆಯೇ, ವಿಭಿನ್ನ ಕಥೆ ಹೊಂದಿರುವ ಕನ್ನಡದ ಮೊದಲ ಪ್ಯಾರಲಲ್ ಲೈಫ್ ಆಧಾರಿತ ಸಿನಿಮಾ ಇದು. ಸಿನಿಮಾ ಕ್ಷೇತ್ರದ ಹಿರಿಯರು ಹಾಗೂ ಹೊಸಬರು ಸೇರಿ ಈ ಸಿನಿಮಾ ನಿರ್ಮಾಣ ಮಾಡಿರುವುದು ವಿಶೇಷ. ಈಗಾಗಲೇ ಚಿತ್ರದ ಟೀಸರ್ ಅತ್ಯಂತ ಯಶಸ್ವಿಯಾಗಿದೆ. ಇತ್ತೀಚೆಗೆ ಕಿಚ್ಚ ಸುದೀಪ್ ಚಿತ್ರದ ಟೀಸರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೂರು ಹಾಡುಗಳಿದ್ದು, ನಾನೇ ಸಾಹಿತ್ಯ ಬರೆದಿದ್ದೇನೆ ಎಂದು ತಿಳಿಸಿದರು. ನಾಯಕಿ ಶ್ವೇತಾ ಡಿಸೋಜ ಸುದ್ದಿಗೋಷ್ಠಿಯಲ್ಲಿದ್ದರು.
ಸಾಹಸ ಪ್ರವಾಸೋದ್ಯಮ ಕಾರ್ಯಾಗಾರ
SHIMOGA : ಜಿಲ್ಲೆಯಲ್ಲಿ ಪ್ರವಾಸೋದ್ಯಮ ಉತ್ತೇಜಿಸುವ ನಿಟ್ಟಿನಲ್ಲಿ ಸಾಹಸ ಪ್ರವಾಸೋದ್ಯಮ ಚಟುವಟಿಕೆಗಳನ್ನು ಕೆಟಿಟಿಎಫ್ ಕಾಯ್ದೆಯಡಿ ನೊಂದಣಿ ಮಾಡಿಸಿಕೊಂಡು ಪ್ರಮಾಣಪತ್ರ ಪಡೆಯಲು ಆಸಕ್ತ ಉದ್ದಿಮೆದಾರರಿಗೆ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯು ಜು. 16ರ ಬೆಳಗ್ಗೆ 10ಕ್ಕೆ ಸಂತೆ ಕಡೂರಿನ ಮಲ್ನಾಡ್ ಶೈರ್ ಸಭಾಂಗಣದಲ್ಲಿ ಕಾರ್ಯಾಗಾರ ಆಯೋಜಿಸಿದೆ. ಕಾರ್ಯಾಗಾರದಲ್ಲಿ ಸಾಹಸ ಪ್ರವಾಸೋದ್ಯಮ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವವರು, ಸಾಹಸ ಪ್ರವಾಸೋದ್ಯಮ ಚಟುವಟಿಕೆಗಳನ್ನು ನಡೆಸಲು ಆಸಕ್ತಿಯುಳ್ಳ ಉದ್ಯಮದಾರರು ಅಥವಾ ಪ್ರವಾಸೋದ್ಯಮ ಪಾಲುದಾರರು ಭಾಗವಹಿಸಬಹುದು. ಮಾಹಿತಿಗೆ ದೂ. 08182 251444, 70262 96510 ಸಂಪರ್ಕಿಸಿ.
ಗುರುದಕ್ಷಿಣೆ ಯಕ್ಷಗಾನ ತಾಳಮದ್ದಲೆ
SHIMOGA : ಸಾಗರ ರಸ್ತೆಯ ಬಿಎಸ್‌ಎನ್‌ಎಲ್ ಕಚೇರಿ ಬಳಿ ಇರುವ ಹವ್ಯಕ ಭವನದಲ್ಲಿ ಜು.13ರ ಸಂಜೆ 5ಕ್ಕೆ ಹೊಸೂರಿನ ಭಾರತೀ ಕಲಾ ಮಂಡಲದ ಮಹಿಳಾ ಕಲಾವಿದರು ‘ಗುರುದಕ್ಷಿಣೆ’ ಯಕ್ಷಗಾನ ತಾಳಮದ್ದಲೆ ನಡೆಸಿಕೊಡಲಿದ್ದಾರೆ. ಇದನ್ನು ಹೊಸೂರಿನ ಗುರುನಂದನ ನಿರ್ದೇಶಿಸಿದ್ದು, ಸೃಜನ್ ಗಣೇಶ್ ಹೆಗಡೆ ಭಾಗವತಿಕೆಯಿದೆ, ಚಂಡೆಯಲ್ಲಿ ಕುಮಾರ ಶ್ರೀವತ್ಸ, ಮದ್ದಳೆಯಲ್ಲಿ ಮಂಜುನಾಥ ಗುಡ್ಡೆದಿಂಬ ಸಹಕರಿಸಲಿದ್ದಾರೆ. ಮುಮ್ಮೇಳದಲ್ಲಿ ಕುಸುಮಾ ಶ್ರೀಕಾಂತ ರಾವ್, ಅಂಬಿಕಾ ಸತೀಶ್ಚಂದ್ರ, ವಾಗೇಶ್ವರಿ ಸುರೇಶ್ ಭಟ್, ನಯನತಾರಾ ಸತೀಶ್ ಮುಂತಾದವರಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗ MLA ನೇತೃತ್ವದಲ್ಲಿ ತುರ್ತು ಮೀಟಿಂಗ್, ಅಧಿಕಾರಿಗಳಿಗೆ ಖಡಕ್ ಸೂಚನೆ, ಏನೆಲ್ಲ ಹೇಳಿದ್ರು?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200