ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 8 MARCH 2023
SHIMOGA : ನಗರದಲ್ಲಿ ಅತ್ಯಂತ ವಿಜೃಂಭಣೆಯಿಂದ ಹೋಳಿ ಹಬ್ಬ (Holi Celebration) ಆಚರಣೆ ಮಾಡಲಾಯಿತು. ಬಣ್ಣದ ಹಬ್ಬದ ಅಂಗವಾಗಿ ಗೋಪಿ ಸರ್ಕಲ್ ನಲ್ಲಿ ಡಿಜೆ ವ್ಯವಸ್ಥೆ ಮಾಡಲಾಗಿತ್ತು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಗೋಪಿ ಸರ್ಕಲ್ ನಲ್ಲಿ ಹಿಂದೂ ಕೇಸರಿ ಅಲಂಕಾರ ಸಮಿತಿ ವತಿಯಿಂದ ಹೋಳಿ ಹಬ್ಬಕ್ಕೆ (Holi Celebration) ವ್ಯವಸ್ಥೆ ಮಾಡಲಾಗಿತ್ತು. ದೊಡ್ಡ ಸಂಖ್ಯೆಯಲ್ಲಿ ಜನ ಪಾಲ್ಗೊಂಡು ಸಂಭ್ರಮಾಚರಣೆ ಮಾಡಿದರು.
ಡಿಜೆ ಹಾಡಿಗಾಗಿ ದೊಡ್ಡ ಮೈಕ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಸರ್ಕಲ್ ನಲ್ಲೇ ರೈನ್ ಡಾನ್ಸ್ ಫೀಲ್ ನೀಡಲು, ಅಲ್ಲಲ್ಲಿ ಷವರ್ ಮತ್ತು ಸ್ಪ್ರಿಂಕ್ಲರ್ ಗಳನ್ನು ಅಳವಡಿಸಲಾಗಿತ್ತು. ಆಗಾಗ ಟ್ಯಾಂಕರ್ ಗಳ ಮೂಲಕ ನೀರು ಹರಿಸಲಾಗುತ್ತಿತ್ತು.
ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ವಿಭಾಗ ಮಾಡಲಾಗಿತ್ತು. ಬ್ಯಾರಿಕೇಡ್ ಗಳನ್ನು ಅಳವಡಿಸಿ, ಪೊಲೀಸರು ಮತ್ತು ಹಿಂದೂ ಸಂಘಟನೆ ಕಾರ್ಯಕರ್ತರನ್ನು ರಕ್ಷಣಾ ವ್ಯವಸ್ಥೆಗೆ ನಿಯೋಜಿಸಲಾಗಿತ್ತು.
ಮಹಿಳೆಯರಿಗೆ ನಿಯೋಜನೆ ಮಾಡಿದ್ದ ಸ್ಥಳದಲ್ಲಿ ನಗರದ ವಿವಿಧೆಡೆಯಿಂದ ಆಗಮಿಸಿದ್ದ ಮಹಿಳೆಯರು, ಯುವತಿಯರು, ಕಾಲೇಜು ವಿದ್ಯಾರ್ಥಿನಿಯರು ಕುಣಿದು ಕುಪ್ಪಳಿಸಿದರು. ಕೆಲವು ಹಾಡುಗಳಿಗೆ ಧ್ವನಿಯಾಗಿ ಹಜ್ಜೆ ಹಾಕಿದರು. ಕೆಲವರು ತಮ್ಮ ಮಕ್ಕಳನ್ನು ಕರೆತಂದು ಓಕಳಿ ಆಟವಾಡಿ ಖುಷಿ ಪಟ್ಟರು.
ಪುರುಷರ ವಿಭಾಗದಲ್ಲಿಯೂ ಸಡಗರ ಜೋರಿತ್ತು. ಯುವಕರು ಹಾಡುಗಳಿಗೆ ಭರ್ಜರಿಯಾಗಿ ಹೆಜ್ಜೆ ಹಾಕಿದರು. ಆಗಾಗ ಕೆಲವು ಯುವಕರನ್ನು ಮೇಲಕ್ಕೆ ತೂರುವುದು, ಶರ್ಟುಗಳನ್ನು ತೆಗೆದು ಗಿರಗಿರ ತಿರುಗಿಸಿ ಖುಷಿ ಪಡುತ್ತಿದ್ದರು.
ಹಿಂದೂ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಆಗಾಗ ಘೋಷಣೆಗಳನ್ನು ಕೂಗಿಸುತ್ತಿದ್ದರು. ಬಳಿಕ ಪುನಃ ವಿವಿಧ ಡಿಜೆ ಹಾಡುಗಳನ್ನು ಹಾಕಿ ಯುವಕರು ಮೈಮರೆತು ಕುಣಿಯುವಂತೆ ಮಾಡುತ್ತಿದ್ದರು.
ALSO READ : ಆರು ವರ್ಷದ ಹಿಂದಿನ ದಾಖಲೆ ಮುರಿದ ಗೌತಮಿ, ರಾಜ್ಯಮಟ್ಟದಲ್ಲಿ ಶಿವಮೊಗ್ಗದ ಮೂವರಿಗೆ ಚಾಂಪಿಯನ್ ಶಿಪ್
ಹಿಂದೂ ಸಂಘಟನೆಗಳ ಕಾರ್ಯಕರ್ತರೆ ಬಣ್ಣಗಳನ್ನು ಪೂರೈಕೆ ಮಾಡಿದರು. ಆಗಾಗ ವೇದಿಕೆ ಮೇಲಿಂದ ವಿವಿಧ ಬಣ್ಣಗಳನ್ನು ಎರಚಿ, ಎಲ್ಲರೂ ಬಣ್ಣದಲ್ಲಿ ಮಿಂದೇಳುವಂತೆ ಮಾಡಿದರು.
ಕಾರ್ಯಕ್ರಮದ ಹಿನ್ನೆಲೆ ಗೋಪಿ ಸರ್ಕಲ್ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಯಾವುದೆ ಅಹಿತಕರ ಘಟನೆಗಳು ಸಂಭವಿಸಿದಂತೆ ಮುಂಜಾಗ್ರತೆ ವಹಿಸಲಾಗಿತ್ತು.
ಗೋಪಿ ಸರ್ಕಲ್ ನಲ್ಲಿ ಅದ್ಧೂರಿ ಹೋಳಿ ಆಚರಣೆ ಹಿನ್ನೆಲೆ ನೆಹರೂ ರಸ್ತೆ, ಬಾಲರಾಜ ಅರಸ್ ರಸ್ತೆ, ದುರ್ಗಿಗುಡಿ ಸೇರಿದಂತೆ ವಿವಿಧೆಡೆ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಕಾರ್ಯಕ್ರಮಕ್ಕೆ ಬಂದಿದ್ದವರು ಈ ರಸ್ತೆಗಳಲ್ಲಿ ತಮ್ಮ ವಾಹನಗಳ ಪಾರ್ಕಿಂಗ್ ಮಾಡಿದ್ದರು.
ಗೋಪಿ ಸರ್ಕಲ್ ನಲ್ಲಿ ಹೋಳಿ ಆಚರಣೆ ಯನ್ನು ಕಣ್ತುಂಬಿಕೊಳ್ಳಲು ಜನರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ಎಂ.ಜಿ.ಪ್ಯಾಲೇಸ್ ಕಟ್ಟಡ, ಶ್ರೀನಿಧಿ ಮಳಿಗೆ ಇರುವ ಕಟ್ಟಡ ಸೇರಿದಂತೆ ಅಕ್ಕಪಕ್ಕದ ಕಟ್ಟಡಗಳ ಬಾಲ್ಕನಿಯಲ್ಲಿ ನಿಂತು ಜನರು ಆಚರಣೆಯನ್ನು ವೀಕ್ಷಿಸಿದರು.
ಮೈತುಂಬ ಬಣ್ಣ ಹಚ್ಚಿಕೊಂಡ ಜನರು, ಸೆಲ್ಫಿ, ಫೋಟೊಗಳನ್ನು ಕ್ಲಿಕ್ಕಿಸಿಕೊಂಡು ಖುಷಿ ಪಟ್ಟರು. ಡಾನ್ಸ್ ಮಾಡುವುದನ್ನು ಕೂಡ ಮೊಬೈಲ್ ಗಳನ್ನು ರೆಕಾರ್ಡ್ ಮಾಡಿಕೊಂಡು ಸಂಭ್ರಮಿಸಿದರು.
ಬೆಳಗ್ಗೆ 9 ಗಂಟೆಯಿಂದಲೇ ಗೋಪಿ ಸರ್ಕಲ್ ನಲ್ಲಿ ಹೋಳಿ ಹಬ್ಬ ಆಚರಣೆ ಆರಂಭವಾಗಿತ್ತು. ಮಧ್ಯಾಹ್ನ 12 ಗಂಟೆವರೆಗೆ ಅಚರಣೆಗೆ ಅವಕಾಶ ಕಲ್ಪಿಸಲಾಗಿತ್ತು. ಹೀಗಾಗಿ ದೊಡ್ಡ ಸಂಖ್ಯೆಯ ಜನರು ಸುಸ್ತಾಗುವ ತನಕ ಕುಣಿದು ಕುಪ್ಪಳಿಸಿದರು.
ಇತ್ತ ಗೋಪಿ ಸರ್ಕಲ್ ನಲ್ಲಿ ಡಿಜೆಗೆ ಯುವಕರ ಕುಣಿತ ಸಾಮಾಜಿಕ ಜಾಲತಾಣಗಳಲ್ಲ ವೈರಲ್ ಆಗಿದೆ. ಇನ್ ಸ್ಟಾಗ್ರಾಂ, ಫೇಸ್ ಬುಕ್, ವಾಟ್ಸಪ್ ಗಳಲ್ಲಿ ವಿಡಿಯೋ, ಫೋಟೊಗಳು ಹರಿದಾಡುತ್ತಿವೆ.