ಸಂಬಂಧಿಯ ಮನೆಯಿಂದ ಮರಳಿದ ಕುಟಂಬಕ್ಕೆ ಕಾದಿತ್ತು ಆಘಾತ, ಪೊಲೀಸ್‌ ಠಾಣೆಗೆ ದೌಡು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

‌SHIVAMOGGA LIVE NEWS | 9 NOVEMBER 2023

SHIMOGA : ಮನೆ ಬಾಗಿಲಿನ ಬೀಗ ಮುರಿದು 1.41 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ (House Theft) ಮಾಡಲಾಗಿದೆ. ಮನೆಯವರೆಲ್ಲ ದಾವಣಗೆರೆಯಲ್ಲಿರುವ ಸಂಬಂಧಿಯ ಮನೆಗೆ ತೆರಳಿದ್ದಾಗ ಘಟನೆ ಸಂಭವಿಸಿದೆ.

ಶಿವಮೊಗ್ಗ ನಗರದ ಮಾರ್ನಮಿಬೈಲು 2ನೇ ಅಡ್ಡರಸ್ತೆಯ ಸೋಮಶೇಖರ್‌ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ. ನ.6ರಂದು ಸೋಮಶೇಖರ್‌ ಅವರು ಕುಟುಂಬ ಸಹಿತ ದಾವಣಗೆರೆಯಿಂದ ಮರಳಿದಾಗ ಘಟನೆ ಬೆಳಕಿಗೆ ಬಂದಿದೆ.

ಕಳ್ಳರು ಮನೆ ಬಾಗಿಲಿನ ಬೀಗ ಮುರಿದು ಒಳಗೆ ನುಗ್ಗಿದ್ದಾರೆ. ಫ್ರಿಡ್ಜ್‌ ಮೇಲಿದ್ದ ಬೀರುವಿನ ಬೀಗ ತೆಗೆದು 5 ಸಾವಿರ ರೂ. ನಗದು ಸೇರಿದಂತೆ 1.41 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದೊಯ್ದಿದ್ದಾರೆ. ಘಟನೆ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ 17 ಗಂಟೆ ಕಾರ್ಯಾಚರಣೆ, ಏನೆಲ್ಲ ಪರೀಕ್ಷೆಗಳಾದವು? ಜನಕ್ಕೆ ಏನೆಲ್ಲ ಸಮಸ್ಯೆಯಾಯ್ತು?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment