Shivamogga LiveShivamogga LiveShivamogga Live
Font ResizerAa
  • Home
  • NEWS
    • SHIVAMOGGA CITY
    • CRIME NEWS
    • SPORTS NEWS
    • LIFE STYLE
    • BUSINESS NEWS
    • EDUCATION NEWS
    • AGRICULTURE & APMC
    • FATAFAT NEWS
    • 1 MINUTE NEWS
    • STATE HIGHLIGHTS
    • NATIONAL HIGHLIGHTS
  • TALUK NEWS
    • SHIVAMOGGA
    • BHADRAVATHI
    • THIRTHAHALLI
    • SAGARA
    • HOSANAGARA
    • SORABA
    • SHIKARIPURA
  • POLITICS
  • SPECIALS NEWS
    • AUTOMOBILES
    • CINEMA
    • DEGULA DARSHANA
    • FOOT PATH BADUKU
    • INSPIRATION
    • RANGABHOOMI
    • REAL ESTATE
    • TECHNOLOGY
  • ENGLISH NEWS
  • ADVERTISEMENTS
    • JOB JUNCTION
Shivamogga LiveShivamogga Live
Font ResizerAa
  • Home
  • NEWS
  • TALUK NEWS
  • POLITICS
  • SPECIALS NEWS
  • ENGLISH NEWS
  • ADVERTISEMENTS
  • Home
  • NEWS
    • SHIVAMOGGA CITY
    • CRIME NEWS
    • SPORTS NEWS
    • LIFE STYLE
    • BUSINESS NEWS
    • EDUCATION NEWS
    • AGRICULTURE & APMC
    • FATAFAT NEWS
    • 1 MINUTE NEWS
    • STATE HIGHLIGHTS
    • NATIONAL HIGHLIGHTS
  • TALUK NEWS
    • SHIVAMOGGA
    • BHADRAVATHI
    • THIRTHAHALLI
    • SAGARA
    • HOSANAGARA
    • SORABA
    • SHIKARIPURA
  • POLITICS
  • SPECIALS NEWS
    • AUTOMOBILES
    • CINEMA
    • DEGULA DARSHANA
    • FOOT PATH BADUKU
    • INSPIRATION
    • RANGABHOOMI
    • REAL ESTATE
    • TECHNOLOGY
  • ENGLISH NEWS
  • ADVERTISEMENTS
    • JOB JUNCTION

Home » ಶಿವಮೊಗ್ಗ ಪಾಲಿಕೆಗೆ ಮಿನಿಸ್ಟರ್‌ ದಿಢೀರ್‌ ಭೇಟಿ, ಅಧಿಕಾರಿ ಸಸ್ಪೆಂಡ್‌

ಶಿವಮೊಗ್ಗ ಪಾಲಿಕೆಗೆ ಮಿನಿಸ್ಟರ್‌ ದಿಢೀರ್‌ ಭೇಟಿ, ಅಧಿಕಾರಿ ಸಸ್ಪೆಂಡ್‌

30/11/2024 2:52 PM
ನಿತಿನ್‌ ಕೈದೊಟ್ಲು

SHIVAMOGGA LIVE NEWS | 30 NOVEMBER 2024

ಶಿವಮೊಗ್ಗ : ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಶಿವಮೊಗ್ಗ ಮಹಾನಗರ ಪಾಲಿಕೆಗೆ ದಿಢೀರ್‌ ಭೇಟಿ (Sudden Visit) ನೀಡಿದ್ದರು. ಈ ಸಂದರ್ಭ ಕರ್ತವ್ಯ ಲೋಪದ ಆರೋಪದ ಹಿನ್ನೆಲೆ ಆರೋಗ್ಯ ನಿರೀಕ್ಷಕರೊಬ್ಬರನ್ನು ಸಸ್ಪೆಂಡ್‌ ಮಾಡುವಂತೆ ಕಮಿಷನರ್‌ಗೆ ಸೂಚನೆ ನೀಡಿದರು. ಸಾರ್ವಜನಿಕರಿಗೆ ಸ್ಪಂದಿಸದೆ ಇದ್ದರೆ ಮತ್ತಷ್ಟು ಅಧಿಕಾರಿಗಳ ವಿರುದ್ಧ ಕ್ರಮದ ಎಚ್ಚರಿಕೆ ನೀಡಿದರು.

ಸಹಾಯವಾಣಿ ಕೇಂದ್ರಕ್ಕೆ ಭೇಟಿ

ಮಹಾನಗರ ಪಾಲಿಕೆ ಆವರಣದಲ್ಲಿ ಪರಿಶೀಲನೆ ನಡೆಸಿದ ಸಚಿವ ಭೈರತಿ ಸುರೇಶ್‌, ನೇರವಾಗಿ ಸಹಾಯವಾಣಿ ಕೇಂದ್ರಕ್ಕೆ ತೆರಳಿದರು. ರಿಜಿಸ್ಟರ್‌ನಿಂದ ಈ ಹಿಂದೆ ದೂರು ನೀಡಿದ್ದ ಸಾರ್ವಜನಿಕರೊಬ್ಬರ ನಂಬರ್‌ ಹುಡುಕಿ ಕರೆ ಮಾಡಿದರು. ‘ಸಮಸ್ಯೆ ಪರಿಹಾರವಾಗಿದೆಯೇʼ ಎಂದು ಪ್ರಶ್ನಿಸಿದರು. ‘ಚರಂಡಿ ಕಟ್ಟಿಕೊಂಡು 20 ದಿನವಾಗಿದೆ. ದೂರು ನೀಡಿದರು ಕ್ರಮ ಕೈಗೊಂಡಿಲ್ಲʼ ಎಂದು ಅವರು ಅಲವತ್ತುಕೊಂಡರು.

Minister-Byrathi-Suresh-sudden-visit-to-Shimoga-Palike

ಸಿಟ್ಟಾದ ಸಚಿವ ಬೈರತಿ ಸುರೇಶ್‌, ಆ ಭಾಗದ ಆರೋಗ್ಯ ನಿರೀಕ್ಷಕ ವೇಣುಗೋಪಾಲ್‌ ಎಂಬುವವರನ್ನು ತಕ್ಷಣ ಸಸ್ಪೆಂಡ್‌ ಮಾಡುವಂತೆ ಕಮಿಷನರ್‌ ಕವಿತಾ ಯೋಗಪ್ಪನವರ್‌ ಅವರಿಗೆ ಸೂಚಿಸಿದರು. ಅಲ್ಲದೆ ಸಸ್ಪೆಂಡ್‌ ಮಾಡಿರುವ ಆದೇಶ ಪ್ರತಿಯನ್ನು ತಮಗೆ ವಾಟ್ಸಪ್‌ ಮಾಡುವಂತೆ ಆದೇಶಿಸಿದರು.

ಚರಂಡಿ ಬ್ಲಾಕ್‌ ಆಗಿರುವ ಕುರಿತು 20 ದಿನದ ಹಿಂದೆ ದೂರು ನೀಡಿದ್ದರು ಪರಿಹರಿಸಿಲ್ಲ. ಹಾಗಾಗಿ ಆರೋಗ್ಯ ನಿರೀಕ್ಷಕ ವೇಣುಗೋಪಾಲ್‌ ಎಂಬುವವರನ್ನು ಸಸ್ಪೆಂಡ್‌ ಮಾಡಿದ್ದೇವೆ. ಕಮಿಷನರ್‌ ಸೇರಿದಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸದೆ ಇದ್ದರೆ ಸಸ್ಪೆಂಡ್‌ ಮಾಡುವುದೋ, ವರ್ಗಾವಣೆ ಮಾಡುವುದೋ ಅಥವಾ ಬೇರೆ ಕ್ರಮ ಕೈಗೊಳ್ಳಬೇಕೊ ಎಂಬುದನ್ನು ನಿರ್ಧರಿಸಲಾಗುತ್ತದೆ.

ಬೈರತಿ ಸುರೇಶ್‌, ನಗರಾಭಿವೃದ್ಧಿ ಸಚಿವ

RED-LINE-

Minister Byrathi Suresh Sudden visit to Shimoga Mahanagara Palike

ಖಾತೆ ಮಾಡಿಕೊಡಲು ವಿಳಂಬ, ಖಡಕ್‌ ವಾರ್ನಿಂಗ್‌

ಇದೇ ವೇಳೆ ಹಿರಿಯ ನಾಗರಿಕರೊಬ್ಬರು ಖಾತೆ ಮಾಡಿಕೊಡಲು ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿರುವ ಕುರಿತು ಅಳಲು ತೋಡಿಕೊಂಡರು. ಈ ಬಗ್ಗೆ ಸಚಿವ ಬೈರತಿ ಸುರೇಶ್‌ ಕಂದಾಯ ವಿಭಾಗದ ಅಧಿಕಾರಿಗಳನ್ನು ಪ್ರಶ್ನಿಸಿದಾಗ ‘ಸರ್ವರ್‌ ಡೌನ್‌ʼ ಎಂಬ ಉತ್ತರ ಬಂತು. ‘ಆಗಸ್ಟ್‌ನಲ್ಲಿ ಕೊಟ್ಟ ಅರ್ಜಿ ಇನ್ನು ಇತ್ಯರ್ಥವಾಗಿಲ್ಲ. ಆಗಿನಿಂದಲು ಸರ್ವರ್‌ ಸಮಸ್ಯೆಯನಾ?’ ಎಂದು ಸಿಟ್ಟಾದರು. ಇನ್ನೊಂದು ವಾರದಲ್ಲಿ ಖಾತೆಯಾಗಬೇಕು ಎಂದು ಸೂಚಿಸಿದರು. ಅಲ್ಲದೆ ಹಿರಿಯ ನಾಗರಿಕರಿಗೆ ತಮ್ಮ ಮೊಬೈಲ್‌ ನಂಬರ್‌ ಇರುವ ವಿಸಿಟಿಂಗ್‌ ಕಾರ್ಡ್‌ ಕೊಟ್ಟು, ಅಧಿಕಾರಿಗಳು ಮತ್ತೆ ವಿಳಂಬ ಮಾಡಿದರೆ ಕರೆ ಮಾಡಿ ಎಂದು ತಿಳಿಸಿದರು.

Minister Byrathi Suresh Sudden visit to Shimoga Mahanagara Palike

ಖಾತೆ ಮಾಡಿಕೊಡಲು ವಿಳಂಬ ಮಾಡಲಾಗುತ್ತಿದೆ. ಸರ್ವರ್‌ ಸಮಸ್ಯೆಯಾಗಿದೆಯಂತೆ. ಇದನ್ನು ಕೂಡಲೆ ಸರಿಪಡಿಸಿ ಖಾತೆ ಮಾಡಿಕೊಡಬೇಕು. ಇಲ್ಲವಾದಲ್ಲಿ ಆ ಅಧಿಕಾರಿಯನ್ನೂ ಸಸ್ಪೆಂಡ್‌ ಮಾಡುತ್ತೇನೆ. ಈ – ಸ್ವತ್ತು ಹೊಸದಾಗಿ ಅಪ್‌ಡೇಟ್‌ ಮಾಡಬೇಕಿದೆ. ಇನ್ನು ಎರಡ್ಮೂರು ವಾರದಲ್ಲಿ ಗೊಂದಲ ಬಗೆಹರಿಯಲಿದೆ.

ಬೈರತಿ ಸುರೇಶ್‌, ನಗರಾಭಿವೃದ್ಧಿ ಸಚಿವ

RED-LINE-

Minister Byrathi Suresh Sudden visit to Shimoga Mahanagara Palike

ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳ ವಿಳಂಬ ಧೋರಣೆ ವಿರುದ್ಧ ಸಾರ್ವಜನಿಕರು ಸಚಿವ ಬೈರತಿ ಸುರೇಶ್‌ ಅವರಿಗೆ ದೂರು ಹೇಳಿ, ಮನವಿ ಸಲ್ಲಿಸಿದರು. ಎಲ್ಲವನ್ನು ಪರಿಶೀಲಿಸುವುದಾಗಿ ತಿಳಿಸಿದ ಸಚಿವರು, ಮತ್ತೊಮ್ಮೆ ಪಾಲಿಕೆಗೆ ಭೇಟಿ ನೀಡಿ, ಸಮಗ್ರವಾಗಿ ಪರಿಶೀಲನೆ ನಡೆಸಲಾಗುತ್ತದೆ ಎಂದರು.

ಮಾಜಿ ಕಾರ್ಪೊರೇಟರ್‌ಗಳಾದ ಬಿ.ಎ.ರಮೇಶ್‌ ಹೆಗ್ಡೆ, ಧೀರರಾಜ ಹೊನ್ನವಿಲೆ, ಯುವ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹೆಚ್‌.ಪಿ.ಗಿರೀಶ್‌ ಸೇರಿದಂತೆ ಹಲವರು ಈ ಸಂದರ್ಭ ಇದ್ದರು.

Minister Byrathi Suresh Sudden visit to Shimoga Mahanagara Palike

ಇದನ್ನೂ ಓದಿ » ಹೊಸನಗರದಲ್ಲಿ ಲೋಕಾಯುಕ್ತ ಪೊಲೀಸ್‌ ಬಲೆಗೆ ಎಪಿಪಿ

» ಇವತ್ತಿನ ಎಲ್ಲ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ

June-2025-Report-Shivamogga-Live

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» ಶಿವಮೊಗ್ಗ ಲೈವ್‌ gmail

[email protected]

» Whatsapp Number

7411700200

 

 

Byನಿತಿನ್‌ ಕೈದೊಟ್ಲು
Editor
Follow:
ಲೋಕಲ್ ಸುದ್ದಿಗಳು ಲೋಕಕ್ಕೆ ತಿಳಿಸಬೇಕು ಅಂತಾ ನ್ಯೂಸ್ ಚಾನೆಲ್ ದುನಿಯಾದಿಂದ ಹೊರ ಬಂದು ಶಿವಮೊಗ್ಗ ಲೈವ್ ಕಟ್ಟಿದ್ದೇವೆ. ಸ್ಥಳೀಯ ಪತ್ರಿಕೆ, ಕೇಬಲ್ ಚಾನೆಲ್, ರಾಜ್ಯಮಟ್ಟದ ಪತ್ರಿಕೆ, ನ್ಯೂಸ್ ಚಾನೆಲ್’ಗಳ ಬೆಂಗಳೂರು ಕಚೇರಿಯಲ್ಲಿ ವರ್ಷಗಟ್ಟಲೆ ಕೆಲಸ ಮಾಡಿದ್ದೇನೆ. ಈ ಫೀಲ್ಡಲ್ಲಿ ಹತ್ತು ವರ್ಷಕ್ಕೂ ಹೆಚ್ಚು ಕಾಲದ ಅನುಭವವಿದೆ. ಹಾಗಾಗಿ ಪೇಪರ್, ಟಿವಿಗಳಿಗಿಂತಲೂ ವಿಭಿನ್ನವಾಗಿ ಸುದ್ದಿ ಕೊಡಬೇಕು ಅನ್ನುವ ಹಂಬಲ. ಅದರ ಪ್ರಯತ್ನ ನಿರಂತರವಾಗಿದೆ. ಕ್ವಾಲಿಟಿ ಮತ್ತು ನಿಖರತೆಗೆ ಮೊದಲ ಆದ್ಯತೆ. ಸುದ್ದಿಯ ಒಳಗೆ ನನ್ನ ಅಭಿಪ್ರಾಯ ಹೇರುವುದಕ್ಕೆ ಇಷ್ಟವಿಲ್ಲ. ಸುದ್ದಿಯನ್ನು ಸುದ್ದಿಯಾಗಷ್ಟೆ ಕೊಡಬೇಕು ಎಂಬುದು ನನ್ನ ವಾದ. ಹೀಗಿದ್ದೂ ಕೆಲವೊಮ್ಮೆ ಸುದ್ದಿ ಕೆಳಗೆ ‘ಡ್ಯಾಷ್ ಡ್ಯಾಷ್ ಡ್ಯಾಷ್’ ಅಂತೆಲ್ಲ ಕಮೆಂಟುಗಳು ಬರುತ್ತವೆ. ಆರಂಭದಲ್ಲಿದ್ದ ಟೆಂಪರ್ ಈಗಿಲ್ಲ. ಹಾಗಾಗಿ ರಿಯಾಕ್ಟ್ ಮಾಡಲ್ಲ..! ನಿಮ್ಮೂರ ಸುದ್ದಿಗಳಿದ್ದರೆ ತಿಳಿಸಿ. ಹಣ ಪಡೆದು ಸುದ್ದಿ ಮಾಡುವ ಹವ್ಯಾಸ, ಅಭ್ಯಾಸ ಎರಡೂ ಇಲ್ಲ. ಇನ್ನಷ್ಟು ವಿಭಿನ್ನ ಪ್ರಯತ್ನಗಳು, ನಮ್ಮೂರನ್ನು ಮತ್ತಷ್ಟು ಸುತ್ತಬೇಕು, ನಮ್ಮೂರ ಬಗ್ಗೆ ತಿಳಿದು ಜನರಿಗೆಲ್ಲ ತಿಳಿಸಬೇಕು ಅನ್ನುವ ತವಕವಿದೆ. ಅಂದಹಾಗೆ, ಹೊಸ ಐಡಿಯಾಗಳಿದ್ದರೆ, ಸಲಹೆಗಳಿದ್ದರೆ ತಿಳಿಸಿ.. ‘ಡ್ಯಾಷ್ ಡ್ಯಾಷ್’ ಬಯ್ಯೋದಿದ್ದರೆ ದಯವಿಟ್ಟು ವಾಟ್ಸಪ್’ನಲ್ಲಿ ಮೆಸೇಜು ಮಾಡಿ, ಸಾಕು..! ನನ್ನ ಮೊಬೈಲ್ ನಂಬರ್ 9964634494. ಸಿಕ್ಕಾಗ ತಪ್ಪದೆ ಮಾತಾಡಿಸಿ. ನಿಮ್ಮ ಸ್ನೇಹ ನಂಗೆ ಅಮೂಲ್ಯ. ಶಿವಮೊಗ್ಗದ ಸುದ್ದಿಗಾಗಿ ನಿರಂತರವಾಗಿ ಶಿವಮೊಗ್ಗ ಲೈವ್.ಕಾಂ ಓದುತ್ತಿರಿ
Previous Article bommanakatte-rajesh-shetty. BREAKING NEWS – ಶಿವಮೊಗ್ಗದಲ್ಲಿ ವ್ಯಕ್ತಿಯ ಬರ್ಬರ ಹತ್ಯೆ
Next Article SP Mithun Kumar ಶಿವಮೊಗ್ಗದಲ್ಲಿ ರಾಜೇಶ್‌ ಹತ್ಯೆ, ಜಿಲ್ಲಾ ರಕ್ಷಣಾಧಿಕಾರಿ ಮೊದಲ ಪ್ರತಿಕ್ರಿಯೆ

ಇದನ್ನೂ ಓದಿ

Online-Fraud-Case-image
CRIME DIARYSHIVAMOGGA CITY

ಶಿವಮೊಗ್ಗದ ಯುವಕ ₹25 ಲಕ್ಷ ಹಣ ಕಳೆದುಕೊಂಡ, ಆಗಿದ್ದೇನು?

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
16/07/2025
Mukya-Pustaka-barahagarru-press-meet
SHIVAMOGGA CITY

ಮೂರು ಬೇಡಿಕೆ ಈಡೇರದಿದ್ದರೆ ಅಹೋರಾತ್ರಿ ಹೋರಾಟ, ಸರ್ಕಾರಕ್ಕೆ ಒಕ್ಕೂಟದ ಎಚ್ಚರಿಕೆ

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
15/07/2025
MLA-channabasappa-visit-Vidyanagara-Health-Centre.
SHIVAMOGGA CITY

ವಿದ್ಯಾನಗರ ಆರೋಗ್ಯ ಕೇಂದ್ರಕ್ಕೆ ಎಂಎಲ್‌ಎ ದಿಢೀರ್‌ ಭೇಟಿ, ಸ್ಥಳೀಯ ಬಡಾವಣೆಗಳ ನಿವಾಸಿಗಳ ಜೊತೆ ಚರ್ಚೆ

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
15/07/2025
Sahyadri-Narayana-Multispeciality-hospital-NH-Hospital.
SHIVAMOGGA CITY

ಶಿವಮೊಗ್ಗದ NH ಆಸ್ಪತ್ರೆಯಲ್ಲಿ ಸರ್ವೈವರ್ಸ್‌ ಕ್ಲಿನಿಕ್‌, ಜು.17ರಂದು ಕ್ಯಾನ್ಸರ್‌ ಬಗ್ಗೆ ಮಹತ್ವದ ಚರ್ಚೆ, ಏನಿದು ಕ್ಲಿನಿಕ್‌?

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
15/07/2025
MP-BY-raghavendra-about-Shimoga-Airport-Flight
SHIVAMOGGA CITY

‘ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಉಪಕರಣ ತರಿಸಿ 15 ದಿನವಾಯ್ತು, ಅಳವಡಿಸಿಲ್ಲ’, ರಾಘವೇಂದ್ರ ಗರಂ

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
15/07/2025
Sigandur-Launch-in-Sharavathi-River
SHIVAMOGGA CITY

ಸಿಗಂದೂರು ಲಾಂಚ್‌ಗಳು ಇನ್ಮುಂದೆ ತೇಲುವ ಹೊಟೇಲ್, ಯೋಜನೆ ಮಾಹಿತಿ ನೀಡಿದ ಎಂಎಲ್‌ಎ

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
15/07/2025
Previous Next

ಶಿವಮೊಗ್ಗ ಲೈವ್ ಗ್ರೂಪ್ ಸೇರಲು ಕ್ಲಿಕ್ ಮಾಡಿ

🟢 shivamoggalive.com

whatsapp-logo
Shivamogga-Live-Logo-New-Logo
Welcome Back!

Sign in to your account

Username or Email Address
Password

Lost your password?