ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | CULTURE| 05 ಮೇ 2022
ಜಿಲ್ಲಾ ಮಟ್ಟದ ಮೂರನೇ ಜಾನಪದ ಸಮ್ಮೇಳನ ಮತ್ತು 889ನೇ ಬಸವ ಜಯಂತ್ಯುತ್ಸವ ಕಾರ್ಯಕ್ರಮವನ್ನು ಭದ್ರಾವತಿ ತಾಲೂಕು ಗೋಣಿಬೀಡು ಗ್ರಾಮದ ಶ್ರೀ ಶೀಲಸಂಪಾದನಾ ಮಠದಲ್ಲಿ ಆಯೋಜಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಮಂಜುನಾಥ್ ಅವರು, ಮೇ 8ರಂದು ಬೆಳಗ್ಗೆ 9 ಗಂಟೆಗೆ ಜಾನಪದ ಸಮ್ಮೇಳನಕ್ಕೆ ಚಾಲನೆ ಸಿಗಲಿದೆ ಎಂದು ತಿಳಿಸಿದರು.
ಜಾನಪದ ಸಮ್ಮೇಳನದ ಮೆರವಣಿಗೆ
ಅಂತಾರಾಷ್ಟ್ರೀಯ ಡೊಳ್ಳು ಕಲಾವಿದ ಜೆ.ಸಿ.ಮಂಜಪ್ಪ ಕಣ್ಣೂರ ಅವರು ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದಾರೆ. ಮೇ 8ರಂದು ಬೆಳಗ್ಗೆ 9 ಗಂಟೆಗೆ ಗೋಣಿಬೀಡು ಗ್ರಾಮದ ಸ್ವಾಗತ ಕಮಾನಿನಿಂದ ಸರ್ವಾಧ್ಯಕ್ಷರ ಮೆರವಣಿಗೆ ಆರಂಭವಾಗಲಿದೆ. ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್ ಅವರು ಮೆರವಣಿಗೆ ಉದ್ಘಾಟಿಸಲಿದ್ದಾರೆ. ವಿವಿಧ ಜಾನಪದ ಕಲಾ ತಂಡಗಳು ಮತ್ತು ಪ್ರಮುಖರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸಮ್ಮೇಳನಕ್ಕೆ ಚಾಲನೆ
ಕರ್ನಾಟಕ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಟಿ.ತಿಮ್ಮೇಗೌಡ ಅವರು ಸಮ್ಮೇಳನ ಉದ್ಘಾಟಿಸಲಿದ್ದಾರೆ. ಶ್ರೀ ಶೀಲ ಸಂಪಾದನಾಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ಅವರು ಸಾನಿಧ್ಯ ವಹಿಸಲಿದ್ದಾರೆ. ಸಂಸದ ಬಿ.ವೈ.ರಾಘವೇಂದ್ರ ಅವರು ಬಸವಜ್ಯೋತಿ ಪ್ರಜ್ವಲಿಸಲಿದ್ದಾರೆ. ಭದ್ರಾವತಿ ಶಾಸಕ ಸಂಗಮೇಶ್ವರ ಅವರು ವಸ್ತುಪ್ರದರ್ಶನಕ್ಕೆ, ವಿಧಾನ ಪರಿಷತ್ ಸದಸ್ಯ ರುದ್ರೇಗೌಡ ಅವರು ಕಲಾ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ ಎಂದು ಡಿ.ಮಂಜುನಾಥ್ ಅವರು ತಿಳಿಸಿದರು.
ಜೆಡಿಎಸ್ ನಾಯಕಿ ಶಾರದಾ ಅಪ್ಪಾಜಿಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಬ್ರಮಣಿ ಅವರು ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಜನಪದ ಸಿರಿ ಪ್ರಶಸ್ತಿ
ಸಮ್ಮೇಳನದಲ್ಲಿ ಏಳು ಮಂದಿಗೆ ಜನಪದ ಸಿರಿ ಪ್ರಶಸ್ತಿ ನೀಡಲಾಗುತ್ತಿದೆ. ಭೈರಾಪುರದ ಬಿ.ಲಿಂಗಪ್ಪ, ಚಂದ್ರಗುತ್ತಿಯ ದೊಡ್ಡಾಟ ಕಲಾವಿದ ಉಮ್ಮರ್ ಸಾಬ್, ಕಣಬಂದೂರಿನ ರೇವಣಪ್ಪ ಶೆಟ್ಟಿ, ಗೋಣಿಬೀಡಿನ ಸೋಂಪ್ಯಾನಾಯ್ಕ ಮತ್ತು ಗಮ್ಲಿಬಾಯಿ, ಶಿಕಾರಿಪುರದ ಅಂಬಾರಗೊಪ್ಪದ ಶೇಖರಪ್ಪ, ಸಾಗರದ ಸಿರಿವಂತೆಯ ಗಣಪತಿ ಕಾಮತ್ ಅವರಿಗೆ ಪ್ರಶಸ್ತಿ ನೀಡಲಾಗುತ್ತಿದೆ ಎಂದರು ತಿಳಿಸಿದರು.
ಇದನ್ನೂ ಓದಿ – ರವೀಂದ್ರನಗರ ಗಣಪತಿ ದೇವಸ್ಥಾನದಲ್ಲಿ ರುದ್ರಹೋಮ
CULTURE
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422