ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 8 JUNE 2023
SHIMOGA : ಜನಶತಾಬ್ದಿ ಸೇರಿದಂತೆ ಶಿವಮೊಗ್ಗದಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಎರಡು ರೈಲುಗಳ ಇಂಜಿನ್ (Engine) ಪರಿವರ್ತನೆಯಾಗಲಿದೆ. ಈವರೆಗೂ ಇವೆರಡೂ ರೈಲುಗಳಿಗೆ ಡಿಸೇಲ್ ಇಂಜಿನ್ ಬಳಕೆಯಾಗುತ್ತಿತ್ತು. ಜೂ. 17ರಿಂದ ಈ ರೈಲುಗಳು ಎಲೆಕ್ಟ್ರಿಕ್ ಇಂಜಿನ್‌ನೊಂದಿಗೆ ಚಲಿಸಲಿವೆ.
ಈ ಕುರಿತು ಆದೇಶ ಹೊರಡಿಸಿರುವ ನೈಋತ್ಯ ರೈಲ್ವೆ ಎರಡು ರೈಲುಗಳ ಇಂಜಿನ್ ಪರಿವರ್ತಿಸಲು ಸೂಚಿಸಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಯಾವ್ಯಾವ ರೈಲಿಗೆ ಎಲೆಕ್ಟ್ರಿಕ್ ಇಂಜಿನ್?
ಶಿವಮೊಗ್ಗ – ಬೆಂಗಳೂರು ಜನ ಶತಾಬ್ದಿ ರೈಲಿಗೆ ಈತನಕ ಡಿಸೇಲ್ ಇಂಜಿನ್ ಇತ್ತು. ಇನ್ಮುಂದೆ ಎಲೆಕ್ಟ್ರಿಕ್ ಇಂಜಿನ್ ಆಗಿ ಪರಿವರ್ತನೆಯಾಗಲಿದೆ. ಜೂ.17ರಂದು ಬೆಂಗಳೂರಿನಿಂದ ಹೊರಡುವ ರೈಲು ಎಲೆಕ್ಟ್ರಿಕ್ ಇಂಜಿನ್‌ನೊಂದಿಗೆ (Engine) ಶಿವಮೊಗ್ಗಕ್ಕೆ ಬರಲಿದೆ. ಜೂ.18ರಂದು ಶಿವಮೊಗ್ಗದಿಂದ ಹೊರಡುವಾಗ ಎಲೆಕ್ಟ್ರಿಕ್ ಇಂಜಿನ್ ಹೊಂದಿರಲಿದೆ.
ಇನ್ನು, ಯಶವಂತಪುರ – ಶಿವಮೊಗ್ಗ ಎಕ್ಸ್‌ಪ್ರೆಸ್ ರೈಲಿನ ಇಂಜಿನ್ ಕೂಡ ಪರಿವರ್ತಿಸಲಾಗುತ್ತಿದೆ. ಜೂ.17ರಂದು ಯಶವಂತಪುರದಿಂದ ಹೊರಡುವ ರೈಲಿಗೆ ಎಲೆಕ್ಟ್ರಿಕ್ ಇಂಜಿನ್ ಅಳವಡಿಸಲಾಗುತ್ತದೆ. ಮಧ್ಯಾಹ್ನ ಶಿವಮೊಗ್ಗಕ್ಕೆ ಬರುವ ರೈಲು ಎಲೆಕ್ಟ್ರಿಕ್ ಇಂಜಿನ್‌ನೊಂದಿಗೆ ಶಿವಮೊಗ್ಗದಿಂದ ತೆರಳಲಿದೆ.
ಇದನ್ನೂ ಓದಿ – ಶಿವಮೊಗ್ಗ – ಭದ್ರಾವತಿ ಟ್ರ್ಯಾಕ್ಸ್ ಉದ್ಯಮಕ್ಕೆ ‘ಗ್ಯಾರಂಟಿʼ ಸಂಕಷ್ಟ, ಏನದು? ಎಷ್ಟಿವೆ ಟ್ರ್ಯಾಕ್ಸ್? ಇಲ್ಲಿದೆ ಕಂಪ್ಲೀಟ್ ಮಾಹಿತಿ
ಎಲೆಕ್ಟ್ರಿಕ್ ಇಂಜಿನ್‌ಗಳು ಕಡಿಮೆ ಶಬ್ದ, ಮಾಲಿನ್ಯ ರಹಿತವಾಗಿರುತ್ತವೆ. ಇವುಗಳ ವೇಗವು ಹೆಚ್ಚಿರುತ್ತದೆ. ಮುಂದೆ ಇವೆರಡು ರೈಲುಗಳ ವೇಗ ಹೆಚ್ಚುವ ಸಾಧ್ಯತೆ ಇದೆ. ಇದರಿಂದ ಶಿವಮೊಗ್ಗ – ಬೆಂಗಳೂರು ನಡುವಿನ ಸಮಯ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದೆ.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ