100 ಕಂಪನಿಗಳು, 3000 ಉದ್ಯೋಗ, ಸ್ಥಳದಲ್ಲೇ ನೇಮಕಾತಿ ಪತ್ರ, ಶಿವಮೊಗ್ಗದಲ್ಲಿ ಬೃಹತ್‌ ಉದ್ಯೋಗ ಮೇಳ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ

ನಗರದ ಎನ್‌ಇಎಸ್ ಕಾಲೇಜು ಆವರಣದಲ್ಲಿ ಡಾ. ಶರತ್ ಮರಿಯಪ್ಪ ಫೌಂಡೇಶನ್‌ನಿಂದ ಮಲೆನಾಡು ಮೆಗಾ ಜಾಬ್‌ಥಾನ್-2026 ಬೃಹತ್ ಉದ್ಯೋಗ ಮೇಳವನ್ನು ಸೆ.19 ರಂದು ಬೆಳಗ್ಗೆ 9.30ರಿಂದ ಸಂಜೆ 5ರವರೆಗೆ ಆಯೋಜಿಸಲಾಗಿದೆ ಎಂದು ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಡಾ. ಶರತ್ ಮರಿಯಪ್ಪ ಹೇಳಿದರು.

Jobathon-Job-Mela-by-Sharath-Mariyappa-Foundation-in-Shimoga

ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೂರಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿದ್ದು, 3000ಕ್ಕೂ ಅಧಿಕ ಉದ್ಯೋಗಾವಕಾಶಗಳಿವೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಥಳದಲ್ಲೇ ನೇಮಕಾತಿ ಪತ್ರ ವಿತರಿಸಲಾಗುತ್ತದೆ. ಒಂದೇ ಸೂರಿನಡಿ ಉದ್ಯೋಗ ಅವಕಾಶ ಕಲ್ಪಿಸುವ ಉದ್ದೇಶದಿಂದ ಮೇಳ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಅಕ್ಷರ ಫೌಂಡೇಶನ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮುಖ್ಯಸ್ಥ ಕುಮಾ‌ರ್ ಮಾತನಾಡಿ, ಮೇಳದಲ್ಲಿ ಸಾಫ್ಟ್‌ವೇ‌ರ್ ಕಂಪನಿಗಳು, ಹಣಕಾಸು ಸಂಸ್ಥೆಗಳು, ಆಸ್ಪತ್ರೆಗಳು, ನರ್ಸಿಂಗ್, ಮೆಕಾನಿಕಲ್‌, ಸೆಕ್ಯೂರಿಟಿ, ಹೆಚ್.ಆರ್ ವಿಭಾಗ, ಆಡಳಿತಾತ್ಮಕ ಹುದ್ದೆಗಳು, ಬಿಪಿಒ, ಫಾರ್ಮಸಿ ಸೇರಿ ನೂರಕ್ಕೂ ಹೆಚ್ಚು ಕಂಪನಿಗಳು ಮತ್ತು ಉದ್ಯಮಿಗಳು ಭಾಗವಹಿಸಲಿದ್ದಾರೆ. 8ನೇ ತರಗತಿ ಯಿಂದ ಸ್ನಾತಕೋತ್ತರ ಮತ್ತು ತಾಂತ್ರಿಕ ಕೋರ್ಸ್‌ಗಳಲ್ಲಿ ಉತ್ತೀರ್ಣ ರಾದ 18ರಿಂದ 45 ವರ್ಷದವರೆಗಿನ ಉದ್ಯೋಗ ಆಕಾಂಕ್ಷಿಗಳು ಕೂಡ ಭಾಗವಹಿಸಬಹುದು ಎಂದರು.

ಆಯೋಜಕ ರಾಜೇಶ್ ಮಾತನಾಡಿ, ಸಂದರ್ಶನದ ಬಗ್ಗೆ ಫೌಂಡಶೇನ್‌ನಿಂದ ತರಬೇತಿ ಕಾರ್ಯಕ್ರಮವನ್ನೂ ಕೂಡ ಹಮ್ಮಿಕೊಳ್ಳಲಾಗಿದೆ ಎಂದರು. ಪ್ರಮುಖರಾದ ಡಾ. ಚೇತನ್, ವಿಶ್ವಾಸ್ ಕಾಮತ್, ವಿನಯ್, ರಂಗನಾಥ್ ಸುದ್ದಿಗೋಷ್ಠಿಯಲ್ಲಿದ್ದರು.