SHIMOGA NEWS, 18 OCTOBER 2024 : ಪೌಷ್ಟಿಕ ಆಹಾರಕ್ಕಾಗಿ ವಿಕಸಿತ ಕೃಷಿ ಧ್ಯೇಯದೊಂದಿಗೆ ಆರಂಭವಾಗಿರುವ ಮೂರು ದಿನದ ಕೃಷಿ ಮತ್ತು ತೋಟಗಾರಿಕೆ ಮೇಳವನ್ನು (Krushi Mela) ಮುರುಘಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಉದ್ಘಾಟಿಸಿದರು. ನವುಲೆಯ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಮೇಳ ಆಯೋಜಿಸಲಾಗಿದೆ.
ಇದೇ ವೇಳೆ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಪ್ರಗತಿಪರ ರೈತರ ಯಶೋಗಾಥೆ ಪುಸ್ತಕ ಬಿಡುಗಡೆ ಮಾಡಿದರು.
ಯಾರೆಲ್ಲ ಏನೆಲ್ಲ ಹೇಳಿದರು?
ಮಲೆನಾಡಿನ ಕೃಷಿ ಸಮಸ್ಯೆಗಳತ್ತ ಸರ್ಕಾರ, ವಿಶ್ವವಿದ್ಯಾಲಯಗಳು, ವಿಜ್ಞಾನಿಗಳು ಗಮನ ಹರಿಸಬೇಕು. ಈ ಸಮಸ್ಯೆಗಳ ನಿವಾರಣೆಗೆ ಹೆಚ್ಚಿನ ಸಂಶೋಧನೆಗಳು ನಡೆಯಬೇಕು. ಆಗ ಕೃಷಿ ಕ್ಷೇತ್ರವನ್ನು ಸದೃಢಗೊಳಿಸಬೇಕಿದೆ. ಇಲ್ಲಿ ಉತ್ತಮ ಕೃಷಿ ವಿಜ್ಞಾನಿ, ಸಂಶೋಧಕರು, ತಜ್ಞರು ಇದ್ದಾರೆ. ಮಲೆನಾಡಿನ ಸಮಸ್ಯೆಗೆ ಒತ್ತು ನೀಡಬೇಕು. ವಿವಿಧ ಬೆಳೆ, ಪೂರಕ ಬೆಳೆ ಕಡೆ ಹೆಚ್ಚಿನ ಗಮನ ಹರಿಸಬೇಕು. ಕೃಷಿ ಮೇಳದ ಉಪಯುಕ್ತತೆಯನ್ನು ಎಲ್ಲರೂ ಪಡೆಯಬೇಕು.
ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಮುರುಘಾ ಮಠ
ಇದನ್ನೂ ಓದಿ » ಶಿವಮೊಗ್ಗದಲ್ಲಿ ರೈತರಿಗೆ ಮೂರು ತಿಂಗಳ ಸರ್ಟಿಫಿಕೇಟ್ ಕೋರ್ಸ್
ಕೃಷಿ ಕ್ಷೇತ್ರದಲ್ಲಿಯು ತಂತ್ರಜ್ಞಾನ ಬೆಳೆದಿದೆ. ಭತ್ತದಲ್ಲಿ ಅನೇಕ ಹೊಸ ತಳಿ ಅಭಿವೃದ್ಧಿಪಡಿಸಲಾಗಿದೆ. ಎಕರೆಗೆ 35 ಕ್ವಿಂಟಾಲ್ ಭತ್ತ ಬೆಳೆಯಬಹುದು. ಆದರೆ ಈಗ ರೈತರು ತೋಟದ ಕಡೆ ಹೆಚ್ಚಿನ ಗಮನ ಹರಿಸುತ್ತಿದ್ದು ಭತ್ತ ಬೆಳೆಯುತ್ತಿಲ್ಲ. ಇದರಿಂದ ಮುಂದೆ ಊಟಕ್ಕೆ ಸಂಕಷ್ಟ ಎದುರಾಗಬಹುದು. 11 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯುತ್ತಿದ್ದಾರೆ. ಹಾಗಾಗಿ ಈಗ ಭತ್ತದ ನಾಡು ಅಡಿಕೆ ಕಣಜವಾಗಿ ಪರಿವರ್ತನೆಯಾಗಿದೆ.
ಬೇಳೂರು ಗೋಪಾಲಕೃಷ್ಣ, ಶಾಸಕ
ಪ್ರಾಕೃತಿಕ ವಿಕೋಪ ಬಾಧೆ, ಇತರೆ ಕಾರಣಗೆ ರೈತರು ಸಾಲದ ಸುಳಿಯಲ್ಲಿದ್ದಾರೆ. ಹೈಬ್ರಿಡ್ ತಳಿಗಳಿಂದಾಗಿ ಹೈಬ್ರಿಡ್ ರೋಗ ಹೆಚ್ಚಿದೆ. ತರಕಾರಿ, ಹಣ್ಣು, ಹಾಲು ವಿಷಮಯವಾಗಿದೆ. ಜನರು ರೋಗಕ್ಕೆ ತುತ್ತಾಗುತಿದ್ದಾರೆ. ಹೆಚ್ಚು ಬೆಳೆಯಲು ಯತೇಚ್ಛ ರಾಸಾಯನಿಕ ಬಳಸಿ ಮಣ್ಣನ್ನು ಸಾಯಿಸುತ್ತಿದ್ದೇವೆ. ಕೃಷಿ ವಿಶ್ವವಿದ್ಯಾಲಯವು ನೈಸರ್ಗಿಕ, ಸಾವಯವ ಕೃಷಿ, ವಿಷಮುಕ್ತ ಬೆಳೆಗೆ ಹೆಚ್ಚು ಒತ್ತು ನೀಡಬೇಕು. ಸಾವಯವ ಕೃಷಿಯಲ್ಲೂ ಹೆಚ್ಚಿನ ಇಳುವರಿಗೆ ಪ್ರಯತ್ನಿಸಬೇಕು. ಸಮಸ್ಯಗಳನ್ನು ಸವಾಲಾಗಿ ಸ್ವೀಕರಿಸಬೇಕು. ಇಲ್ಲವಾದಲ್ಲಿ ಮನುಕುಲಕ್ಕೆ ಉಳಿವಿಲ್ಲ.
ಆರಗ ಜ್ಞಾನೇಂದ್ರ, ಶಾಸಕ
ಇದನ್ನೂ ಓದಿ » ವಿವಿಧ ಯೋಜನೆ, ರೈತರಿಂದ ಅರ್ಜಿ ಆಹ್ವಾನ
ಆಹಾರ ಒದಗಿಸುವ ರೈತನಿಗೆ ಸರ್ಕಾರ ಸರ್ವ ರೀತಿಯ ಸೌಲಭ್ಯ ನೀಡಬೇಕು. ಕೃಷಿ ವಿಶ್ವವಿದ್ಯಾಲಯಗಳು ರೈತರ ಏಳ್ಗೆಗಾಗಿ ಸಂಶೋಧನೆಗಳನ್ನು ಕೈಗೊಳ್ಳಬೇಕು. ಪ್ರಗತಿಪರ ರೈತರ ಸೇವೆ ಸುಗಮವಾಗಿ ಸಾಗಬೇಕು. ಕೃಷಿ ಮೇಳ ಉತ್ತಮ ಕಾರ್ಯಕ್ರಮ. ಎಲ್ಲರೂ ಇದರ ಸದ್ಬಳಕೆ ಮಾಡಿಕೊಳ್ಳಬೇಕು.
ಬಲ್ಕಿಶ್ ಬಾನು, ವಿಧಾನ ಪರಿಷತ್ ಸದಸ್ಯೆ
ಇದನ್ನೂ ಓದಿ » ರೈತರ ಅಭಿಪ್ರಾಯ ಮುಖ್ಯ, ಮುಕ್ತ ಸಭೆಗೆ ಆಗ್ರಹ, ಶಿವಮೊಗ್ಗದಲ್ಲಿ ರೈತರ ಪ್ರತಿಭಟನೆ
ರಾಸಾಯನಿಕಗಳ ಅಡ್ಡ ಪರಿಣಾಮದಿಂದಾಗಿ ಸಾವಯವ ಕೃಷಿಯತ್ತ ವಾಪಾಸ್ಸಾಗುತ್ತಿದ್ದೇವೆ. ರೈತರು ಬೆಳೆದ ಬೆಳೆಗೆ ಉತ್ತಮ ಇಳುವರಿ ಬರಬೇಕು. ಇತ್ತೀಚೆಗೆ ರೈತರು ಭತ್ತ ಕಡಿಮೆ ಮಾಡಿ ಮೆಕ್ಕೆಜೋಳ ಬೆಳೆಯಲು ಶುರು ಮಾಡಿದರು. ಈಗ ಅಡಿಕೆ ಬೆಳೆಯಲು ಮುಂದಾಗಿದ್ದಾರೆ. ವಿವಿಧ ಜಿಲ್ಲೆಗಳ ರೈತರು ಬಂದಿದ್ದು, ತಾಂತ್ರಿಕತೆ ಅಳವಡಿಸಿಕೊಳ್ಳುವ ಬಗ್ಗೆ ರೈತರು ಆಸಕ್ತಿ ತೋರುತ್ತಿದ್ದಾರೆ.
ಶಾರದಾ ಪೂರ್ಯಾನಾಯ್ಕ್, ಶಾಸಕಿ
ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ್, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್.ಸಿ.ಜಗದೀಶ್ ಸೇರಿದಂತೆ ಹಲವರು ಇದ್ದರು. ಇದೇ ವೇಳೆ ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ರೈತರು ಮತ್ತು ರೈತ ಮಹಿಳೆಯನ್ನು ಸನ್ಮಾನಿಸಲಾಯಿತು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200