SHIVAMOGGA LIVE NEWS | 24 JANUARY 2023
SHIMOGA | ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ವತಿಯಿಂದ ಶಿವಮೊಗ್ಗ KSRTC ಬಸ್ ನಿಲ್ದಾಣ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಲಾಯಿತು.
14 ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ KSRTC ನಿಲ್ದಾಣದ ಮುಂಭಾಗ ಧರಣಿ ನಡೆಸಲಾಯಿತು.
ನೌಕರರ ಬೇಡಿಕೆಗಳು ಏನು?
ವೇತನ ಪರಿಷ್ಕರಣೆ ಮಾಡಬೇಕು. ಸಮರ್ಪಕ ಬಡ್ತಿ ನೀಡಬೇಕು. ಪ್ರೋತ್ಸಾಹ ಭತ್ಯ ಸೇರಿದಂತೆ ಮತ್ತಿತರ ಭತ್ಯೆಗಳನ್ನು ಹೆಚ್ಚಳ ಮಾಡಬೇಕು. ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ ನೀಡುವಂತೆ ಯೋಜನೆ ರೂಪಿಸಬೇಕು. ನಿವೃತ್ತ ಕಾರ್ಮಿಕರು ಮತ್ತು ಅವರ ಕುಟುಂಬದವರಿಗು ವಿಸ್ತರಣೆ ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯದ 4 ಕೇಂದ್ರಗಳಲ್ಲಿ ಸಂಸ್ಥೆಯು ಆಸ್ಪತ್ರೆಗಳನ್ನು ನಿರ್ಮಿಸಬೇಕು. ಎಲ್ಲಾ ನೌಕರರಿಗೂ ಉಚಿತ ಔಷಧಿ ಪೂರೈಸಬೇಕು. ಹೊರ ರೋಗಿ ಚಿಕಿತ್ಸೆ ವೆಚ್ಚಕ್ಕಾಗಿ ತಿಂಗಳಿಗೆ 2 ಸಾವಿರ ನೀಡಬೇಕು. ಮುಷ್ಕರ ಸಂದರ್ಭ ಸೇವೆಯಿಂದ ವಜಾಗೊಂಡ ನೌಕರರನ್ನು ಯಾವುದೇ ಷರತ್ತಿಲ್ಲದೆ ಮರು ನೇಮಕ ಮಾಡಬೇಕು. ಶಿಕ್ಷೆಗೊಳಗಾದ ಸಿಬ್ಬಂದಿ ಮೂಲ ಘಟಕಕ್ಕೆ ವಾಪಸ್ಸು ತರಬೇಕು. ಒಪ್ಪಂದದ ಪ್ರಕಾರ ಓವರ್ ಟೈಂ ಭತ್ಯೆ ನೀಡಬೇಕು. 8 ಗಂಟೆಗಿಂತಲು ಅಧಿಕ ಕೆಲಸದಲ್ಲಿ ನಿಯೋಜಿಸಬಾರದು ಎಂದು ನೌಕರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಂಟಿ ಕ್ರಿಯಾ ಸಮಿತಿ ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳ ಪ್ರಮುಖರಾದ ಎಂ.ಮಹಾದೇವ, ರಾಜು ಚಿನ್ನಸ್ವಾಮಿ, ಹನುಮಂತಪ್ಪ ಸೇರಿದಂತೆ ಹಲವರು ಇದ್ದರು.
ಇದನ್ನೂ ಓದಿ – 4 ವರ್ಷದಲ್ಲಿ 14 ತಹಶೀಲ್ದಾರ್ ವರ್ಗಾವಣೆ, ಶಿವಮೊಗ್ಗದಲ್ಲಿ ನೌಕರರಿಂದ ಮೌನ ಹೋರಾಟ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200