ಆರ್‌ಸಿಬಿ ಅಬ್ಬರ, ಶಿವಮೊಗ್ಗದಲ್ಲಿ ದೀಪಾವಳಿ ರೀತಿ ಸಂಭ್ರಮ, ಲಘು ಲಾಠಿ ಪ್ರಹಾರ, ಇಲ್ಲಿದೆ ಫಟಾಫಟ್‌ ಸುದ್ದಿ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ಐಪಿಎಲ್‌ ಪಂದ್ಯಾವಳಿಯಲ್ಲಿ ಆರ್‌ಸಿಬಿ ಗೆಲುವು ಸಾಧಿಸುತ್ತಿದ್ದಂತೆ ಶಿವಮೊಗ್ಗದಲ್ಲಿ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದರು. ನಗರದ ವಿವಿಧೆಡೆ ಯುವಕರು ರಸ್ತೆಗಿಳಿದು ಘೋಷಣೆಗಳನ್ನು ಮೊಳಗಿಸಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಇದೇ ವೇಳೆ ಗುಂಪು ಚದುರಿಸಲು ಲಘು ಲಾಠಿ (lathi charge) ಪ್ರಹಾರವು ನಡೆಯಿತು. 

ಬೃಹತ್‌ ಪರದೆಗಳಲ್ಲಿ ಪಂದ್ಯಾವಳಿ ವೀಕ್ಷಣೆ

ಐಪಿಎಲ್‌ ಫೈನಲ್‌ ಪಂದ್ಯಾವಳಿ ವೀಕ್ಷಣೆಗೆ ಶಿವಮೊಗ್ಗದ ವಿವಿಧೆಡೆ ಬೃಹತ್‌ ಪರದೆಗಳನ್ನು ಹಾಕಲಾಗಿತ್ತು. ಆರ್‌ಸಿಬಿ ಅಭಿಮಾನಿಗಳು ಈ ಪರದೆಗಳಲ್ಲಿ ಪಂದ್ಯಾವಳಿ ವೀಕ್ಷಿಸಿದರು. ಆರ್‌ಸಿಬಿ ತಂಡ ಫೋರ್‌, ಸಿಕ್ಸ್‌ ಬಾರಿಸಿದಾಗ, ಆರ್‌ಸಿಬಿ ಬೌಲರ್‌ಗಳು ವಿಕೆಟ್‌ ಪಡೆದಾಗ ಅಭಿಮಾನಿಗಳು ಸಂಭ್ರಮಿಸುತ್ತಿದ್ದರು.

RCB Winning Celebration In Shimoga city

ಕ್ಲಬ್‌, ಬಾರ್‌ಗಳಲ್ಲಿ ಟೇಬಲ್‌ ಫುಲ್‌

ನಗರದ ವಿವಿಧ ಕ್ಲಬ್‌ಗಳು, ಬಾರ್‌ಗಳಲ್ಲಿ ಪಂದ್ಯಾವಳಿ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಬಹತೇಕ ಟೇಬಲ್‌ಗಳು ಭರ್ತಿಯಾಗಿದ್ದವು. ಆರ್‌ಸಿಬಿ ಗೆಲುವಿಗೆ ಮುಂದಡಿ ಇಡುತ್ತಿದ್ದಂತೆ ಸಂಭ್ರಮಾಚರಣೆ ಇರುತ್ತಿತ್ತು. ಈ ಅವಧಿಯಲ್ಲಿ ಮದ್ಯ ಮಾರಾಟವು ಬಿರುಸಾಗಿತ್ತು.

ರಸ್ತೆಗಿಳಿದು ಸಂಭ್ರಮಾಚರಣೆ

ಆರ್‌ಸಿಬಿ ಗೆಲುವಿನ ಸನಿಹಕ್ಕೆ ಬರುತ್ತಿದ್ದಂತೆ ಯುವಕರು ಶಿವಮೊಗ್ಗ ನಗರದಲ್ಲಿ ಸಂಭ್ರಮಾಚರಣೆ ಆರಂಭಿಸಿದರು. ನಗರದ ವಿವಿಧೆಡೆ ರಸ್ತೆಗಿಳಿದ ಆರ್‌ಸಿಬಿ ಅಭಿಮಾನಿಗಳು ಘೋಷಣೆಗಳನ್ನು ಕೂಗಿದರು, ಬೈಕ್‌ ಜಾಥಾ ನಡೆಸಿದರು. ವಿವಿಧೆಡೆ ದಿಢೀರ್‌ ರಸ್ತೆಗಿಳಿದ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

RCB Winning Celebration In Shimoga city

ನಡುರಾತ್ರಿ ದೀಪಾವಳಿ ರೀತಿ ಸಂಭ್ರಮ

ಆರ್‌ಸಿಬಿ ತಂಡ ಗೆಲ್ಲುತ್ತಿದ್ದಂತೆ ಶಿವಮೊಗ್ಗ ನಗರದಾದ್ಯಂತ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಲಾಯಿತು. ಬಹುತೇಕ ಎಲ್ಲ ಬಡಾವಣೆಗಳಲ್ಲಿಯು ಪಟಾಕಿ ಸಿಡಿಸಲಾಗಿದೆ. ಶಿವಮೊಗ್ಗ ನಗರದಲ್ಲಿ ನಡುರಾತ್ರಿ ದೀಪಾವಳಿ ರೀತಿಯ ಸಂಭ್ರಮಾಚರಣೆ ಮಾಡಲಾಯಿತು.

RCB Winning Celebration In Shimoga city

ಲಘು ಲಾಠಿ ಪ್ರಹಾರ

ನೆಹರು ರಸ್ತೆಯಲ್ಲಿ ವಿಜಯೋತ್ಸವದ ಸಂದರ್ಭ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ. ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಆರ್‌ಸಿಬಿ ಅಭಿಮಾನಿಗಳು ತಡರಾತ್ರಿವರೆಗು ಸಂಭ್ರಮಾಚರಣೆ ಮಾಡಿದರು. ಸಮಯ ಮೀರಿದ್ದರಿಂದ ಪೊಲೀಸರು ಗುಂಪು ಚದುರಿಸಲು ಪ್ರಯತ್ನಿಸಿದರು. ಆದರೆ ಜನರು ತೆರಳದೆ ಇದ್ದಾಗ ಲಘು ಲಾಠಿ ಪ್ರಹಾರ ನಡೆಸಿದರು.

RCB Winning Celebration In Shimoga city

ಸಿಟಿಯಲ್ಲಿ ಬಂದೋಬಸ್ತ್‌ ಹೆಚ್ಚಳ

ಐಪಿಎಲ್‌ ಫೈನಲ್‌ ಪಂದ್ಯಾವಳಿ ಹಿನ್ನೆಲೆ ನಗರದ ವಿವಿಧೆಡೆ ಪೊಲೀಸ್‌ ಬಂದೋಬಸ್ತ್‌ ನಿಯೋಜನೆ ಮಾಡಲಾಗಿತ್ತು. ಹೀಗಿದ್ದು ಸಂಭ್ರಮಾಚರಣೆಯಲ್ಲಿ ತೊಡಗಿದ್ದ ವೇಳೆ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

RCB Winning Celebration In Shimoga city

ಬೈಕ್‌ ಅಪಘಾತದಲ್ಲಿ ಅಭಿಮಾನಿ ಸಾವು

ಉಷಾ ನರ್ಸಿಂಗ್‌ ಹೋಮ್‌ ಸಮೀಪ ಬೈಕ್‌ಗಳು ಡಿಕ್ಕಿಯಾಗಿ ಆರ್‌ಸಿಬಿ ಅಭಿಮಾನಿಯೊಬ್ಬ ಸಾವನ್ನಪ್ಪಿದ್ದಾನೆ. ವೆಂಕಟೇಶ ನಗರದ ಅಭಿ (21) ಮೃತಪಟ್ಟಿದ್ದಾನೆ. ಗಣಪತಿ ದೇವಸ್ಥಾನದ ಪಕ್ಕದಲ್ಲಿ 100 ಅಡಿ ರಸ್ತೆಯಲ್ಲಿ ಎರಡು ಬೈಕುಗಳು ಮುಖಾಮುಖಿ ಡಿಕ್ಕಿಯಾಗಿ ತೀವ್ರ ಗಾಯಗೊಂಡಿದ್ದ ಅಭಿ ಸ್ಥಳದಲ್ಲೆ ಮೃತಪಟ್ಟಿದ್ದಾನೆ.

Accident-near-usha-nursing-home-circle-in-Shimoga.

ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಡಿಕ್ಕಿ

ವಿಜಯೋತ್ಸವ ಸಂದರ್ಭ ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ವಾಹನ ಡಿಕ್ಕಿ ಹೊಡೆದಿದೆ. ದುರ್ಗಿಗುಡಿ ಮುಖ್ಯ ರಸ್ತೆಯಲ್ಲಿ ಕಾಟನ್‌ ಜಗದೀಶ್‌ ಎಂಬುವವರು ನಿಲ್ಲಿಸಿದ್ದ ಕಾರಿಗೆ ರಾತ್ರಿ ವಾಹನ ಡಿಕ್ಕಿ ಹೊಡೆದಿದೆ. ಇನ್ನು, ನಗರದ ವಿವಿಧೆಡೆ ರಸ್ತೆಯಲ್ಲಿ ಮದ್ಯದ ಬಾಟಲಿಗಳನ್ನು ಒಡೆದಿರುವುದು ಕೂಡ ವರದಿಯಾಗಿದೆ. ರಸ್ತೆಯಲ್ಲಿ ವಾಹನಗಳನ್ನು ತಡೆದು, ಬಸ್ಸುಗಳನ್ನು ಅಡ್ಡಗಟ್ಟಲಾಗಿದೆ.

RCB Winning Celebration In Shimoga city

ಜಿಲ್ಲೆಯ ವಿವಿಧೆಡೆಯು ವಿಜಯೋತ್ಸವ

ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಆರ್‌ಸಿಬಿ ಅಭಿಮಾನಿಗಳು ವಿಜಯೋತ್ಸವ ಆಚರಿಸಿದರು. ಈ ಸಲ ಕಪ್‌ ನಮ್ದು ಎಂದು ಘೋಷಣೆ ಕೂಗತ್ತ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಹಳ್ಳಿ, ಹಳ್ಳಿಗಳಲ್ಲು ಆರ್‌ಸಿಬಿ ಅಭಿಮಾನಗಳು ವಿಜಯೋತ್ಸವದಲ್ಲಿ ಭಾಗವಹಿಸಿದ್ದರು.

RCB Winning Celebration In Shimoga city

ಜನಪ್ರತಿನಿಧಿಗಳ ಸಂಭ್ರಮ

ಆರ್‌ಸಿಬಿ ಗೆಲುವನ್ನು ಶಿವಮೊಗ್ಗದ ಜನಪ್ರತಿನಿಧಿಗಳು ಕೂಡ ಸಂಭ್ರಮಿಸಿದ್ದಾರೆ. ಸಂಸದ ರಾಘವೇಂದ್ರ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಖುಷಿ ವ್ಯಕ್ತಪಡಿಸಿದ್ದಾರೆ. ‘ಈ ಸಲ ಕಪ್‌ ನಮ್ದೆ. ಆರ್‌ಸಿಬಿ ತಂಡಕ್ಕೆ ಶುಭಾಶಯ’ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

ಪ್ರಾರ್ಥನೆಗಳು, ಜಯಘೋಷಗಳು, ಅಚಲ ನಿಷ್ಠೆ – ಇವೆಲ್ಲವೂ ಈ ಕ್ಷಣಕ್ಕಾಗಿಯೇ. 18 ವರ್ಷಗಳ ದೀರ್ಘ ಕಾತುರದ ನಂತರ, RCB ಅಂತಿಮವಾಗಿ IPL ಚಾಂಪಿಯನ್ಸ್ ಆಗಿದೆ.ಮಧು ಬಂಗಾರಪ್ಪ, ಸಚಿವ

https://chat.whatsapp.com/JPJ0lTQsTKf365Fqu6Q7cd
ಈ ಫೋಟೊ ಮೇಲೆ ಕ್ಲಿಕ್‌ ಮಾಡಿ, ಶಿವಮೊಗ್ಗ ಲೈವ್‌ ವಾಟ್ಸಪ್‌ ಗ್ರೂಪ್‌ ಸೇರಿರಿ.

18 ವರ್ಷಗಳ ಕನ್ನಡಿಗರ ಕಾಯುವಿಕೆ, ದೇಶದ ಕ್ರಿಕೆಟ್ ಅಭಿಮಾನಿಗಳ ಹಾರೈಕೆಗೆ ತಕ್ಕ ಪ್ರತಿಫಲ ದೊರೆತಿದೆ. ತಮ್ಮ ನಿರಂತರ ಪರಿಶ್ರಮ ಹಾಗೂ ವಿರೋಚಿತ ಆಟದೊಂದಿಗೆ ಕನ್ನಡಿಗರ ಮನೆ ಮನ ಗೆದ್ದ ಪ್ರತಿಯೊಬ್ಬ ಆರ್.ಸಿ.ಬಿ ಆಟಗಾರರಿಗೂ ಅನಂತ ಅಭಿನಂದನೆಗಳು. ಈಗ ವಿಶ್ವ ಕ್ರಿಕೆಟ್ ಪ್ರೇಮಿಗಳೂ ಸಂಭ್ರಮಿಸಿ ಹೇಳುತ್ತಿದ್ದಾರೆ ‘ಕಪ್ ನಮ್ಮದೇ’ ಎಂದು.ಬಿ.ವೈ.ವಿಜಯೇಂದ್ರ, ಶಾಸಕ

Toyota-demo-car-sale.

ಕಾಯುವಿಕೆ ಮುಗಿಯಿತು. ಆರ್‌ಸಿಬಿ 2025ರ ಚಾಂಪಿಯನ್‌. ಅದ್ಭುತ ಪಂದ್ಯ. ಅದ್ಭುತ ತಂಡ. ಈ ಸಲ ಕಪ್‌ ನಮ್ದೆ.ಆರಗ ಜ್ಞಾನೇಂದ್ರ, ಶಾಸಕ

ಆರ್‌ಸಿಬಿ ತಂಡದ ಅಭೂತಪೂರ್ವ ಪ್ರದರ್ಶನದಿಂದ, ವೀರೋಚಿತ ಗೆಲುವಿನೊಂದಿಗೆ ದಶಕಗಳ ಕನ್ನಡಿಗರ ಕನಸು ಇಂದು ಈಡೇರಿದೆ. ರೋಚಕ ಪಂದ್ಯದಲ್ಲಿ ಚಾಲೆಂಜಿಂಗ್ ಪ್ರದರ್ಶನ ನೀಡಿದ ಆರ್.ಸಿ.ಬಿ ತಂಡದ ಪ್ರತಿಯೊಬ್ಬ ಆಟಗಾರನೂ ಅಭಿನಂದನಾರ್ಹ.ಬೇಳೂರು ಗೋಪಾಲಕೃಷ್ಣ, ಶಾಸಕ

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

ಕನ್ನಡಿಗರ ಮನೆ-ಮನ ಗೆದ್ದ ನಮ್ಮ ಆರ್.ಸಿ.ಬಿ. ಮೊಟ್ಟ ಮೊದಲ ಬಾರಿಗೆ ಐಪಿಎಲ್ ಕಪ್ ಎತ್ತಿ ಹಿಡಿದಿರುವ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹಾರ್ದಿಕ ಅಭಿನಂದನೆಗಳು.ಎಸ್‌.ಎನ್.ಚನ್ನಬಸಪ್ಪ, ಶಾಸಕ

ಸತತ 18 ವರ್ಷಗಳ ಪರಿಶ್ರಮಕ್ಕೆ ಫಲ ದೊರಕಿದೆ. ಕನ್ನಡಿಗರ ಬಹುದೊಡ್ಡ ಕನಸನ್ನು ನನಸು ಮಾಡಿದ ರಾಯಲ್ ಚಾಲೆಂರ್ಜಸ್ ಬೆಂಗಳೂರು ತಂಡದ ಪ್ರತಿಯೊಬ್ಬ ಕ್ರೀಡಾಪಟುವಿಗೆ ಧನ್ಯವಾದಗಳು.ಶಾರದಾ ಪೂರ್ಯಾನಾಯ್ಕ್‌, ಶಾಸಕಿ

ಇದನ್ನೂ ಓದಿ » ಜೈಲಿಂದ ಹೊರ ಬಂದು ತಿಂಗಳೊಳಗೆ ಸಚಿನ್‌ ಕಾಲಿಗೆ ಗುಂಡು, ಮತ್ತೆ ಅರೆಸ್ಟ್‌ ಆದ ಶ್ಯಾಡೋ, ಏನಿದು ಕೇಸ್‌?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : June 4, 2025

ಸರ್ವೆಗೆ ಹೋದಾಗ ಇಂಜಿನಿಯರ್‌, ಸರ್ವೇಯರ್‌ ಮೇಲೆ ಕೋಲು, ಕಲ್ಲುಗಳಿಂದ ದಾಳಿ

ಸರ್ವೆಗೆ ಹೋದಾಗ ಇಂಜಿನಿಯರ್‌, ಸರ್ವೇಯರ್‌ ಮೇಲೆ ಕೋಲು, ಕಲ್ಲುಗಳಿಂದ ದಾಳಿ

ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?

ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?

ಶಿವಮೊಗ್ಗದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ, ಏನೇನೆಲ್ಲ ಇರುತ್ತೆ? ಎಷ್ಟು ವಿದ್ಯಾರ್ಥಿಗಳಿಗೆ ಅವಕಾಶವಿದೆ?

ಶಿವಮೊಗ್ಗದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ, ಏನೇನೆಲ್ಲ ಇರುತ್ತೆ? ಎಷ್ಟು ವಿದ್ಯಾರ್ಥಿಗಳಿಗೆ ಅವಕಾಶವಿದೆ?

ಮನೆಗೆ ತಾಯಿ ಬಂದಾಗ ತೆರೆದಿತ್ತು ಹಿಂಬಾಗಿಲು; ಮಗಳು ಬಂದಾಗ ಹೊರಬಿತ್ತು ಶಾಕಿಂಗ್‌ ವಿಚಾರ

ಮನೆಗೆ ತಾಯಿ ಬಂದಾಗ ತೆರೆದಿತ್ತು ಹಿಂಬಾಗಿಲು; ಮಗಳು ಬಂದಾಗ ಹೊರಬಿತ್ತು ಶಾಕಿಂಗ್‌ ವಿಚಾರ

ಭಾರಿ ಮಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಾನಿ, ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಫಟಾಫಟ್‌ ಅಪ್‌ಡೇಟ್‌

ಭಾರಿ ಮಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಾನಿ, ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಫಟಾಫಟ್‌ ಅಪ್‌ಡೇಟ್‌

ಆಟೋ ನಾಪತ್ತೆಯಾಗಿ ಒಂದು ವರ್ಷದ ಬಳಿಕ ದಾಖಲಾಯ್ತು ಕೇಸ್‌, ಏನಿದು ಪ್ರಕರಣ?

ಆಟೋ ನಾಪತ್ತೆಯಾಗಿ ಒಂದು ವರ್ಷದ ಬಳಿಕ ದಾಖಲಾಯ್ತು ಕೇಸ್‌, ಏನಿದು ಪ್ರಕರಣ?

ವಿದ್ಯಾರ್ಥಿನಿಯರಿಗೆ ಉಪನ್ಯಾಸಕನಿಂದ ಮೆಸೇಜ್‌ ಆರೋಪ, ಕಾಲೇಜು ಮುಂದೆ ಆಕ್ರೋಶ

ವಿದ್ಯಾರ್ಥಿನಿಯರಿಗೆ ಉಪನ್ಯಾಸಕನಿಂದ ಮೆಸೇಜ್‌ ಆರೋಪ, ಕಾಲೇಜು ಮುಂದೆ ಆಕ್ರೋಶ

ಭದ್ರಾವತಿಯಲ್ಲಿ 20 ವರ್ಷದ ಯುವಕ ಅರೆಸ್ಟ್‌, ಈತನ ಮೇಲಿವೆ 11 ಕೇಸ್‌, ಏನೇನು?

ಭದ್ರಾವತಿಯಲ್ಲಿ 20 ವರ್ಷದ ಯುವಕ ಅರೆಸ್ಟ್‌, ಈತನ ಮೇಲಿವೆ 11 ಕೇಸ್‌, ಏನೇನು?

ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತೂ ಮಳೆಯಾಗುತ್ತಾ? ಇಲ್ಲಿದೆ ಇಂದಿನ ಹವಾಮಾನ ವರದಿ

ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತೂ ಮಳೆಯಾಗುತ್ತಾ? ಇಲ್ಲಿದೆ ಇಂದಿನ ಹವಾಮಾನ ವರದಿ

ಇಂದಿನ ಪಂಚಾಂಗ – ಇವತ್ತು ಷಷ್ಠಿ, ರೋಹಿಣಿ ನಕ್ಷತ್ರದ ದಿನ, ಯಾವ್ಯಾವ ಸಮಯ ಯಾವಾಗಿದೆ?

ಇಂದಿನ ಪಂಚಾಂಗ – ಇವತ್ತು ಷಷ್ಠಿ, ರೋಹಿಣಿ ನಕ್ಷತ್ರದ ದಿನ, ಯಾವ್ಯಾವ ಸಮಯ ಯಾವಾಗಿದೆ?

Leave a Comment