ಶಿವಮೊಗ್ಗ ಲೈವ್.ಕಾಂ | SHIMOGA | 4 ಮೇ 2020
ಶಿವಮೊಗ್ಗ ಜಿಲ್ಲೆಯಾದ್ಯಂತ ಮದ್ಯ ಖರೀದಿ ಜೋರಾಗಿದೆ. ಲಾಕ್‍ಡೌನ್ ಬಳಿಕ ಇದೆ ಮೊದಲ ಬಾರಿಗೆ ಮದ್ಯದಂಗಡಿಗಳ ಬಾಗಿಲು ತೆಗೆಯಲಾಗಿದೆ. ಗ್ರಾಹಕರು ಕ್ಯೂ ನಿಂತು ಮದ್ಯ ಖರೀದಿ ಮಾಡುತ್ತಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಅಂಗಡಿ ಮುಂದೆ ದೊಡ್ಡ ಕ್ಯೂ
ಶಿವಮೊಗ್ಗ ಜಿಲ್ಲೆಯಾದ್ಯಂತ ಎಂಎಸ್‍ಐಎಲ್ ಮದ್ಯ ಮಾರಾಟ ಮಳಿಗೆ ಮತ್ತು ಸಿಎಲ್ 2 ಲೈಸೆನ್ಸ್ ಹೊಂದಿರುವ ಮದ್ಯದಂಗಡಿಗಳ ಬಾಗಿಲು ತೆಗೆಯಲಾಗಿದೆ. ಒಂಭತ್ತು ಗಂಟೆಗೆ ಮದ್ಯದ ಅಂಗಡಿಗಳ ಬಾಗಿಲು ತೆಗೆಯಲಾಯಿತು. ಮದ್ಯಪ್ರಿಯರು ಕ್ಯೂನಲ್ಲಿ ನಿಂತು ಮದ್ಯ ಖರೀದಿ ಮಾಡುತ್ತಿದ್ದಾರೆ.
ಸಾಮಾಜಿಕ ಅಂತರ, ಬ್ಯಾರಿಕೇಡ್
ಕ್ಯೂನಲ್ಲಿ ನಿಲ್ಲುವವರಿಗೆ ಸಾಮಾಜಿಕ ಅಂತರ ಕಡ್ಡಾಯಗೊಳಿಸಲಾಗಿದೆ. ಮದ್ಯದಂಗಡಿ ಮುಂದೆ ಕ್ಯೂ ನಿಂತವರಿಗೆ ಪೊಲೀಸರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸುತ್ತಿದ್ದರು. ಅಲ್ಲದೆ ಈಗಾಗಲೇ ನಿಗದಪಡಿಸಿರುವ ಪ್ರಮಾಣದಷ್ಟು ಮದ್ಯ ಖರೀದಿಗಷ್ಟೆ ಅವಕಾಶವಿತ್ತು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]