ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗ: ಮಹಾನಗರ ಪಾಲಿಕೆಯು ಸೆ.22 ಮತ್ತು 23 ರಂದು ಕುವೆಂಪು ರಂಗಮಂದಿರ, ಎನ್.ಇ.ಎಸ್. ಮೈದಾನ ಹಾಗೂ ಅಂಬೇಡ್ಕರ್ ಭವನದಲ್ಲಿ ಮಕ್ಕಳ ದಸರಾ (Dasara) ಅಂಗವಾಗಿ ವಿವಿಧ ಸ್ಪರ್ಧೆ ಮತ್ತು ಕಾರ್ಯಕ್ರಮಗಳನ್ನು ಆಯೋಜಿಸಿದೆ.
ಎಲ್ಲೆಲ್ಲಿ ಏನೇನು ಕಾರ್ಯಕ್ರಮ ಇರಲಿದೆ?
ಸೆ.22 ರಂದು ಬೆಳಗ್ಗೆ 9ಕ್ಕೆ ಕುವೆಂಪು ರಂಗಮಂದಿರ ಹಾಗೂ ಎನ್.ಇ.ಎಸ್. ಮೈದಾನದಲ್ಲಿ 5 ರಿಂದ 7ನೇ ತರಗತಿ ವಿಧ್ಯಾರ್ಥಿಗಳಿಗೆ ಮತ್ತು 8 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ದೆ, ಶಿವಮೊಗ್ಗ ದಸರಾ ವೈವಿದ್ಯತೆ ಬಗ್ಗೆ ಪ್ರಬಂಧ ಸ್ಪರ್ಧೆ, ಛದ್ಮವೇಷ, 1 ನಿಮಿಷದಲ್ಲಿ ಪ್ಲಾಸ್ಟಿಕ್ ಬಾಟಲಿಗೆ ಬೊಗಸೆಯಿಂದ ನೀರು ತುಂಬಿಸುವುದು, ದೇಶಭಕ್ತಿ ಗೀತೆ ಸ್ಪರ್ದೆ, ಶಾಟ್‌ಪುಟ್ ಸ್ಪರ್ದೆ.

ಸೆ.23 ರಂದು ಬೆಳಗ್ಗೆ 9ಕ್ಕೆ ಮಕ್ಕಳ ಜಾಥಾ ಹಮ್ಮಿಕೊಂಡಿದ್ದು ಡಿ.ವಿ.ಎಸ್. ಶಾಲೆಯಿಂದ ಶಿವಮೂರ್ತಿ ಸರ್ಕಲ್ ಮಾರ್ಗವಾಗಿ ಶಿವಪ್ಪ ನಾಯಕ ವೃತ್ತದವರೆಗೆ, ಕೃಷಿ ಇಲಾಖೆಯಿಂದ ಓ.ಟಿ.ರಸ್ತೆಯ ಮಾರ್ಗವಾಗಿ ಶಿವಪ್ಪ ನಾಯಕ ವೃತ್ತದವರೆಗೆ, ಮಿಳಘಟ್ಟ ಕಡೆಯಿಂದ ಅಶೋಕವೃತ್ತದ ಮಾರ್ಗವಾಗಿ ಶಿವಪ್ಪ ನಾಯಕ ವೃತ್ತದವರೆಗೆ, ಹೊಳೆ ಬಸ್ ಸ್ಟಾಪ್ ರಸ್ತೆಯ ಮಾರ್ಗವಾಗಿ ಶಿವಪ್ಪ ನಾಯಕ ವೃತ್ತದವರೆಗೆ ಹಾಗೂ ಜೈಲ್ ರಸ್ತೆಯಿಂದ ಗೋಪಿ ವೃತ್ತದ ಮಾರ್ಗವಾಗಿ ಶಿವಪ್ಪ ನಾಯಕ ವೃತ್ತದವರೆಗೆ ಸಾಗುತ್ತದೆ.
ಸಂಜೆ 5ಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಸಮಾರೋಪ ಸಮಾರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಕ್ಕಳ ದಸರಾ ಸಮಿತಿಯ ಸದಸ್ಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ » ಸಾನಿಯಾ ಕಪೂರ್ ಮೆಸೇಜ್‌ಗೆ ಶಿವಮೊಗ್ಗದ ವ್ಯಕ್ತಿ ಕಳೆದುಕೊಂಡಿದ್ದು ಬರೋಬರಿ ₹55 ಲಕ್ಷ, ಏನಿದು ಕೇಸ್?
Makkala Dasara In Shivamogga City The Shivamogga City Corporation is excited to announce the hosting of Makkala Dasara on September 22 and 23, featuring a variety of events tailored for children. The festival will showcase a vibrant children’s procession that will fill the city’s streets, celebrating the spirit of Dasara. A comprehensive schedule of competitions, including drawing and fancy dress, will be made available, alongside details regarding the grand procession and various cultural programs designed to engage and entertain the younger audience.

