ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 31 MARCH 2021
ಕರೋನ ಎರಡನೆ ಅಲೆ ಭೀತಿ, ರಾಜ್ಯ ಸರ್ಕಾರ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಡ್ಡಾಯಗೊಳಿಸಿದ ಬೆನ್ನಿಗೆ ಶಿವಮೊಗ್ಗದಲ್ಲಿ ಮಾಸ್ಕ್ ಕಾರ್ಯಾಚರಣೆ ಶುರುವಾಗಿದೆ. ಹೆಚ್ಚು ಜನ ಸೇರುವೆಡೆ ಮಾಸ್ಕ್ ಧರಿಸದೆ ಓಡಾಡುತ್ತಿದ್ದವರಿಗೆ ಪಾಲಿಕೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.
ಗಾಂಧಿ ಬಜಾರ್ನಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ದಿಢೀರ್ ಮಾಸ್ಕ್ ಕಾರ್ಯಾಚರಣೆ ಆರಂಭಿಸಿದರು. ಬಸವೇಶ್ವರ ದೇವಸ್ಥಾನದ ಬಳಿ ಮಾಸ್ಕ್ ಧರಿಸದೆ ಬರುತ್ತಿದ್ದವರನ್ನು ತಡೆದು, ದಂಡ ಹಾಕಿದ್ದಾರೆ.
ಮಹಾನಗರ ಪಾಲಿಕೆ ಕಮಿಷನರ್ ಚಿದಾನಂದ ವಟಾರೆ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಮಾಸ್ಕ್ ಧರಿಸದೆ ಬಂದ ಹಲವರು ಅಧಿಕಾರಿಗಳಿಗೆ ಸಿಕ್ಕಬಿದ್ದರು. ಕೆಲವರು ದಂಡ ಹಾಕುತ್ತಿರುವುದು ಗೊತ್ತಾಗುತ್ತಿದ್ದಂತೆ ಎಸ್ಕೇಪ್ ಆದರು. ಒಬ್ಬ ಯುವಕ, ತನ್ನಲ್ಲಿ ಫೈನ್ ಕಟ್ಟಲು ಹಣವಿಲ್ಲ ಎಂದು ಬೈಕ್ ಬಿಟ್ಟು ಹೋದ ಘಟನೆಯು ನಡೆಯುತು.
VIDEO REPORT
ಪಾಲಿಕೆ ಕ್ರಮಕ್ಕೆ ವರ್ತಕರ ಆಕ್ರೋಶ
ಇತ್ತ ಅಧಿಕಾರಿಗಳ ಕಾರ್ಯಾಚರಣೆಗೆ ಗಾಂಧಿ ಬಜಾರ್ನ ವರ್ತಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವ್ಯಾಪಾರ, ವಹಿವಾಟು ಇಲ್ಲದೆ ವ್ಯಾಪಾರಿಗಳು ನಲುಗಿದ್ದಾರೆ. ಈ ನಡುವೆ ಮಾಸ್ಕ್ ಕಾರ್ಯಾಚರಣೆಯಿಂದ ವ್ಯಾಪಾರಕ್ಕೆ ಮತ್ತಷ್ಟು ಪೆಟ್ಟು ಬೀಳಲಿದೆ. ರಾಜಕಾರಣಿಗಳ ಹುಟ್ಟುಹಬ್ಬ, ರಾಜಕೀಯ ಪ್ರಚಾರ, ಕಾರ್ಯಕ್ರಮಗಳಲ್ಲಿ ಮಾಸ್ಕ್ ಧರಿಸದೆ ಬಂದವರಿಗೆ ದಂಡ ಹಾಕುವ ಬದಲು ಸಾಮಾನ್ಯ ಜನರನ್ನು ಹಿಡಿದು ದಂಡ ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422