ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 31 JULY 2023
SHIMOGA : ಪ್ರತಿ ಲೀಟರ್ ನಂದಿನಿ ಹಾಲಿನ ದರವನ್ನು (Milk Rate) 3 ರೂ. ಏರಿಕೆ ಮಾಡಲಾಗುತ್ತಿದೆ. ಪರಿಷ್ಕೃತ ದರ ಆ.1ರಿಂದ ಜಾರಿಗೆ ಬರಲಿದೆ. ಹೆಚ್ಚುವರಿ ದರವನ್ನು ರೈತರಿಗೆ ವರ್ಗಾಯಿಸಲಾಗುತ್ತದೆ ಎಂದು ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ ಎನ್.ಹೆಚ್.ಶ್ರೀಪಾದರಾವ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಪಾದರಾವ್, ಪ್ರತಿ ಲೀಟರ್ ಹಾಲು ಮತ್ತು ಮೊಸರಿನ ದರವನ್ನು 3 ರೂ. ಹೆಚ್ಚಳ ಮಾಡುವಂತೆ ರಾಜ್ಯ ಸರ್ಕಾರ ಸೂಚಿಸಿದೆ. ಪರಿಷ್ಕೃತ ಹೆಚ್ಚುವರಿ ದರವನ್ನು ಹಾಲು ಉತ್ಪಾದಕ ರೈತರಿಗೆ ವರ್ಗಾಯಿಸುವಂತೆ ತಿಳಿಸಲಾಗಿದೆ ಎಂದರು.
ಇದನ್ನೂ ಓದಿ – ದಾರಿ ಮಧ್ಯೆ ಅಜ್ಜಿ ಜೊತೆ MLA ಮಾತು, ಮುಗ್ಧ ಉತ್ತರಗಳಿಗೆ ನೆಟ್ಟಿಗರು ಫಿದಾ, ವಿಡಿಯೋಗೆ ಮೆಚ್ಚುಗೆ
ರೈತರಿಗೆ ಪ್ರತಿ ಲೀಟರ್‌ಗೆ ಎಷ್ಟು ಮೊತ್ತ ಸಿಗಲಿದೆ?
ಹಾಲು ಉತ್ಪಾದಕ ಸಂಘಗಳಿಗೆ ಶಿವಮೊಗ್ಗ ಹಾಲು ಒಕ್ಕೂಟದಿಂದ ಈವರೆಗು 33.71 ರೂ. ನೀಡಲಾಗುತ್ತಿದೆ. ಹಾಲು ಉತ್ಪಾದಕರಿಗೆ 31.85 ರೂ. ಒದಗಿಸಲಾಗುತ್ತಿದೆ. ದರ ಹೆಚ್ಚಳದಿಂದಾಗಿ ಇನ್ಮುಂದೆ ಸಂಘಗಳಿಗೆ 36.83 ರೂ. ಸಿಗಲಿದೆ. ಹಾಲು ಉತ್ಪಾದಕರಿಗೆ 34.97 ರೂ. ನೀಡಲಾಗುತ್ತದೆ ಎಂದು ಶ್ರೀಪಾದರಾವ್ ತಿಳಿಸಿದರು.
ಅತಿ ಹೆಚ್ಚು ಹಾಲು ಉತ್ಪಾದನೆ ಆಗುವ ಆರು ರಾಜ್ಯಗಳ ಪೈಕಿ ಕರ್ನಾಟಕದಲ್ಲಿಯೆ ಅತಿ ಕಡಿಮೆ ದರ ಇದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹಾಲು ಒಕ್ಕೂಟದ ಉಪಾಧ್ಯಕ್ಷ ಹೆಚ್.ಕೆ.ಬಸಪ್ಪ, ವ್ಯವಸ್ಥಾಪಕ ನಿರ್ದೇಶಕ ಎಸ್.ಜಿ.ಶೇಖರ್, ನಿರ್ದೇಶಕರಾದ ವೀರಭದ್ರಬಾಬು, ಡಿ.ಆನಂದ, ವಿದ್ಯಾಧರ, ಜಗದೀಶಪ್ಪ ಬಣಕಾರ, ಟಿ.ಶಿವಶಂಕರಪ್ಪ, ತಿಪ್ಪೇಸ್ವಾಮಿ, ದಿನೇಶ್, ಬಸವರಾಜಪ್ಪ, ತಾರಾನಾಥ, ಸೋಮಶೇಖರಪ್ಪ, ಯಶವಂತರಾಜು ಸೇರಿದಂತೆ ಹಲವರು ಇದ್ದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422