ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ತಾಂತ್ರಿಕ ಕಾರಣದಿಂದಾಗಿ ಜಾತಿ ಸಮೀಕ್ಷೆ(Caste Census) ಕಾರ್ಯಕ್ಕೆ ಸಮಸ್ಯೆಯಾಗಿತ್ತು. ಶಿಕ್ಷಕರು ಸ್ಪಂದಿಸುತ್ತಿಲ್ಲ ಎಂಬುದು ಸುಳ್ಳು. ಈಗ ಎಲ್ಲ ಸಮಸ್ಯ ಪರಿಹಾರವಾಗಿದೆ. ನಿಗದಿತ ಅವಧಿಯೊಳಗೆ ಸಮೀಕ್ಷೆ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಕುವೆಂಪು ರಂಗಮಂದಿರ ಆವರಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಮುಖ್ಯಮಂತ್ರಿ ಅವರು ಎಲ್ಲಾ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಒಗಳ ಜೊತೆಗೆ ಸಭೆ ನಡೆಸಿದ್ದಾರೆ. ಎಲ್ಲ ಸಮಸ್ಯೆಗಳು ಪರಿಹಾರವಾಗಿದೆ. ಶಿಕ್ಷಕರು ಸಮೀಕ್ಷೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲವು ಕಡೆ ಶಿಕ್ಷಕರ ಕೊರತೆಯಾಗಿತ್ತು. ಶಿವಮೊಗ್ಗದಲ್ಲಿಯೆ ಸಮೀಕ್ಷೆಗೆ ಶಿಕ್ಷಕರ ಕೊರತೆಯಾಗಿದ್ದರಿಂದ ಪ್ರೌಢಶಾಲೆ ಶಿಕ್ಷಕರನ್ನು ಕೂಡ ತೊಡಗಿಸಲಾಗಿದೆ ಎಂದರು.
ಮಿನಿಸ್ಟರ್ ಏನೆಲ್ಲ ಹೇಳಿದರು?
ಕಾರಣಾಂತರದಿಂದ ನೇಮಕಾತಿ ಪ್ರಕ್ರಿಯೆ ತೊಡಕಾಗಿತ್ತು. ಈಗ ಹಂತ ಹಂತವಾಗಿ ಪ್ರಕ್ರಿಯೆ ಆರಂಭವಾಗಿದೆ. 18,000 ಸಾವಿರ ಶಿಕ್ಷಕರ ನೇಮಿಸಿಕೊಳ್ಳುವ ಹುಮ್ಮಸ್ಸಿನಲ್ಲಿದ್ದೇನೆ.
ಅರಣ್ಯ ಇಲಾಖೆ ಸರ್ವೆ ಮಾಡುತ್ತಿರುವ ಕುರಿತು ಬೇಳೂರು ಗೋಪಾಲಕೃಷ್ಣ ಅವರು ಸಭೆ ನಡೆಸಿದ್ದಾರೆ. ಅ.5ರಂದು ಅರಣ್ಯ ಇಲಾಖೆ ಜೊತೆಗೆ ಚರ್ಚೆ ನಡೆಸುತ್ತೇವೆ. ನ್ಯಾಯಾಲಯದ ವಿಚಾರ ಬಂದಾಗ ಅನಿವಾರ್ಯತೆ ಉಂಟಾಗಲಿದೆ.
ಎಸ್ಸೆಸ್ಸೆಲ್ಸಿ ಕನಿಷ್ಠ ಅಂಕಗಳ ವಿಚಾರದಲ್ಲಿ ಇನ್ನೂ ನಿರ್ಧಾರವಾಗಿಲ್ಲ. ಈ ಕುರಿತು ಸಾರ್ವಜನಿಕವಾಗಿ ಮಾಹಿತಿ ಸಂಗ್ರಹಿಸಿದ್ದೇವೆ. ಮುಖ್ಯಮಂತ್ರಿ ಅವರು ಯಾವ ನಿರ್ಧಾರ ಕೈಗೊಳ್ಳುತ್ತಾರೋ ಅದರಂತೆ ನಡೆಯಲಿದೆ.
ಇದನ್ನೂ ಓದಿ » ದಸರಾ ದೀಪಾಲಂಕಾರಕ್ಕೆ ಬಾಲಕ ಸಾವು, ಏನಿದು ಕೇಸ್? ಹೇಗಾಯ್ತು ಘಟನೆ?
Caste Census
LATEST NEWS
- ಶಿವಮೊಗ್ಗ ಡಿ.ಸಿ ಎದುರು ಮೈದಾನಕ್ಕೆ ಬ್ಯಾರಿಕೇಡ್, ಹಿಂದೂ ಸಂಘಟನೆಗಳು ಗರಂ, ಕಾರಣವೇನು?

- ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್

- ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

- ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

- ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

About The Editor
ನಿತಿನ್ ಆರ್.ಕೈದೊಟ್ಲು

















