ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 6 NOVEMBER 2023
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
SHIMOGA : ಅನುಮಾನಾಸ್ಪದ ಬಾಕ್ಸ್ (BOX) ಪತ್ತೆಯಿಂದ ಹಿನ್ನೆಲೆ ಬಾಂಬ್ ನಿಷ್ಕ್ರಿಯ ದಳ ಇಡೀ ರಾತ್ರಿ ಕಾರ್ಯಾಚರಣೆ ನಡೆಸಿತು. ಕಾರ್ಯಾಚರಣೆ ಹಿನ್ನೆಲೆ ಶಾಸಕ ಎಸ್.ಎನ್.ಚನ್ನಬಸಪ್ಪ ಸ್ಥಳದಲ್ಲಿ ಬೀಡು ಬಿಟ್ಟಿದ್ದರು.
ರಾತ್ರಿ ಕಾರ್ಯಾಚರಣೆ ಆರಂಭವಾದ ಹೊತ್ತಿಗೆ ಶಾಸಕ ಚನ್ನಬಸಪ್ಪ ಸ್ಥಳಕ್ಕೆ ಭೇಟಿ ನೀಡಿದರು. ಬೆಳಗಿನ ಜಾವ 4.30ರ ಹೊತ್ತಿಗೆ ಕಾರ್ಯಾಚರಣೆ ಅಂತ್ಯವಾಗುವವರೆಗೆ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು. ಕಾರ್ಯಾಚರಣೆ ಸಂದರ್ಭ ಪೊಲೀಸ್ ಅಧಿಕಾರಿಗಳು, ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳ ಜೊತೆಗೆ ಆಗಾಗ ಚರ್ಚೆ ನಡೆಸಿದರು.
ಇದನ್ನೂ ಓದಿ- ಶಿವಮೊಗ್ಗದಲ್ಲಿ ಅನುಮಾನಾಸ್ಪದ ಬಾಕ್ಸ್ ಪತ್ತೆ, ಇಡೀ ರಾತ್ರಿ ಹೇಗಿತ್ತು ಕಾರ್ಯಾಚರಣೆ? ಇಲ್ಲಿದೆ ಟೈಮ್ ಟೂ ಟೈಮ್ ಡಿಟೇಲ್ಸ್
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ
ಅನುಮಾನಾಸ್ಪದ ಬಾಕ್ಸ್‌ಗಳನ್ನು ತೆರೆದು ತಜ್ಞರು ಪರಿಶೀಲನೆ ನಡೆಸಿದರು. ಈ ಸಂದರ್ಭ ಹಿರಿಯ ಅಧಿಕಾರಿಗಳ ಜೊತೆಗೆ ಶಾಸಕ ಚನ್ನಬಸಪ್ಪ ಕೂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಬಾಕ್ಸ್ ಒಳಗಿದ್ದ ವಸ್ತುಗಳ ಕುರಿತು ಮಾಹಿತಿ ಪಡೆದರು.
ಮುಖಕ್ಕೆ ಹಚ್ಚುವ ಪೌಡರ್ ಅಲ್ಲ
ಇದೇ ವೇಳೆ ಮಾಧ್ಯಮಗಳ ಜೊತೆಗೆ ಶಾಸಕ ಚನ್ನಬಸಪ್ಪ ಮಾತನಾಡಿದರು. ಆಗ ಅವರು ತಿಳಿಸಿದ ಎರಡು ಪ್ರಮುಖ ಪಾಯಿಂಟ್ ಇಲ್ಲಿದೆ.
ಪ್ರತಿ ಟ್ರಂಕ್‌ನಲ್ಲಿ ಎರಡು ಬ್ಯಾಗ್‌ಗಳಿದ್ದವು. ಗೊಬ್ಬರದ ಚೀಲದ ಮಾದರಿಯಲ್ಲಿವೆ. ಅವುಗಳಿಗೆ ನ್ಯೂಸ್ ಪೇಪರ್ ಹಾಕಿ ಪ್ಯಾಕ್ ಮಾಡಲಾಗಿದೆ. ಆ ಚೀಲಗಳಲ್ಲಿ ಬಿಳಿ ಬಣ್ಣದ ಪೌಡರ್ ಸಿಕ್ಕಿದೆ. ಅದನ್ನು ಯಾವ ಕಾರಣಕ್ಕೆ ಯಾವುದಕ್ಕೆ ಬಳಕೆ ಮಾಡುತ್ತಾರೆ ಅನ್ನುವುದ ಸಹಜವಾಗಿ ಗೊತ್ತಾಗುತ್ತದೆ. ದೇವರು ದೊಡ್ಡವನು. ಇದರ ಪರಿಣಾಮ ಯಾವಾಗ ಏನಾಗುತ್ತಿತ್ತೊ ಗೊತ್ತಿಲ್ಲ.
ಬಹಳ ಎಚ್ಚರಿಕೆ ವಹಿಸಬೇಕಿದೆ ಅನಿಸುತ್ತದೆ. ಅದು ಮುಖಕ್ಕೆ ಹಚ್ಚಿಕೊಳ್ಳುವ ಪೌಡರ್ ಅಲ್ಲ. ಸ್ನೋ ಪೌಡರ್ ಅಂತು ಅಲ್ಲವೆ ಅಲ್ಲ. ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಸದ್ಯಕ್ಕೆ ಶಿವಮೊಗ್ಗ ನಗರ ಸುರಕ್ಷಿತವಾಗಿದೆ.