ಶಿವಮೊಗ್ಗ ಜೈಲಿನಲ್ಲಿ ಕೈದಿಗಳ ಬ್ಯಾರೆಕ್‌ನಲ್ಲಿ ಮೊಬೈಲ್‌ ಚಾರ್ಜರ್‌, ಚಿಲುಮೆ, ಬೀಡಿ, ಸಿಗರೇಟ್‌..!

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIMOGA , 30 AUGUST 2024 : ನಟ ದರ್ಶನ್‌ ಸಹಚರರು ಆಗಮನಕ್ಕು ಮುನ್ನ ಶಿವಮೊಗ್ಗ ಕೇಂದ್ರ ಕಾರಾಗೃಹದ (Jail) ಮೇಲೆ ನೂರಕ್ಕೂ ಹೆಚ್ಚು ಪೊಲೀಸರು ದಾಳಿ ನಡೆಸಿದ್ದರು. ಈ ಸಂದರ್ಭ ಬೀಡಿ, ಸಿಗರೇಟ್‌ ಜೊತೆಗೆ ನಗದು, ತಂಬಾಕು ಪ್ಯಾಕೆಟ್‌, ಚಾರ್ಜರ್‌ಗಳು ಪತ್ತೆಯಾಗಿವೆ.

ಈ ಸಂಬಂಧ ಪೊಲೀಸರು ತುಂಗಾ ನಗರ ಠಾಣೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಂಡಿದ್ದಾರೆ.

» ಜೈಲಿನಲ್ಲಿ ಏನೇನೆಲ್ಲ ಸಿಕ್ಕಿದೆ?

ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಪೊಲೀಸರು ಆ.28ರಂದು ಬೆಳಗ್ಗೆ 4.15 ರಿಂದ 5.45ರವರೆಗೆ ದಾಳಿ ನಡೆಸಿ, ಶೋಧ ಕಾರ್ಯ ನಡೆಸಲಾಗಿತ್ತು. ಜೈಲಿನ ಕಾವೇರಿ, ಕುಮದ್ವತಿ, ತುಂಗಾ, ಭದ್ರಾ ಮತ್ತು ಶರಾವತಿ ಬ್ಲಾಕ್‌ಗಳಲ್ಲಿ ಪ್ರತಿ ಸೆಲ್‌ನಲ್ಲಿಯು ತಪಾಸಣೆ ನಡೆಸಲಾಗಿತ್ತು. ಕುಮದ್ವತಿ ಬ್ಲಾಕ್‌ನಲ್ಲಿ ತಪಾಸಣೆ ವೇಳೆ ಹಲವು ವಸ್ತುಗಳು ಪತ್ತೆಯಾಗಿವೆ.

police-raid-on-central-prision-in-Shimoga

8 ಚಿಲುಮೆ (ಏನಿದು ಚಿಲುಮೆ? ಓದಲು ಇಲ್ಲಿ ಕ್ಲಿಕ್‌ ಮಾಡಿ),  320 ರೂ. ಮೌಲ್ಯದ ಸಿಗರೇಟ್‌, 855 ರೂ. ಮೌಲ್ಯದ ಬೀಡಿ, 310 ರೂ. ಮೌಲ್ಯದ ಬೆಂಕಿ ಪಟ್ಟಣ, ಒಂದು ಚಾರ್ಜಿಂಗ್‌ ಕೇಬಲ್‌, 1 ಚಿಲುಮೆ ಒಲೆ, 3500 ರೂ. ನಗದು, 40 ರೂ. ಮೌಲ್ಯದ ಮಧು ಪ್ಯಾಕೆಟ್‌, ಮೊಬೈಲ್‌ ಫೋನ್‌ ಚಾರ್ಜರ್‌ ಸೇರಿದ ಒಟ್ಟು 5,024 ರೂ. ಮೌಲ್ಯದ ವಸ್ತುಗಳು ಪತ್ತೆಯಾಗಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ ⇒ ದರ್ಶನ್‌ ಸಹಚರರು ಆಗಮನಕ್ಕು ಮುನ್ನವೆ ಶಿವಮೊಗ್ಗ ಜೈಲಿನ ಮೇಲೆ 120 ಪೊಲೀಸರಿಂದ ದಾಳಿ

ಕಾರಾಗೃಹ ಅಧಿನಿಯಮದ ಅಡಿಯಲ್ಲಿ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಇದನ್ನೂ ಓದಿ ⇒ ಯಶಸ್ಸಿಗೆ ಬೇಕು ಈ 3 ತತ್ವ, ವಿದ್ಯಾರ್ಥಿಗಳಿಗೆ ಸಕ್ಸಸ್‌ ಸೀಕ್ರೆಟ್‌ ತಿಳಿಸಿದ ನಂಜಪ್ಪ ಟ್ರಸ್ಟ್‌ ಅಧ್ಯಕ್ಷ

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment