NEWS HIGHLIGHTS
ಶಿವಮೊಗ್ಗ: ಪಾಕಿಸ್ತಾನದ ಜೊತೆಗೆ ಯುದ್ದದ ಸನ್ನಿವೇಶದ ಹಿನ್ನೆಲೆ ದೇಶಾದ್ಯಂತ ಮಾಕ್ ಡ್ರಿಲ್ (Mock Drill) ನಡೆಯುತ್ತಿದೆ. ಇವತ್ತು ಶಿವಮೊಗ್ಗದ ರಾಗಿಗುಡ್ಡದಲ್ಲಿರುವ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದಲ್ಲಿ ಮಾಕ್ ಡ್ರಿಲ್ ನಡೆಯಿತು.
➤ ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.ರಕ್ಷಾ ವಿವಿಯಲ್ಲಿ ಹೇಗಿತ್ತು ಡ್ರಿಲ್?
- ಇಂದು ಮಧ್ಯಾಹ್ನ ರಕ್ಷಾ ವಿಶ್ವವಿದ್ಯಾಲಯದಲ್ಲಿ ಸೈರನ್ ಶಬ್ದ ಕೇಳಿಸಿತು.
- ತರಗತಿಯಲ್ಲಿ ಪಾಠ ಕೇಳುತ್ತಿದ್ದ ವಿದ್ಯಾರ್ಥಿಗಳು ಕೂಡಲೆ ತಮ್ಮನ್ನು ರಕ್ಷಿಸಿಕೊಳ್ಳುತ್ತಾರೆ. ಬೆಂಚ್, ಟೇಬಲ್‌ಗಳ ಅಡಿಯಲ್ಲಿ ಕುಳಿತು ರಕ್ಷಣೆ ಪಡೆಯುತ್ತಾರೆ.
- ಬಯಲಿನಲ್ಲಿ ಆಟವಾಡುತ್ತಿದ್ದವರು ಕಟ್ಟಡಗಳ ಅಡಿಯಲ್ಲಿ ರಕ್ಷಣೆ ಪಡೆಯಲಿದ್ದಾರೆ. ಕಟ್ಟಡಗಳು ಇಲ್ಲದೆಡೆ ನೆಲದ ಮೇಲೆ ಮಲಗಿ ತಮ್ಮ ರಕ್ಷಣೆ ಮಾಡಿಕೊಳ್ಳುವ ಮಾಕ್ ಡ್ರಿಲ್ ನಡೆಯಿತು.
- ಸ್ವಲ್ಪ ಸಮಯದ ಬಳಿಕ ಗಾಯಾಳುಗಳ ರಕ್ಷಣೆ, ಪ್ರಾಥಮಿಕ ಚಿಕಿತ್ಸೆ ನೀಡುವುದು ಮಾಕ್ ಡ್ರಿಲ್ ಮಾಡಲಾಯಿತು.
ದೇಶಾದ್ಯಂತ ಮಾಕ್ ಡ್ರಿಲ್ ನಡೆಯುತ್ತಿದೆ. ಸೈರನ್ ಕೂಗುತ್ತಿದ್ದಂತೆ ತರಗತಿಯಲ್ಲಿ ಕುಳಿತ ವಿದ್ಯಾರ್ಥಿಗಳು ರಕ್ಷಣೆ ಪಡೆದರು. ಗಾಯಾಳುಗಳ ರಕ್ಷಣೆ, ಸುರಕ್ಷಿತ ಸ್ಥಳಗಳಿಗೆ ಅವರನ್ನು ರವಾನಿಸುವುದು, ತುರ್ತು ಸಂದರ್ಭ ಬಯಲಿನಲ್ಲಿ ರಕ್ಷಣೆ ಪಡೆಯುವ ವಿಧಾನಗಳನ್ನು ಅನುಸರಿಸಲಾಯಿತು.
– ಡಾ. ಕಾವೇರಿ ಠಂಡನ್, ರಕ್ಷಾ ವಿವಿ ನಿರ್ದೇಶಕಿ

ಶಿವಮೊಗ್ಗ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದಲ್ಲಿ ಆಂತರಿಕ ಭದ್ರತೆ ಸಂಬಂಧಿತ ವಿಷಯಗಳ ಪದವಿ ತರಗತಿಗಳು ನಡೆಯುತ್ತಿವೆ. ದೇಶಾದ್ಯಂತ ಮಾಕ್ ಡ್ರಿಲ್ ನಡೆಯತ್ತಿರುವ ಹಿನ್ನೆಲೆ ರಕ್ಷಾ ವಿವಿಯಲ್ಲಿಯು ತರಬೇತಿ ನೀಡಲಾಯಿತು.
ಇದನ್ನೂ ಓದಿ » ಶಿವಮೊಗ್ಗ ಪೊಲೀಸರ ದಿಢೀರ್ ಕಾರ್ಯಾಚರಣೆ, ರೌಡಿಗಳ ಮನೆಗಳ ಮೇಲೆ ದಾಳಿ







