ಶಿವಮೊಗ್ಗದಲ್ಲಿ RSS ಮುಖ್ಯಸ್ಥ ಮೋಹನ್ ಭಾಗವತ್, ಕೋಟೆ ದೇಗುಲ, ಓ.ಟಿ.ರಸ್ತೆಗೆ ಭೇಟಿ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 30 DECEMBER 2022

ಶಿವಮೊಗ್ಗ : ಆರ್.ಎಸ್.ಎಸ್ (rss) ಸರಸಂಘ ಚಾಲಕ ಮೋಹನ್ ಭಾಗವತ್ (Mohan Bhagwat) ಅವರು ನಗರದ ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ಓ.ಟಿ.ರಸ್ತೆಯಲ್ಲಿರುವ ಆರ್.ಎಸ್.ಎಸ್ ಹಿರಿಯ ಸ್ವಯಂ ಸೇವಕ ದಿನೇಶ್ ಪೈ ಅವರ ಮನೆಗೆ ತೆರಳಿ ಸಾಂತ್ವನ ಹೇಳಿದರು.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

Shimoga Nanjappa Hospital

ಪ್ರಾಂತ ಮಟ್ಟದ ಬೈಠಕ್

ಶಿವಮೊಗ್ಗದ ತ್ಯಾವರೆಚಟ್ನಹಳ್ಳಿಯ ಶುಭಶ್ರೀ ಸಮುದಾಯ ಭವನದಲ್ಲಿ ಆರ್.ಎಸ್.ಎಸ್ ಪ್ರಾಂತ ಬೈಠಕ್ ನಡೆಯುತ್ತಿದೆ. ಮೂರು ದಿನದ ಬೈಠಕ್ ಇಂದಿನಿಂದ ಆರಂಭವಾಗಿದೆ. ಇದರಲ್ಲಿ ಭಾಗವಹಿಸಿ ಸ್ವಯಂ ಸೇವಕರಿಗೆ ಮಾರ್ಗದರ್ಶನ ಮಾಡಲು ಮೋಹನ್ ಭಾಗವತ್ (Mohan Bhagwat) ಅವರು ಶಿವಮೊಗ್ಗಕ್ಕೆ ಆಗಮಿಸಿದ್ದಾರೆ. ಮೂರು ದಿನದ ಬೈಠಕ್ ನಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ – ಶಿವಮೊಗ್ಗ ನಗರದ 6 ಕಡೆ 2 ಸಾವಿರಕ್ಕೂ ಹೆಚ್ಚು ಸೆಟ್ ದೋಸೆ ಹಂಚಿದ ಭಕ್ತರು

ಕೋಟೆ ದೇಗುಲಕ್ಕೆ ಭೇಟಿ

ನಗರದ ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನಕ್ಕೆ ಸರಸಂಘ ಚಾಲಕ ಮೋಹನ್ ಭಾಗವತ್ ಅವರು ಭೇಟಿ ನೀಡಿದರು. ದೇವರಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಬಳಿಕ ದೇವಸ್ಥಾನದ ಆವರಣದಲ್ಲಿ ಅರ್ಚಕರ ಕುಟುಂಬ ಮತ್ತು ಆರ್.ಎಸ್.ಎಸ್ ಮುಖಂಡರು, ಕಾರ್ಯಕರ್ತರೊಂದಿಗೆ ಫೋಟೊ ಕ್ಲಿಕ್ಕಿಸಿಕೊಂಡರು.

RSS Mohan Bhagvath visit Shimoga

ಸಾಂತ್ವನ ಹೇಳಿದ ಮೋಹನ್ ಭಾಗವತ್

ಆರ್.ಎಸ್.ಎಸ್ ಹಿರಿಯ ಸ್ವಯಂ ಸೇವಕ ದಿನೇಶ್ ಪೈ ಅವರು ಇತ್ತೀಚೆಗೆ ನಿಧನರಾದರು. ಓ.ಟಿ.ರಸ್ತೆಯಲ್ಲಿರುವ ಅವರ ಮನೆಗೆ ಭೇಟಿ ನೀಡಿದ ಮೋಹನ್ ಭಾಗವತ್ ಅವರು, ಕುಟುಂಬದವರಿಗೆ ಸಾಂತ್ವನ ಹೇಳಿದರು.

RSS Mohan Bhagvat

ಮೋಹನ್ ಭಾಗವತ್ ಅವರ ಭೇಟಿ ಹಿನ್ನೆಲೆ ಕೋಟೆ ರಸ್ತೆ, ಓ.ಟಿ.ರಸ್ತೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.

Shimoga nanjappa hospital

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment