ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA NEWS, 15 SEPTEMBER 2024 : ಮಾವಿನ ತೋಟದ ಗುತ್ತಿಗೆ ಹಣದ (MONEY) ವಿಚಾರದಲ್ಲಿ ಚಾಕುವಿನಿಂದ ಇರಿದು ಯುವಕನ ಹತ್ಯೆಗೆ ಯತ್ನಿಸಿದ್ದವನಿಗೆ ಶಿವಮೊಗ್ಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಒಂದೂವರೆ ವರ್ಷ ಸಾದಾ ಕಾರಾಗೃಹ ಶಿಕ್ಷೆ ಮತ್ತು 15 ಸಾವಿರ ರೂ. ದಂಡ ವಿಧಿಸಿದೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿ ಮೂರು ತಿಂಗಳು ಸಾದಾ ಶಿಕ್ಷೆ ವಿಧಿಸಿ ಆದೇಶಿಸಿದೆ. ಶಿರಾಳಕೊಪ್ಪ ದಾಸರ ಕಾಲನಿಯ ಹಯಾತ್ ಸಾಬ್ (31) ಶಿಕ್ಷೆಗೆ ಒಳಗಾದವ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಏನಿದು ಪ್ರಕರಣ?
ಹಯಾತ್ ಸಾಬ್, 2022ರ ಮೇ 15ರಂದು ಹಳ್ಳೂರು ಕೇರಿಯ ಜಿಯಾವುಲ್ಲಾ ಖಾನ್ ಹತ್ಯೆಗೆ ಯತ್ನಿಸಿ ಚೂರಿ ಇರಿದಿದ್ದ. ಹಯಾತ್ ಮತ್ತು ಜಿಯಾವುಲ್ಲಾ ಅವರಿಗೆ ಹಿಂದಿನಿಂದಲೂ ಮಾವಿನ ತೋಟದ ಗುತ್ತಿಗೆ ವಿಚಾರವಾಗಿ ಹಣಕಾಸಿನ ವ್ಯವಹಾರವಿದ್ದು ಜಿಯಾವುಲ್ಲಾಗೆ 25 ಸಾವಿರ ರೂ. ಕೊಡುವುದನ್ನು ಹಯಾತ್ ಬಾಕಿ ಇರಿಸಿಕೊಂಡಿದ್ದ. ಹಾಗಾಗಿ ಹಣ ವಾಪಸ್ ನೀಡುವಂತೆ ಜಿಯಾವುಲ್ಲಾ ಕೇಳಿಕೊಂಡಿದ್ದ.
ಇದನ್ನೂ ಓದಿ » 70 ವರ್ಷದ ವೃದ್ಧನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ, ಕಾರಣವೇನು?
ಸಿಟ್ಟಿಗೆದ್ದ ಹಯಾತ್ ಶಿರಾಳಕೊಪ್ಪದ ಟೀ ಹೋಟೆಲ್‌ಗೆ ಕರೆಸಿಕೊಂಡು ಜಗಳ ತೆಗೆದು ಚಾಕುವಿನಿಂದ ಬೆನ್ನಿಗೆ ಇರಿದಿದ್ದ. ಈ ಬಗ್ಗೆ ಶಿರಾಳಕೊಪ್ಪ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಪ್ರಕರಣದ ಅಂದಿನ ತನಿಖಾಧಿಕಾರಿಯಾಗಿದ್ದ ಶಿರಾಳಕೊಪ್ಪ ಠಾಣೆ ಪಿಎಸ್‌ಐ ರಮೇಶ್ ಅವರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶ ಮಂಜುನಾಥ ನಾಯಕ್ ಅವರು ಆರೋಪ ಸಾಬೀತಾದ ಹಿನ್ನೆಲೆ ಹಯಾತ್‌ಗೆ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಿದ್ದಾರೆ.
ಇದನ್ನೂ ಓದಿ » ತೀರ್ಥಹಳ್ಳಿಯ ಯುವಕನಿಗೆ 5 ವರ್ಷ ಜೈಲು, 50 ಸಾವಿರ ರೂ. ದಂಡ
ಪರಿಹಾರ ರೂಪವಾಗಿ ದಂಡದ ಮೊತ್ತದಲ್ಲಿ 5 ಸಾವಿರ ರೂ. ಅನ್ನು ಗಾಯಾಳು ಜಿಯಾವುಲ್ಲಾ ಖಾನ್‌ಗೆ ನೀಡಲು ಆದೇಶಿಸಿದ್ದಾರೆ. ಸರ್ಕಾರಿ ಅಭಿಯೋಜಕ ಎ.ಎಂ.ಸುರೇಶ್‌ಕುಮಾರ್ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.
ಇದನ್ನೂ ಓದಿ » ಇವು ಸಾಮಾನ್ಯ ಗುಂಡಿಗಳಲ್ಲ, ಬಂದ್ ಆಗಲು PM, CMಗಳೆ ಬರಬೇಕು