INSTAGRAM ಮೆಸೇಜಿನಲ್ಲಿ ಬಂದ ಲಿಂಕ್ ಕ್ಲಿಕ್ ಮಾಡಿದ ಶಿವಮೊಗ್ಗ ವ್ಯಕ್ತಿಗೆ ಮರುದಿನ ಕಾದಿತ್ತು ದೊಡ್ಡ ಶಾಕ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 7 NOVEMBER 2022

SHIMOGA : INSTAGRAM ನಲ್ಲಿ ಬಂದ ಲಿಂಕ್ ಶಿವಮೊಗ್ಗದ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಲ್ಲಿದ್ದ ಲಕ್ಷ ಲಕ್ಷ ರೂ. ಹಣ ಖಾಲಿ ಮಾಡಿದೆ. ಸ್ನೇಹಿತೆಯೊಬ್ಬರ ಖಾತೆಯಿಂದ ಮೆಸೇಜ್ ನಲ್ಲಿದ್ದ ಲಿಂಕ್ (instagram login) ಅನಾಹುತಕ್ಕೆ ಕಾರಣವಾಗಿದೆ.

Shimoga Nanjappa Hospital

ಶಿವಮೊಗ್ಗದ ವ್ಯಕ್ತಿ (ಹೆಸರು ಗೌಪ್ಯ) ತಮ್ಮ INSTAGRAM ಖಾತೆಯನ್ನು ನೋಡುತ್ತಿದ್ದರು. ಸ್ನೇಹಿತೆಯೊಬ್ಬರು ಇವರ ಖಾತೆಗೆ ಲಿಂಕ್ (instagram login)  ಒಂದನ್ನು ಮೆಸೇಜ್ ಮಾಡಿದ್ದರು. ಅದನ್ನು ಕ್ಲಿಕ್ ಮಾಡುತ್ತಿದ್ದಂತೆ ಮೊಬೈಲ್ ಹ್ಯಾಂಗ್ ಆಗಿದೆ.

instagram login

ಮರುದಿನ ಶಿವಮೊಗ್ಗದ ವ್ಯಕ್ತಿಯ ಮೊಬೈಲ್ ನಲ್ಲಿ INSTAGRAM ಓಪನ್ ಆಗಲಿಲ್ಲ. ಹಾಗಾಗಿ ಪಾಸ್ ವರ್ಡ್ ಬಳಸಿ ಲಾಗಿನ್ ಮಾಡಲು ಯತ್ನಿಸಿದ್ದಾರೆ. ಆಗಲೂ INSTAGRAM ಖಾತೆ ಓಪನ್ ಆಗಲಿಲ್ಲ. ಖಾತೆಯನ್ನು ಯಾರೋ ಹ್ಯಾಕ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಬಳಿಕ ಶಿವಮೊಗ್ಗದ ವ್ಯಾಕ್ತಿ ತಮ್ಮ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದ್ದಾರೆ. ಆಗ ಆರು ಭಾರಿ ಹಣ ಕಡಿತವಾಗಿರುವುದು ಗೊತ್ತಾಗಿದೆ.

ಕ್ಲಿಕ್ ಮಾಡಿ ಇದನ್ನೂ ಓದಿ ಗಾಂಧಿ ಬಜಾರ್ ಸುತ್ತಮುತ್ತ ದಿಢೀರ್ ಕಾರ್ಯಾಚರಣೆ, 5 ದಿನದ ಬಳಿಕ 5 ಮಹತ್ವದ ಬದಲಾವಣೆ, ಏನದು?

ಒಟ್ಟು 3.69 ಲಕ್ಷ ರೂ. ಹಣವನ್ನು ಶಿವಮೊಗ್ಗದ ವ್ಯಕ್ತಿಯ ಬ್ಯಾಂಕ್ ಖಾತೆಯಿಂದ ಲಪಟಾಯಿಸಲಾಗಿದೆ. ಲಿಂಕ್ ಕ್ಲಿಕ್ ಮಾಡಿದ ಬಳಿಕ ಈ ಘಟನೆ ಸಂಭವಿಸಿದೆ. ಆತಂಕಕ್ಕೀಡಾದ ಶಿವಮೊಗ್ಗದ ವ್ಯಕ್ತಿ, ನಗರದ ಸೈಬರ್ ಕ್ರೈಮ್ ಠಾಣೆಯಲ್ಲಿ ದೂರು ನೀಡಿದ್ದಾರೆ.

instagram login

ಅಪರಿಚಿತ ಲಿಂಕ್ ಕ್ಲಿಕ್ ಮಾಡಬೇಡಿ

INSTAGRAM, ಫೇಸ್ ಬುಕ್, ವಾಟ್ಸಪ್, ಟೆಲಿಗ್ರಾಂ ಸೇರಿದಂತೆ ಸಾಮಾಜಿಕ ಜಲಾತಾಣಗಳಲ್ಲಿ ಹಲವು ಲಿಂಕ್ ಗಳು ಷೇರ್ ಆಗುತ್ತಿರುತ್ತವೆ. ವಿಶ್ವಾಸಾರ್ಹವಲ್ಲದ ಲಿಂಕ್ ಗಳನ್ನು ಕ್ಲಿಕ್ ಮಾಡದಂತೆ ಪೊಲೀಸ್ ಇಲಾಖೆ, ಸೈಬರ್ ತಜ್ಞರು ಎಚ್ಚರಿಕೆ ನೀಡುತ್ತಿರುತ್ತಾರೆ. ವಿಶ್ವಾಸಾರ್ಹವಲ್ಲದ ಲಿಂಕುಗಳ ಮೂಲಕ ಸೈಬರ್ ಖದೀಮರು ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುತ್ತಾರೆ. ಹಲವು ಸಂದರ್ಭ ಮೊಬೈಲ್ ನಲ್ಲಿರುವ ಫೋಟೊ, ವಿಡಿಯೋ, ಕಾಂಟ್ಯಾಕ್ಟ್ ಗಳನ್ನು ಕದಿಯುತ್ತಾರೆ. ಇವುಗಳನ್ನು ಬಳಸಿ ಬೆದರಿಕೆ ಒಡ್ಡುವ ಅಪಾಯವು ಇದೆ.

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment