ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ |SHIMOGA NEWS | 19 NOVEMBER 2020
ಗುತ್ತಿಗೆ ಅವಧಿ ಮುಗಿದರೂ ಎಂಪಿಎಂ ಅರಣ್ಯ ಭೂಮಿಯನ್ನು ಸರ್ಕಾರ ಹಿಂಪಡೆದಿಲ್ಲ. ಇದನ್ನು ಖಾಸಗೀಕರಣಗೊಳಿಸುವ ಹುನ್ನಾರ ನಡೆಸುತ್ತಿರುವ ಕುರಿತು, ಪ್ರಗತಿಪರ ಸಂಘಟನೆಗಳು, ರೈತ ಸಂಘಟನೆ, ಪರಿಸರವಾದಿಗಳು ಆರೋಪಿಸಿದ್ದರು. ಈಗ ಅರಣ್ಯ ಭೂಮಿ ಖಾಸಗೀಕರಣ ವಿಚಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಪುತ್ರರ ವಿರುದ್ಧ ಆರೋಪ ಕೇಳಿ ಬಂದಿದೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿ ನಡೆಸಿದ ನಮ್ಮೂರಿಗೆ ಅಕೇಶಿಯಾ ಬೇಡ ಹೋರಾಟ ಸಮಿತಿ ಪ್ರಮುಖರು, ಸಿಎಂ ಮತ್ತು ಅವರ ಪುತ್ರ ವಿರುದ್ಧ ಆರೋಪ ಮಾಡಿದ್ದಾರೆ.
ಯಾರೆಲ್ಲ ಏನೇನು ಹೇಳಿದರು?
ಕೆ.ಪಿ.ಶ್ರೀಪಾಲ್, ವಕೀಲ
ಎಂಪಿಎಂ ಗೆ ಸೇರಿದ 33,000 ಹೆಕ್ಟೇರ್ ಅರಣ್ಯ ಭೂಮಿಯನ್ನು ಖಾಸಗೀಕರಣ ಮಾಡಲು ಮುಖ್ಯಮಂತ್ರಿಗಳ ಕುಟುಂಬ ಹೆಚ್ಚು ಆಸಕ್ತಿ ವಹಿಸಿದೆ. ಈ ಅರಣ್ಯವನ್ನು ರೀನೀವಲ್ ಮಾಡುವುದಕ್ಕೆ ಸಂಸದ ರಾಘವೇಂದ್ರ ,ಮುಖ್ಯ ಮಂತ್ರಿಗಳು ಹೇಳ್ತಿದಾರೆ ಎಂದು ಬೆಂಗಳೂರಿನ ಅರಣ್ಯ ಇಲಾಖೆ ಮುಖ್ಯ ಕಾರ್ಯದರ್ಶಿ(ಸಿ.ಸಿ.ಎಫ್) ಮನವಿ ನೀಡಲು ಹೋದಾಗ ಹೇಳಿದ್ದಾರೆ. ಅವರು ಮಾತನಾಡಿರುವ ವಿಡಿಯೋ ಇದೆ ಎಂದು ಹೇಳಿದರು.
ಪ್ರೊ,ರಾಜೇಂದ್ರ ಚೆನ್ನಿ, ನಿವೃತ್ತ ಪ್ರಾಧ್ಯಾಪಕ
ಮಲೆನಾಡಿಗೆ ಅಕೇಶಿಯ ಅಪಾಯಕಾರಿಯಾಗಿದೆ. ನಲವತ್ತು ವರ್ಷಗಳ ಹಿಂದೆ ನೆಡುತೋಪುಗಳನ್ನು ಮಾಡಿ ಪರಿಸರದ ವಿನಾಶ ಆಗಿದೆ. ಎಂಪಿಎಂ ಅರಣ್ಯ ಭೂಮಿಯ ಗುತ್ತಿಗೆ ಅವಧಿ ಮುಗಿದಿದೆ. ನಲವತ್ತು ವರ್ಷಗಳ ಹಿಂದೆ ಕಾರ್ಖಾನೆಯನ್ನು ಮುಂದೊಮ್ಮೆ ಖಾಸಗಿಯವರಿಗೆ ನೀಡಿದರೆ ಅರಣ್ಯನ್ನು ಅರಣ್ಯ ಇಲಾಖೆಗೆ ನೀಡಬೇಕೇಂದು ಲೀಸ್‍ನಲ್ಲೆ ಇದೆ. ಒಪ್ಪಂದದಂತೆ 33 ಸಾವಿರ ಹೆಕ್ಟೇರ್ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿ ಸಹಜ ಅರಣ್ಯ ಬೆಳೆಸಲು ಸಹಕಾರ ನೀಡಬೇಕು.
ಕೆ.ಟಿ.ಗಂಗಾಧರ್, ರೈತ ಮುಖಂಡ
ರಾಜ್ಯ ಸರ್ಕಾರ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಾಗಲೇ ಗೊತ್ತಾಗಿತ್ತು. ಇದು ಭೂಮಿ ಕಬಳಿಸುವ ಯೋಜನೆ ಅಂತಾ. ಅದರ ಮುಂದುವರೆದ ಭಾಗವೇ ಈ ಎಂಪಿಎಂ ಅರಣ್ಯ ಭೂಮಿ ಖಾಸಗೀಕರಣ. ಕಸ್ತೂರಿ ರಂಗನ್ ಹಾಗೂ ಮಾದವ್ ಗಾಡ್ಗಿಳ್ ವರದಿ ತಂದು ಅರಣ್ಯ ಉಳಿಸುತ್ತೇವೆ ಅಂತಾ ಮಂತ್ರಿಗಳು, ಮುಖ್ಯಮಂತ್ರಿಗಳು ಹೇಳ್ತಾರೆ. ಈ ಆಸಕ್ತಿ ಎಂಪಿಎಂ ಅರಣ್ಯ ಭೂಮಿ ಮೇಲೆ ಯಾಕೆ ಇಲ್ಲ. ಮುಖ್ಯ ಮಂತ್ರಿಗಳು, ಅರಣ್ಯ ಮಂತ್ರಿಗಳನ್ನು ಭೇಟಿ ಮಾಡಿ ಆಯಿತು. ಆದರೆ ಉಪಯೋಗ ಇಲ್ಲ. ಜನಾಶಕ್ತಿ ಹತ್ತಿರ ತೆಗೆದುಕೊಂಡು ಹೋಗಿ ಜನವಿರೋಧಿ ಆಡಳಿತಕ್ಕೆ ಉತ್ತರ ಕೊಡಬೇಕಿದೆ.
ದಲಿತ ಸಂಘರ್ಷ ಸಮಿತಿಯ ಗುರುಮೂರ್ತಿ, ಪರಿಸರವಾದಿ ಶೇಖರ್ ಗೌಳೇರ್, ಕೃಷ್ಣಮೂರ್ತಿ ಹಿಳ್ಳೋಡಿ ,ಚೆನ್ನವೀರ್, ಬಾಲುನಾಯ್ಕ್ ಸೇರಿದಂತೆ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422