ಶಿವಮೊಗ್ಗ ಲೈವ್
ಶಿವಮೊಗ್ಗ: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತವು ಸೆ.11 ರಿಂದ 18ರವರೆಗೆ ರಿಯಾಯಿತಿ ದರದಲ್ಲಿ ಮೈಸೂರು ಸ್ಯಾಂಡಲ್ ಸಾಬೂನು ಮೇಳ ಆಯೋಜಿಸಿದೆ.
ಮೆಗ್ಗಾನ್ ಆಸ್ಪತ್ರೆ ಎದುರಿನಲ್ಲಿರುವ ಪೋಲಿಸ್ ಭವನದಲ್ಲಿ ಇಂದು ಬೆಳಿಗ್ಗೆ 11 ಗಂಟಗೆ ಮೇಳ ಆರಂಭವಾಗಲಿದೆ. ಮೈಸೂರು ಸ್ಯಾಂಡಲ್ ಸಾಬೂನು ಉತ್ಪನ್ನಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು.

ಪ್ರಧಾನ ವ್ಯವಸ್ಥಾಪಕ ಗಂಗಪ್ಪ ಮೇಳ ಉದ್ಘಾಟಿಸುವರು. ಶಾಖಾ ವ್ಯವಸ್ಥಾಪಕರಾದ ಸುಷ್ಮಾ ಸೇರಿದಂತೆ ಕಂಪನಿಯ ಪ್ರತಿನಿಧಿಗಳು ಹಾಜರಿರುತ್ತಾರೆ. ಕನ್ನಡ ನಾಡಿನ ಅಸ್ಮಿತೆಯಾದ ಮೈಸೂರು ಸ್ಯಾಂಡಲ್ ಉತ್ಪನ್ನಗಳ ಖರೀದಿಗೆ ಇರುವ ಈ ಅವಕಾಶವನ್ನು ಬಳಸಿಕೊಳ್ಳಬೇಕೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.