‘ಕಾರು, ಬೈಕ್‌ ಬದಲು ಮಕ್ಕಳನ್ನು ಸಾರ್ವಜನಿಕ ಸಾರಿಗೆಯಲ್ಲಿ ಕಳುಹಿಸಿʼ, ಸಾಹಿತಿ ಜಯಂತ್‌ ಕಾಯ್ಕಿಣಿ ಅಭಿಮತ, ಕಾರಣವೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE | 4 JUNE 2023

SHIMOGA : ಬಸ್ಸು, ರೈಲಿನಲ್ಲಿ ಪ್ರಯಾಣದ ವೇಳೆ ಪದೇ ಪದೆ ಜೇಬಿನಲ್ಲಿರುವ ಪರ್ಸ್‌ ಮುಟ್ಟಿ ನೋಡುತ್ತೇವೆ. ಅದೆ ರೀತಿ ಕುವೆಂಪು, ತೇಜಸ್ವಿ (Tejaswi), ಶಾಮಣ್ಣನವರ ಬದುಕಿನ ಮೌಲ್ಯಗಳನ್ನು ಓದಿ ಪುನಶ್ಚೇತನ ಮಾಡಬೇಕು ಎಂದು ಸಾಹಿತಿ ಜಯಂತ್‌ ಕಾಯ್ಕಿಣಿ ತಿಳಿಸಿದರು.

Na-Kandante-Tejaswi-Shamanna-Kadidal-Prakash-Book-release

ಕುವೆಂಪು ರಂಗಮಂದಿರಲ್ಲಿ ಬಹುಮುಖಿ ವೇದಿಕೆ ಸಹಯೋಗದಲ್ಲಿ ಲೇಖಕ ಕಡಿದಾಳ್‌ ಪ್ರಕಾಶ್‌ ಅವರ ನಾ ಕಂಡಂತೆ ತೇಜಸ್ವಿ – ಶಾಮಣ್ಣ ಪುಸ್ತಕ (Tejaswi) ಬಿಡುಗಡೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

tejaswi

ಜಯಂತ್‌ ಕಾಯ್ಕಿಣಿ ಏನೇನೆಲ್ಲ ಹೇಳಿದರು?

ಮನುಷ್ಯನಿಗೆ ಮನಷ್ಯನ ಕುರಿತು ಆಸಕ್ತಿ ಕಡಿಮೆಯಾಗಿದೆ. ಪೋಷಕರು ಮಕ್ಕಳಿಗೆ ಕಷ್ಟ ಬಾರದಂತೆ ನೋಡಿಕೊಳ್ಳುತ್ತಿದ್ದೇವೆ ಎಂಬ ಭ್ರಮೆಯಲ್ಲಿ ಬದುಕುತ್ತಿದ್ದಾರೆ. ಮಕ್ಕಳನ್ನು ಕಾರು, ಬೈಕಿನಲ್ಲಿ ಕರೆದೊಯುತ್ತಿದ್ದೇವೆ. ಆದರ ಬದಲು ಮಕ್ಕಳಿಗೆ ಸಾರ್ವಜನಿಕ ಸಾರಿಗೆ ಬಳಸುವಂತೆ ಮಾಡಬೇಕು. ಆಗ ಮನಷ್ಯನ ಮೌಲ್ಯಗಳ ಕುರಿತು ಅರಿವಾಗಲಿದೆ. ಕಾರು, ಬೈಕಿನಲ್ಲಷ್ಟೆ ಮಕ್ಕಳನ್ನು ಕರೆದೊಯ್ದರೆ ಅವರ ಭವಿಷ್ಯ ಉಜ್ವಲವಾಗುವುದಿಲ್ಲ.

Jayanth Kaikini In Shimoga Kuvempu Rangamandira

ಯುವ ಪೀಳಿಗೆ ತಮ್ಮ ಕ್ಯಾಮರಾದಲ್ಲಿ ತಾವಷ್ಟೆ ಬರಬೇಕು ಎಂಬ ಸೆಲ್ಫಿ ವ್ಯಾಮೋಹದಲ್ಲಿ ಮುಳುಗಿದೆ. ಎದುರಿಗೆ ಸಿಕ್ಕಾಗ ಮಾತನಾಡುವುದಿಲ್ಲ. ಆದರೆ ಮೊಬೈಲ್‌ನಲ್ಲಿ ಗುಡ್‌ ಮಾರ್ನಿಂಗ್‌ ಮೆಸೇಜ್‌ ಕಳುಹಿಸುತ್ತಾರೆ. ಹೋರಾಟಗಾರರು, ಸಾಹಿತಿಗಳು, ರೈತ ನಾಯಕರು, ನಾನಾ ಕ್ಷೇತ್ರದ ಸಾಧಕರ ಮೌಲ್ಯಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳುವುದನ್ನು ಮರೆತಿದೆ. ರೋಲ್‌ ಮಾಡಲ್‌ಗಳು ಎಲ್ಲೋ ಸಿಗುವುದಿಲ್ಲ. ನಮ್ಮ ಮಧ್ಯದಲ್ಲೆ ಇರುತ್ತಾರೆ.

Na Kandante Tejaswi Shamanna Book Release

ನಾಳೆ ಏನಾಗಲಿದೆ ಎಂಬುದು ನಮಗ್ಯಾರಿಗು ಗೊತ್ತಿಲ್ಲ. ಆದ್ದರಿಂದ ಗೊತ್ತಿಲ್ಲದ ನಾಳೆಯ ಕುರಿತು ಕುತೂಹಲವಿರಬೇಕು. ತೇಜಸ್ವಿ ಅವರಲ್ಲಿ ಅಂತಹ ಕುತೂಹಲವಿತ್ತು. ಶಾಮಣ್ಣನವರಲ್ಲಿಯು ಆ ಕುತೂಹಲವಿದೆ. ಈ ರೀತಿಯ ಕುತೂಹಲ ಎಲ್ಲರಲ್ಲು ಮೂಡಬೇಕು

Na Kandante Tejaswi Shamanna Book Release Kadidal Shamanna

ಕೃಪಾಕರ ಸೇನಾನಿ ಹೇಳಿದ ಕಥೆ

ಪ್ರಸಿದ್ಧ ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರ ಮತ್ತು ಸೇನಾನಿ ಅವರು ನಾ ಕಂಡಂತೆ ತೇಜಸ್ವಿ ಶಾಮಣ್ಣ ಪುಸ್ತಕ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು ತೇಜಸ್ವಿ ಮತ್ತು ಶಾಮಣ್ಣ ಅವರ ಜೀವನದ ಕೆಲವು ಪ್ರಮುಖ ವಿದ್ಯಮಾನಗಳನ್ನು ಸ್ಮರಿಸಿದರು.

Na Kandante Tejaswi Shamanna Book Release - Wild life photographer Krupakar

ಕೃಪಾಕರ ಅವರು ಮತನಾಡಿ, ಮುಖ್ಯಮಂತ್ರಿ ಕಡಿದಾಳು ಮಂಜಪ್ಪ ಅವರು ತಮ್ಮ ಮನೆಯಲ್ಲಿ ಅದ್ಧೂರಿ ವಿವಾಹ ಸಮಾರಂಭ ಆಯೋಜಿಸಿದ್ದರು. ಮದುವೆ ಮನೆ ಮುಂದೆ ಕಡಿದಾಳ್‌ ಶಾಮಣ್ಣ ಅವರು ಎಲ್ಲರಿಗು ಕರಪತ್ರ ಹಂಚಿದ್ದರು. ಆ ಕರಪತ್ರದಲ್ಲಿ ಸರಳ ವಿವಾಹದ ಸಂದೇಶವಿತ್ತು. ಇದನ್ನು ಸೇನಾನಿ ಅವರ ತಾಯಿ ನನಗೆ ತಿಳಿಸಿದ್ದರು ಎಂದರು.

Na Kandante Tejaswi Shamanna Book Release - Kuvempu Rangamandira Shimoga

ಸೇನಾನಿ ಅವರು ಮಾತನಾಡಿ, ರೈತ ಸಂಘ ಸ್ಥಾಪನೆಯಾದಾಗ ಹಸಿರು ಶಾಲು ಕೊಟ್ಟವರು ಶಾಮಣ್ಣ. ಒಮ್ಮೆ ತೇಜಸ್ವಿ ಮತ್ತು ಶಾಮಣ್ಣ ಅವರು ದೆವ್ವ ಹುಡುಕಲು ಹೊರಟಿದ್ದರು. ದೆವ್ವ ತಮ್ಮಿಬ್ಬರ ರೂಪದಲಿಯೇ ಬಂದು ತಮ್ಮನ್ನೆ ಯಾಮಾರಿಸಿಬಿಟ್ಟರೆ ಎಂಬ ಗೊಂದಲಕ್ಕೆ ಬಿದ್ದರು. ಆಗ ಶಾಮಣ್ಣ ಒಂದು ಚೀನಿ ಭಾಷೆಯ ಕೋಡ್‌ ವರ್ಡ್‌ ಹೇಳಿದ್ದರು. ಆ ಪದ ಸರಿಯಾಗಿ ಉಚ್ಛರಿಸಲಾಗದೆ ತೇಜಸ್ವಿ ಪೇಚಿಗೆ ಸಿಲುಕಿದ್ದರು ಎಂದು ದೆವ್ವ ಹುಡುಕಾಟದ ಪ್ರಸಂಗ ನೆನಪಿಸಿದರು.

Na Kandante Tejaswi Shamanna Book Release - KT Gangadhar

ಸಮಾರಂಭದ ಬಳಿಕ ಸಂವಾದ ನಡೆಯಿತು. ಸಾಹಿತಿ ಪುಟ್ಟಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಕಡಿದಾಳ್‌ ಪ್ರಕಾಶ್‌, ಕಮಲಾ ನೆಹರೂ ಕಾಲೇಜು ಪ್ರಾಚಾರ್ಯ ಡಾ. ಹೆಚ್.ಎಸ್.ನಾಗಭೂಷಣ್‌ ಅವರು ವೇದಿಕೆಯಲ್ಲಿದ್ದರು.

ಇದನ್ನೂ ಓದಿ – ಗಂಭೀರ ಸ್ಥಿತಿಗೆ ತಲುಪಿದ್ದ ಶಿವಮೊಗ್ಗದ ಸ್ನೇಕ್‌ ಕಿರಣ್‌ ಈಗ ಹೇಗಿದ್ದಾರೆ? ಆ ದಿನ ಹಾವು ಕಚ್ಚಿದ್ದು ಹೇಗೆ?

WATCH VIDEO

ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment