ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 21 NOVEMBER 2023
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
SHIMOGA : ಇಂಡಿಗೋ ಮತ್ತು ಸ್ಟಾರ್ ಏರ್‌ಲೈನ್ಸ್ ಸಂಸ್ಥೆ ಶಿವಮೊಗ್ಗದಿಂದ ವಿಮಾನಯಾನ ಸೇವೆ ಆರಂಭಿಸಿವೆ. ಸದ್ಯದಲ್ಲೆ ಇನ್ನೂ ಮೂರು ಮಾರ್ಗದಲ್ಲಿ ವಿಮಾನಗಳು ಹಾರಾಟ ನಡೆಸಲಿವೆ. ಸ್ಟರ್ ಏರ್‌ಲೈನ್ಸ್ ವಿಮಾನಯಾನ ಸೇವೆಗೆ ಸಂಸದ ಬಿ.ವೈ.ರಾಘವೇಂದ್ರ ಮಂಗಳವಾರ ಚಾಲನೆ ನೀಡಿದರು. ಇದೆ ವೇಳೆ ಮತ್ತಷ್ಟು ಮಾರ್ಗದಲ್ಲಿ ವಿಮಾನ ಹಾರಾಟ ಆರಂಭವಾಗಲಿದೆ ಎಂದು ಸುಳಿವು ನೀಡಿದರು. ಅಲ್ಲದೆ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕುರಿತು ತಿಳಿಸಿದರು.
ಸಂಸದ ರಾಘವೇಂದ್ರ ಹೇಳಿದ 5 ಪ್ರಮುಖಾಂಶ
ಬೆಂಗಳೂರು – ಶಿವಮೊಗ್ಗ ನಡುವೆ ಇಂಡಿಗೋ ವಿಮಾನ ಹಾರಾಟ ಆರಂಭವಾಗಿ ಮೂರು ತಿಂಗಳಾಗಿದೆ. ಪ್ರತಿದಿನ ಶೇ.78ರಷ್ಟು ಸೀಟುಗಳು ಭರ್ತಿಯಾಗುತ್ತಿವೆ. ಸ್ಟಾರ್ ಏರ್ ಸಂಸ್ಥೆ ಈಗ ಶಿವಮೊಗ್ಗದಲ್ಲಿ ವಿಮಾನಯಾನ ಸೇವೆ ಆರಂಭಿಸಿರುವುದು ಒಳ್ಳೆಯ ಬೆಳವಣಿಗೆ.
ಜಿಲ್ಲೆಯಲ್ಲಿ ವ್ಯಾಪಾರ – ವಹಿವಾಟು, ಪ್ರವಾಸೋದ್ಯಮ ಅಭಿವೃದ್ಧಿಗೆ ಇದು ಪ್ರಮುಖ ಹೆಜ್ಜೆಯಾಗಿದೆ. ಮಧ್ಯೆ ಕರ್ನಾಟಕದ ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಸೇರಿದಂತೆ ಸುತ್ತಮುತ್ತಲ ಜಿಲ್ಲೆಗೆ ಪ್ರಮುಖ ವೈಮಾನಿಕ ಕೇಂದ್ರವಾಗಿ ಈ ವಿಮಾನ ನಿಲ್ದಾಣ ಮೇಲ್ದರ್ಜೆಗೇರಲಿದೆ.
ಇಂಡಿಗೋ ವಿಮಾನ ಸೇವೆ ಆರಂಭಿಸಿದಾಗಿನಿಂದ ಈತನಕ ಮೂರು ಬಾರಿ ಶಿವಮೊಗ್ಗದಲ್ಲಿ ಲ್ಯಾಂಡ್ ಆಗಲು ಸಾಧ್ಯವಾಗದೆ ಬೆಂಗಳೂರಿಗೆ ಹಿಂತಿರುಗಿದೆ. ಮಂಜು ಮುಸುಕಿದರೆ ಎರಡ್ಮೂರು ಸಾವಿರ ಅಡಿಯಿಂದ ವಿಸಿಬಲಿಟಿ ಸಮಸ್ಯೆ ಎದುರಾಗಲಿದೆ. ವಿಎಫ್‌ಆರ್ ಆಪರೇಷನ್ ಸಮಸ್ಯೆ ಇದ್ದು, ಡಿಸೆಂಬರ್ ಕೊನೆ ವೇಳೆಗೆ ಪರಿಹಾರವಾಗಲಿದೆ. ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಇದೆ ಅವಧಿಯಲ್ಲಿ ಪೂರ್ಣವಾಗಲಿದೆ.
ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ವ್ಯವಸ್ಥೆ (ಬಿಡಿಡಿಎಸ್) ಉಪಕರಣಗಳನ್ನು ಖರೀದಿಸಲಾಗಿದೆ. ಇದಕ್ಕೆ ಎರಡೂವರೆ ಕೋಟಿ ರೂ. ವೆಚ್ಚವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಗರಾಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಅವರು ಸರ್ಕಾರದ ವತಿಯಿಂದಲೆ ಉಪಕರಣ ಖರೀದಿಸಿದ್ದಾರೆ. ಲೈಸೆನ್ಸ್ ಪ್ರಕ್ರಿಯೆ ಕೂಡ ಪೂರ್ಣಗೊಂಡಿದೆ.
ಇದನ್ನೂ ಓದಿ – ಶಿವಮೊಗ್ಗದಿಂದ ತಿರುಪತಿ, ಗೋವಾ, ಹೈದರಾಬಾದ್ ವಿಮಾನಯಾನ ಶುರು, ಹೇಗಿತ್ತು ಮೊದಲ ದಿನ?
ಇನ್ನೂ ಮೂರು ಮಾರ್ಗಗಳಲ್ಲಿ ವಿಮಾನ ಹಾರಾಟಕ್ಕೆ ಟೆಂಡರ್ ಪೂರ್ಣಗೊಂಡಿದೆ. ಬೆಂಗಳೂರು, ಹೈದರಾಬಾದ್ ಮತ್ತು ದೆಹಲಿಗೆ ಶಿವಮೊಗ್ಗದಿಂದ ವಿಮಾನಗಳು ಹಾರಲಿವೆ. ಶಿವಮೊಗ್ಗ ಮತ್ತು ದೆಹಲಿ ಮಧ್ಯೆ ಏರ್ ಇಂಡಿಯಾ ಸಂಸ್ಥೆ ವಿಮಾನಯಾನ ಸೇವೆ ಒದಗಿಸಲಿದೆ. ಸ್ಪೈಸ್ ಜೆಟ್ ಕೂಡ ಸದ್ಯದಲ್ಲೇ ಸೇವೆ ಆರಂಭಿಸಲಿದೆ. ವಿಸ್ತಾರ ಏರ್‌ಲೈನ್ಸ್ ಸಂಸ್ಥೆ ಸಿಬ್ಬಂದಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣ, ಒಂದೇ ದಿನ 400 ಮಂದಿ ಪ್ರಯಾಣ, ಎಲ್ಲೆಲ್ಲಿಗೆ ಎಷ್ಟು ಜನ ತೆರಳಿದರು?