ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 31 JULY 2023
SHIMOGA : ಆ.1ರಿಂದ ನಂದಿನಿ ಹಾಲು, ಮೊಸರು ಮತ್ತು ಸ್ವೀಟ್ ಲಸ್ಸಿ ದರ (Milk Rate) ಹೆಚ್ಚಳವಾಗಲಿದೆ. ಈ ಸಂಬಂಧ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಹಾಲು ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಯಾವ್ಯಾವ ಹಾಲಿನ ದರ ಎಷ್ಟು?
ಹಾಲು ವೆರೈಟಿ | ಅಳತೆ | ಹಿಂದಿನ ದರ | ಹೊಸ ದರ |
ಟೋನ್ಡ್ ಹಾಲು | 1 ಲೀಟರ್ | 39 ರೂ. | 42 ರೂ. |
ಟೋನ್ಡ್ ಹಾಲು | 510 ಎಂ.ಎಲ್ | 20 ರೂ. | 22 ರೂ. |
ಶುಭಂ ಸ್ಟಾಂಡರ್ಡ್ | 1 ಲೀಟರ್ | 45 ರೂ. | 48 ರೂ. |
ಶುಭಂ ಸ್ಟಾಂಡರ್ಡ್ | 510 ಎಂ.ಎಲ್ | 23 ರೂ. | 25 ರೂ. |
ಹೋಮೊಜಿನೈಸ್ಡ್ | 1 ಲೀಟರ್ | 46 ರೂ. | 49 ರೂ. |
ಹೋಮೊಜಿನೈಸ್ಡ್ | 510 ಎಂ.ಎಲ್ | 23 ರೂ. | 25 ರೂ. |
ಹೋಮೊಜಿನೈಸ್ಡ್ | 200 ಎಂ.ಎಲ್ | 11 ರೂ. | 12 ರೂ. |
ಮೊಸರು, ಮಜ್ಜಿಗೆ, ಲಸ್ಸಿ ರೇಟ್
ಉತ್ಪನ್ನ | ಅಳತೆ | ಹಿಂದಿನ ದರ | ಹೊಸ ದರ |
ಮೊಸರು | 500 ಗ್ರಾಂ | 24 ರೂ. | 26 ರೂ. |
ಮೊಸರು | 200 ಗ್ರಾಂ | 11 ರೂ. | 12 ರೂ. |
ಮೊಸರು | 5 ಕೆ.ಜಿ ಬಕೆಟ್ | 340 ರೂ. | 355 ರೂ. |
ಮೊಸರು | 10 ಕೆ.ಜಿ ಬಕೆಟ್ | 670 ರೂ. | 700 ರೂ. |
ಮಜ್ಜಿಗೆ | 200 ಎಂ.ಎಲ್ | 8 ರೂ. | 9 ರೂ. |
ಸ್ವೀಟ್ ಲಸ್ಸಿ | 200 ಎಂ.ಎಲ್ | 12 ರೂ. | 13 ರೂ. |
ಚಿಲ್ಲರೆ ಸಮಸ್ಯೆಗೆ 10 ಎಂ.ಎಲ್ ಪರಿಹಾರ
ಹಾಲು ಪ್ರತಿ ಲೀಟರ್‌ಗೆ 3 ರೂ. ಹೆಚ್ಚಳವಾಗಲಿದೆ. ಆದ್ದರಿಂದ ಅರ್ಧ ಲೀಟರ್‌ಗೆ 1.50 ರೂ. ಏರಿಕೆಯಾಗಬೇಕು. ಒಂದು ವೇಳೆ 1.50 ರೂ. ಹೆಚ್ಚಳ ಮಾಡಿದರೆ 50 ಪೈಸೆ ಚಿಲ್ಲರೆ ಸಮಸ್ಯೆ ಉಂಟಾಗಲಿದೆ. ಈ ಹಿನ್ನೆಲೆ ಹಾಲು ಒಕ್ಕೂಟ ಅರ್ಧ ಲೀಟರ್ ಪ್ಯಾಕೆಟ್‌ನಲ್ಲಿ 10 ಎಂ.ಎಲ್ ಹೆಚ್ಚು ಭರ್ತಿ ಮಾಡಿ, ದರವನ್ನು 2 ರೂ. ಏರಿಕೆ ಮಾಡಿದೆ. ಹಾಗಾಗಿ ಇನ್ಮುಂದೆ ಅರ್ಧ ಲೀಟರ್ ಪ್ಯಾಕೆಟ್‌ನಲ್ಲಿ 510 ಎಂ.ಎಲ್ ಹಾಲು ದೊರೆಯಲಿದೆ.
ಇದನ್ನೂ ಓದಿ – ನಾಳೆಯಿಂದ ನಂದಿನಿ ಹಾಲಿನ ದರ ಹೆಚ್ಚಳ, ಹಾಲು ಉತ್ಪಾದಕರಿಗೆ ಸಿಗಲಿದೆ ಲಾಭ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422