ಶಿವಮೊಗ್ಗ ಲೈವ್.ಕಾಂ | SHIMOGA NEWS | 17 ಜುಲೈ 2021
ಮೈಸೂರು ಹುಲಿ ಟಿಪ್ಪು ಸುಲ್ತಾನ್ ಜನ್ಮ ದಿನಾಂಕ ಕುರಿತು ಇದ್ದ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಇತಿಹಾಸ ತಜ್ಞ, ಶಿವಮೊಗ್ಗದ ಉದ್ಯಮಿಯೊಬ್ಬರು ಟಿಪ್ಪು ಸುಲ್ತಾನ್ ನಿಜವಾದ ಜನ್ಮ ದಿನಾಂಕವನ್ನು ಸಂಶೋಧಿಸಿದ್ದಾರೆ.
![]() |
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ನಾಣ್ಯ ಸಂಗ್ರಹಕಾರ ಮತ್ತು ಇತಿಹಾಸಕಾರ ಖಂಡೋಬರಾವ್, ಇತಿಹಾಸ ತಜ್ಞ, ಸಂಶೋಧಕ ನಿಧಿನ್ ಓಲಿಕೆರ ಅವರು ಟಿಪ್ಪುಸುಲ್ತಾನ್ ಜನ್ಮ ದಿನಾಂಕಕ್ಕೆ ಸಂಬಂಧಿಸಿದಂತೆ ಹೊಸ ಸಂಶೋಧನೆಯನ್ನು ನಡಸಿದ್ದಾರೆ. ಇದುವರೆಗೂ ಟಿಪ್ಪು ಜನ್ಮ ದಿನಾಂಕ 20 ನವೆಂಬರ್ 1750 ಎಂದು ವಿಶ್ವಾದ್ಯಂತ ಒಪ್ಪಿಕೊಂಡಿದ್ದಾರೆ. ಆದರೆ ನಿಧಿನ್ ಅವರ ಹೊಸ ಸಂಶೋಧನೆ ಪ್ರಕಾರ ಅದು 1ನೇ ಡಿಸೆಂಬರ್ 1751 ಆಗಿದೆ ಎಂದು ತಿಳಿಸಿದರು.
ಬ್ರಿಟೀಷ್ ಗ್ರಂಥಾಲಯದಲ್ಲಿನ ಪತ್ರಗಳು
ನಿಧಿನ್ ಅವರು ಟಿಪ್ಪು ಜನ್ಮದಿನಾಂಕ ಸಂಬಂಧ ಮೂರು ವರ್ಷಗಳ ಕಾಲ ಸಂಶೋಧನೆ ನಡೆಸಿದ್ದಾರೆ. ಲಂಡನ್‍ನಲ್ಲಿನ ಬ್ರಿಟಿಷ್ ಗ್ರಂಥಾಲಯದಲ್ಲಿ ಟಿಪ್ಪುಗೆ ಸಂಬಂಧಿಸಿದಂತೆ ‘ಫತೇ ಉಲ್ ಮುಜಾಹಿದ್ದೀನ್’ ಎಂಬ ಪರ್ಶಿಯನ್ ಭಾಷೆಯಲ್ಲಿರುವ ಹಸ್ತ ಪ್ರತಿ ಇದೆ. ಇದನ್ನು ಟಿಪ್ಪು ತಾನೇ ಬರೆಸಿದ ಕೈಪಿಡಿಯಾಗಿದೆ. ಅದರಲ್ಲಿ ಜಕ್ರಿಮಾಸದ 14ನೇ ದಿನ 1165 ಇಜ್ರಿ ದಿನದಂದು ಸುರ್ಯೋದಯವಾದ 10 ಗಂಟೆಗಳ ನಂತರ, ನನ್ನ ಜನ್ಮದಿನವನ್ನು ಆಚರಿಸಬೇಕು ಮತ್ತು ಮೈಸೂರು ಸಂಸ್ಥಾನದ ಸಮಸ್ತ ಪ್ರಜೆಗಳು ಇದರಲ್ಲಿ ಪಾಲ್ಗೊಳ್ಳಬೇಕು ಎಂದಿತ್ತು.
ಇದರ ಆಧಾರದ ಮೇಲೆ ದಿನಾಂಕವನ್ನು ಇಂಗ್ಲೀಷ್ ಕ್ಯಾಲೆಂಡರ್‍ಗೆ ಬದಲಾಯಿಸಲಾಗಿದೆ. ಅದರಂತೆ ಹೊಸ ದಿನಾಂಕವನ್ನು ಕಂಡು ಹಿಡಿದಿದ್ದಾರೆ. ಇದಕ್ಕೆ ಪೂರಕವಾಗಿ ಅವರಿಗೆ ಇನ್ನೂ ಕೆಲವು ಹಸ್ತ ಪ್ರತಿಗಳು ಸಿಕ್ಕಿವೆ ಇವೆಲ್ಲವನ್ನೂ ಒಟ್ಟು ಮಾಡಿಕೊಂಡು ಅವರು ಟಿಪ್ಪು ಜನ್ಮ ರಹಸ್ಯವನ್ನು ಬೇಧಿಸಿದ್ದಾರೆ ಎಂದರು.
ಸರ್ಕಾರಕ್ಕೆ ಸಂಶೋಧನೆಯ ವಿವರ
ಇತಿಹಾಸ ತಜ್ಞ ಮತ್ತು ಸಂಶೋಧಕ ನಿಧಿನ್ ಓಲಿಕೆರ ಮಾತನಾಡಿ, ಟಿಪ್ಪು ಜನ್ಮ ದಿನಾಂಕವನ್ನು ನಿಖರವಾಗಿ ತಿಳಿಯಲು ಪ್ರಮುಖವಾಗಿ 3 ದಾಖಲೆಗಳಲ್ಲಿ ಸಂಶೋಧನೆ ಮಾಡಿದ್ದೇನೆ. ಮಂಗಳೂರು ಮತ್ತು ಗೋವಾ ವಿವಿಯ ಮಾಜಿ ಕುಲಪತಿಗಳು ಮತ್ತು ಪ್ರಸಿದ್ಧ ಇತಿಹಾಸಕಾರರಾಗಿರುವ ಪ್ರೋ.ಶೇಖ್‍ಹಾಲಿ ಅವರು ಅವಲೋಕಿಸಿ ಅನುಮೋದೆನೆ ನೀಡಿದ್ದಾರೆ ಎಂದರು.
ಸಂಪೂರ್ಣ ಅಧ್ಯಯನ ವಿವರಗಳನ್ನು ಸರ್ಕಾರಕ್ಕೆ ತಿಳಿಸಲಾಗಿದೆ. ಮುಂದಿನ ದಿನಗಳಲ್ಲಿ ಟಿಪ್ಪು ಜನ್ಮ ದಿನಾಂಕ 1 ನೇ ಡಿಸೆಂಬರ್ 1751 (1-12-1751) ಆಗಬೇಕೆಂದು ಮನವಿ ಮಾಡಿಕೊಳ್ಳುತ್ತಿರುವೆ ಎಂದರು.
ಇತಿಹಾಸ ತಜ್ಞ ಅಜಯ್ ಶರ್ಮಾ ಸೇರಿದಂತೆ ಪ್ರಮುಖರು ಸುದ್ದಿಗೋಷ್ಠಿಯಲ್ಲಿದ್ದರು.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200