ಶಿವಮೊಗ್ಗದಲ್ಲಿ ಎರಡು ದಿನ ನೀನಾಸಂ ನಾಟಕೋತ್ಸವ, ಯಾವ್ಯಾವ ದಿನ ಯಾವ ನಾಟಕ ಪ್ರದರ್ಶನವಿದೆ?

ಶಿವಮೊಗ್ಗ: ನಗರದ ಕುವೆಂಪು ರಂಗಮಂದಿರದಲ್ಲಿ ನಮ್‌ ಟೀಮ್‌ ವತಿಯಿಂದ ಎರಡು ದಿನ ನೀನಾಸಂ ನಾಟಕೋತ್ಸವ (Drama Festival) ಆಯೋಜಿಸಲಾಗಿದೆ ಎಂದು ನಮ್‌ ಟೀಮ್‌ ಪ್ರಧಾನ ಕಾರ್ಯದರ್ಶಿ ಹೊನ್ನಾಳಿ ಚಂದ್ರಶೇಖರ್‌ ತಿಳಿಸಿದರು. (ಈ ಸುದ್ದಿಯನ್ನು ಇನ್ನು 46 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೊನ್ನಾಳಿ ಚಂದ್ರಶೇಖರ್‌, ಅಕ್ಟೋಬರ್‌ 8 ಮತ್ತು 9ರಂದು ಸಂಜೆ 7 ಗಂಟೆಗೆ ನಾಟಕ ಆಯೋಜಿಸಲಾಗಿದೆ ಎಂದರು.

ಅಕ್ಟೋಬರ್‌ 8: ಬಾನುಮುಸ್ತಾಕ್‌ ಅವರ ಕಥೆ ಆಧಾರಿತ ‘ಹೃದಯದ ತೀರ್ಪುʼ ನಾಟಕ ಪ್ರದರ್ಶನವಾಗಲಿದೆ. ಡಾ. ಎಂ.ಗಣೇಶ್‌ ಅವರ ರಂಗರೂಪ ಮತ್ತು ನಿರ್ದೇಶನ ಮಾಡಲಿದ್ದಾರೆ.

ಅಕ್ಟೋಬರ್‌ 9: ಜಿ.ಶಂಕರ್‌ ಅವರ ‘ಅವತರಣಮ್‌ ಭ್ರಾಂತಾಲಯಮ್‌’ ನಾಟಕ ಪ್ರದರ್ಶನವಾಗಲಿದೆ. ಶಂಕರ್‌ ವೆಂಕಟೇಶ್ವರನ್‌ ನಿರ್ದೇಶನ ಮಾಡಲಿದ್ದಾರೆ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ

061025-Journalist-Honnali-Chandrashekar.webp

ಯಾವುದೆ ಸಭಾ ಕಾರ್ಯಕ್ರಮ ಇರುವುದಿಲ್ಲ. ಪ್ರತಿ ನಾಟಕಕ್ಕೆ ಒಬ್ಬರಿಗೆ ₹50 ಪ್ರವೇಶ ದರ ನಿಗದಿಪಡಿಸಾಗಿದೆ. ಹೆಚ್ಚಿನ ಮಾಹಿತಿಗೆ 9108237446 ಸಂಪರ್ಕಿಸಬಹುದು ಎಂದು ಹೊನ್ನಾಳಿ ಚಂದ್ರಶೇಖರ್‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ನಮ್‌ ಟೀಮ್‌ನ ಖಜಾಂಚಿ ಸಮನ್ವಯ ಕಾಶಿ, ಸದಸ್ಯೆ ನಂದಿನಿ ಸಾಗರ ಇದ್ದರು.

ಇದನ್ನೂ ಓದಿ » ಶಿವಮೊಗ್ಗಕ್ಕೆ ಬಿಳಿ ಹುಲಿ ಆಗಮನ, ತ್ಯಾವರೆಕೊಪ್ಪದಲ್ಲಿ 6 ನೂತನ ಸದಸ್ಯರ ದರ್ಶನ, ಇನ್ನು ಯಾವೆಲ್ಲ ಪ್ರಾಣಿ ಬಂದಿವೆ?

Drama Festival

061025-Journalist-Honnali-Chandrashekar.webp

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Leave a Comment