ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ |SHIMOGA NEWS | 5 DECEMBER 2020
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್‍ಗೆ ಶಿವಮೊಗ್ಗ ನಗರದಲ್ಲಿ ನೀರಿಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎರಡು ದಿನದ ಹಿಂದೆ ನಡೆದ ಗಲಭೆ ಮತ್ತು ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಯಾವುದೆ ಸಂಘಟನೆಗಳು ಬಂದ್ ಮಾಡಲು ಮುಂದೆ ಬಂದಿಲ್ಲ.
ಶಿವಮೊಗ್ಗದಲ್ಲಿ ಪರಿಸ್ಥಿತಿ ಹೇಗಿದೆ?
- 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿದೆ. ಇವತ್ತು ಬೆಳಗ್ಗೆ 10 ಗಂಟೆವರೆಗೆ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ.
- ನಿಷೇಧಾಜ್ಞೆ ಹಿಂದಕ್ಕೆ ಪಡೆಯುತ್ತಿರುವ ಕಾರಣ ಜನರು ಆತಂಕ ಬದಿಗಿಟ್ಟು ಮನೆಯಿಂದ ಹೊರ ಬರುತ್ತಿದ್ದಾರೆ. ಎಂದಿನಂತೆ ತಮ್ಮ ಕೆಲಸದಲ್ಲಿ ತೊಡಿಗಿಸಿಕೊಳ್ಳುತ್ತಿದ್ದಾರೆ.
- ಹಾಲು, ದಿನಸಿ, ತರಕಾರಿ ಸೇರಿ ಅಗತ್ಯ ವಸ್ತುಗಳ ಖರೀದಿ, ವಾಕಿಂಗ್, ಜಾಗಿಂಗ್‍ಗೆ ಜನರು ರಸ್ತೆಗಿಳಿದಿದ್ದಾರೆ.
- ಎರಡು ದಿನದಿಂದ ಸ್ಥಗಿತವಾಗಿದ್ದ ಖಾಸಗಿ ಬಸ್ ಸಂಚಾರ ಪುನಾರಂಭವಾಗಿದ್ದು, ದೂರದ ಊರಿಗೆ ತೆರಳಲು ಜನರು ಬಸ್ ನಿಲ್ದಾಣಕ್ಕೆ ಬರುತ್ತಿದ್ದಾರೆ.
- ಕೆಎಸ್‍ಆರ್‌ಟಿಸಿ ಬಸ್ ಸಂಚಾರವು ಸಾಮಾನ್ಯ ಸ್ಥಿತಿಗೆ ಬಂದಿದೆ. ಸರ್ಕಾರಿ ಬಸ್ಸುಗಳ ಸಂಚಾರ ಎಂದಿನಂತೆ ಇದೆ.
- ಆಟೋ ಸಂಚಾರವು ಪುನಾರಂಭವಾಗಿದೆ. ಬಸ್ ನಿಲ್ದಾಣ, ಬಿ.ಹೆಚ್.ರಸ್ತೆ ಸೇರಿದಂತೆ ನಗರದಾದ್ಯಂತ ಆಟೋಗಳು ಸಂಚರಿಸುತ್ತಿವೆ.
- ಶಿವಮೊಗ್ಗ ನಗರದಾದ್ಯಂತ ವಾಹನ ಸಂಚಾರ ಎಂದಿನಂತೆ ಇದ್ದು, ಯಾವುದೆ ವ್ಯತ್ಯಯ ಇಲ್ಲ.
- ಅಂಗಡಿಗಳ ಬಾಗಿಲು ತೆಗೆಯಲಾಗುತ್ತಿದೆ. ನಿಷೇಧಾಜ್ಞೆಯ ಅವಧಿ ಮುಗಿಯುತ್ತಿದ್ದಂತೆ ಗಾಂಧಿ ಬಜಾರ್, ನೆಹರೂ ರಸ್ತೆ, ಬಿ.ಹೆಚ್.ರಸ್ತೆಯಲ್ಲಿ ಅಂಗಡಿಗಳ ಬಾಗಿಲು ತೆಗೆಯುವ ಸಾಧ್ಯತೆ ಇದೆ.
ಶಿವಮೊಗ್ಗದಲ್ಲಿ ಕರ್ನಾಟಕ ಬಂದ್ ಅನುಮಾನ
ಗಲಭೆಯಿಂದಾಗಿ ಶಿವಮೊಗ್ಗದಲ್ಲಿ ಜನರು ಆತಂಕಕ್ಕೀಡಾಗಿದ್ದಾರೆ. ಒಂದೂವರೆ ದಿನ ಶಿವಮೊಗ್ಗ ನಗರ ಸಂಪೂರ್ಣ ಸ್ಥಬ್ಧವಾಗಿತ್ತು. ವ್ಯಾಪಾರ ವಹಿವಾಟು ನಿಂತಿತ್ತು. ಮತ್ತೆ ಬಂದ್ ಮಾಡಿಸಲು ಮುಂದಾದರೆ ವ್ಯಾಪಾರಿಗಳು, ಜನರ ಆಕ್ರೋಶಕ್ಕೆ ತುತ್ತಾಗುವ ಸಾಧ್ಯತೆ ಇದೆ. ಈ ಕಾರಣಕ್ಕೆ ಕನ್ನಡಪರ ಸಂಘಟನೆಗಳು ಬಂದ್ ಮಾಡಿಸಲು ಮುಂದಾಗುವುದಿಲ್ಲ. ಪೊಲೀಸರು ಅವಕಾಶ ಕೊಟ್ಟರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಬಹುದಾಗಿದೆ.
ಎಲ್ಲೆಲ್ಲೂ ಬಿಗಿ ಬಂದೋಬಸ್ತ್
ಗಲಭೆ, ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಇದೆ. ಇನ್ನಷ್ಟು ಕಾಲ ಇದೆ ಮಾದರಿಯ ಬಂದೋಬಸ್ತ್ ಮುಂದುವರೆಯುವ ಸಾದ್ಯತೆ ಇದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]