ಶಿವಮೊಗ್ಗ ಲೈವ್.ಕಾಂ | SHIMOGA NEWS | 5 ಜುಲೈ 2020
ಕರ್ಫ್ಯೂ ಜಾರಿಯಲ್ಲಿದ್ದರೂ ಮಾಸ್ಕ್ ರಹಿತವಾಗಿ ಹೊರಗೆ ಸುತ್ತುತ್ತಿದ್ದವರಿಗೆ ಶಿವಮೊಗ್ಗ ಮಹಾನಗರ ಪಾಲಿಕೆ ಅಧಿಕಾರಿಗಳು ದಂಡ ವಿಧಿಸಿದರು. ನಗರದ ವಿವಿಧೆಡೆ ಇವತ್ತು ಕಾರ್ಯಾಚರಣೆ ನಡೆಸಿದ ಪಾಲಿಕೆ ಅಧಿಕಾರಿಗಳು ಫೈನ್ ಹಾಕಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಪ್ರಮುಖ ಸರ್ಕಲ್ಗಳು, ರಸ್ತೆಗಳಲ್ಲಿ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿತು. ಈ ವೇಳೆ ಮಾಸ್ಕ್ ಕುರಿತು ಜಾಗೃತಿ ಮೂಡಿಸಿ, ದಂಡ ಹಾಕಿದರು.
ಇನ್ಮುಂದೆ ಮಾಸ್ಕ್ ಹಾಕೇ ಹಾಕ್ತೀನಿ
ಸಂಜೆ ವೇಳೆಗೆ ಗೋಪಿ ಸರ್ಕಲ್ನಲ್ಲಿ ಪಾಲಿಕೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು. ಈ ವೇಳೆ ಕೆಲವು ವೈದ್ಯರು, ಕೆಲವು ಆಸ್ಪತ್ರೆಗಳ ಸಿಬ್ಬಂದಿಗಳು ಮಾಸ್ಕ್ ಧರಿಸದೆ ಬಂದಿದ್ದು ಕಂಡು ಬಂತು. ಕೆಲವರು ದಂಡ ಕಟ್ಟಲು ಹಣವಿಲ್ಲ ಎಂದು ಕ್ಷಮೆ ಕೇಳಿದರು. ಈ ವೇಳೆ ಮಾನವೀಯತೆ ಮೆರೆದ ಅಧಿಕಾರಿಗಳು ಮಾಸ್ಕ್ ಯಾಕೆ ಧರಿಸಬೇಕು ಅನ್ನುವ ಜಾಗೃತಿ ಮೂಡಿಸಿ ಕಳುಹಿಸಿದರು.
ಕೆಲವರದ್ದು ಗ್ರೇಟ್ ಎಸ್ಕೇಪ್
ಪಾಲಿಕೆ ಅಧಿಕಾರಿಗಳು ವಾಹನಗಳನ್ನು ತಡೆಯುತ್ತಿದ್ದಾರೆ ಅಂದಾಕ್ಷಣ ಕೆಲವರು ಎಸ್ಕಾಪ್ ಆಗಲು ಯತ್ನಿಸಿದರು. ಈ ವೇಳೆ ವಾಹನಗಳನ್ನು ವೇಗವಾಗಿ ಚಲಾಯಿಸಿಕೊಂಡು ಅಪಾಯಕಾರಿ ಸ್ಥಿತಿಯಲ್ಲಿ ಎಸ್ಕೇಪ್ ಆದರು.
ಎಷ್ಟು ಫೈನ್ ಸಂಗ್ರಹವಾಗಿದೆ?
ಇವತ್ತು ನಗರದ ವಿವಿಧೆಡೆ ಕಾರ್ಯಾಚರಣೆ ನಡೆಸಿದ ಪಾಲಿಕೆ ಸಿಬ್ಬಂದಿಗಳು 23 ಪ್ರಕರಣಗಳನ್ನು ದಾಖಲಿಸಿದ್ದು, 8800 ರೂ. ದಂಡ ವಸೂಲಿ ಮಾಡಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]