ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 9 ಅಕ್ಟೋಬರ್ 2019
ನಿಷೇಧವಿದ್ದರು ಖಾಸಗಿ ಬಸ್ ನಿಲ್ದಾಣದ ಒಳಗೆ ವಾಹನಗಳನ್ನು ಕೊಂಡೊಯ್ದವರಿಗೆ ಶಿವಮೊಗ್ಗ ಪೊಲೀಸರು ಶಾಕ್ ನೀಡಿದ್ದಾರೆ. ಎಂಟು ದಿನದಿಂದ ಭಾರೀ ಪ್ರಮಾಣದ ಫೈನ್ ಹಾಕಲಾಗಿದೆ.
ಬಸ್ಸುಗಳನ್ನು ಹೊರತುಪಡಿಸಿ ಉಳಿದ ವಾಹನಗಳು ಖಾಸಗಿ ಬಸ್ ನಿಲ್ದಾಣ ಪ್ರವೇಶಿಸುವಂತಿಲ್ಲ. ಆದರೂ ಕೆಲವರು ಬೈಕು, ಕಾರು ಸೇರಿದಂತೆ ಹಲವು ವಾಹನಗಳನ್ನು ಕೊಂಡೊಯ್ಯುತ್ತಿದ್ದರು. ಇದರಿಂದ ಖಾಸಗಿ ಬಸ್ ನಿಲ್ದಾಣದಲ್ಲಿ ಕಿರಿಕಿರಿ ಉಂಟಾಗುತ್ತಿತ್ತು. ಹಲವು ಬಾರಿ ಅಪಘಾತಗಳು ಸಂಭವಿಸಿವೆ.
ಒಳ ಪ್ರವೇಶಿಸುವ ವಾಹನಗಳಿಗೆ ಫೈನ್
ಖಾಸಗಿ ಬಸ್ ನಿಲ್ದಾಣದ ಒಳಗೆ ವಾಹನಗಳ ಪ್ರವೇಶ ತಡೆಯಲು ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದೆ. ದಂಡವನ್ನು ವಿಧಿಸಲಾಗುತ್ತಿದೆ. ಕಳೆದ ಎಂಟು ದಿನದಲ್ಲಿ ಒಟ್ಟು 37 ಸಾವಿರ ದಂಡ ವಿಧಿಸಲಾಗಿದೆ.
ಅಕ್ಟೋಬರ್ 1ರಂದು 13 ಪ್ರಕರಣ ದಾಖಲಾಗಿದೆ. 6,500 ರೂ. ದಂಡ ವಿಧಿಸಲಾಗಿದೆ. ಅಕ್ಟೋಬರ್ 2ರಂದು 11 ಪ್ರಕರಣಗಳು 5,500 ರೂ. ದಂಡ, ಅಕ್ಟೋಬರ್ 3ರಂದು 14 ಪ್ರಕರಣಗಳು 7 ಸಾವಿರ ರೂ. ದಂಡ, ಅಕ್ಟೋಬರ್ 4 ಮತ್ತು 5ರಂದು ತಲಾ 2 ಪ್ರಕರಣ ದಾಖಲಾಗಿದ್ದು 2 ಸಾವಿರ ರೂ. ದಂಡ ವಿಧಿಸಲಾಗಿದೆ.
ಅಕ್ಟೋಬರ್ 7ರಂದು ಅತಿ ಹೆಚ್ಚು ಪ್ರಕರಣಗಳು ದಾಖಲಾಗಿದೆ. ಆ ದಿನ 22 ಪ್ರಕರಣ ದಾಖಲಾಗಿದ್ದು 11 ಸಾವಿರ ರೂ. ದಂಡ ವಿಧಿಸಲಾಗಿದೆ. ಇನ್ನು ಅಕ್ಟೋಬರ್ 8ರಂದು 10 ಪ್ರಕರಣಗಳು ದಾಖಲಾಗಿದ್ದು, 5 ಸಾವಿರ ದಂಡ ವಿಧಿಸಲಾಗಿದೆ.
ಖಾಸಗಿ ಬಸ್ ನಿಲ್ದಾಣದ ಒಳಗೆ ದ್ವಿಚಕ್ರ ವಾಹನಗಳು, ಕಾರು ಸೇರಿದಂತೆ ಯಾವುದೆ ವೈಯಕ್ತಿಕ ವಾಹನಗಳನ್ನು ಕೊಂಡೊಯ್ಯಬಾರದು ಎಂದು ಜಿಲ್ಲಾ ರಕ್ಷಣಾಧಿಕಾರಿ ಶಾಂತರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422