ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | SHIMOGA | 13 ಜುಲೈ 2022
ಮಲೆನಾಡಿನ ತವರು ಶಿವಮೊಗ್ಗದಲ್ಲಿ ವಿದ್ವಾನ್ ಎಚ್. ಎಸ್. ನಾಗರಾಜ್ ಎಂದರೆ ಅದು ಕರ್ನಾಟಕದ ಶಾಸ್ತ್ರೀಯ ಸಂಗೀತಕ್ಕೆ ಪರ್ಯಾಯ ಹೆಸರು. ಸದಾ ಒಂದಿಲ್ಲೊಂದು ಚಟುವಟಿಕೆಯಿಂದ ಅವರು ಮತ್ತು ವಿದ್ಯಾಲಯ ಸದಾ ಹೊಸತನದ ಪ್ರತೀಕವಾಗಿರುತ್ತದೆ.
ನಮ್ಮ ಪರಂಪರೆಯ ಶೈಲಿಯಲ್ಲಿ ಉತ್ತಮ ಸಂಗೀತದ ಪಾಠ ಎಂದರೆ ರಾಜ್ಯದ ಎಲ್ಲ ಗಾಯನ ಪರಿಣತರು ಇಂದು ಶಿವಮೊಗ್ಗದ ಕಡೆಗೆ ಕಣ್ಣು ಅರಳಿಸಿ ಪ್ರಶಂಸೆ ಮಾಡುವುದು ವಿದ್ವಾನ್ ನಾಗರಾಜರ ಬಗ್ಗೆ. ಹೌದು. ಜೀವನವನ್ನೇ ಸಂಗೀತಕ್ಕಾಗಿ ಮೀಸಲಿಟ್ಟ ಈ ಗುರುಗಳಿಗೆ ಈಗ 60ರ ವಸಂತ. ಸಂಗೀತ ಕಲಿಕಾರ್ಥಿಗಳಿಗೆ ಏನಾದರೂ ಕೊಡುಗೆ ನೀಡಬೇಕು ಎಂಬುದು ಅವರ ಅಂತರಂಗದ ಅಶಯ.
ವಿದ್ವಾನ್ ನಾಗರಾಜರ ಸಾರಥ್ಯದಲ್ಲಿ 1985ರಿಂದಲೂ ಚಾಲ್ತಿಯಲ್ಲಿರುವ ಉಚಿತ ದೇವರ ನಾಮದ ಶಿಬಿರ (ಪುರಂದರ ದಾಸರ ಆರಾಧನಾ ಮಹೋತ್ಸವದ ಪ್ರಯುಕ್ತ) ನಡೆಸುವ ದಾಸರ ಪದಗಳ ಉಚಿತ ಗಾಯನ ಅಭಿಯಾನವು ಶಿವಮೊಗ್ಗ ದಾಟಿ ರಾಜಧಾನಿ ಬೆಂಗಳೂರನೂ ಮೀರಿ ಸಾಗರೋಲ್ಲಂಘನ ಮಾಡಿದೆ.
ಈ ವಿದ್ಯಾಲಯದ ಈ ವಿಶೇಷ ಉಚಿತ ಶಿಬಿರದಲಿ ಪ್ರತಿ ವರ್ಷ ಸಾವಿರಾರು ಮಾತೆಯರು ದಾಸರ ಪದ ಕಲಿತು ಹಾಡಿದ್ದಾರೆ. ಗಾಯನವೇ ತಿಳಿಯದ ಮಾತೆಯರು ಲಕ್ಷ ಲಕ್ಷ ಮನೆಗಳಲಿ ಇಂದು ದಾಸರ ಪದ ಹಾಡಿ ಭಕ್ತಿ ಸಮರ್ಪಣೆ ಮಾಡಿದ್ದಾರೆ ಎಂದರೆ ಅದರ ಕೀರ್ತಿ ನಾಗರಾಜರಿಗೆ ಸಲ್ಲಬೇಕು.
ಇಷ್ಟು ಖ್ಯಾತಿ ಹೊಂದಿರುವ ಉಚಿತ ದೇವರ ನಾಮದ ಶಿಬಿರ ಇದೀಗ ಆನ್ ಲೈನ್ ರೂಪಕ್ಕೆ ಬಂದಿದೆ. ಈ ಅಭಿಯಾನವು ವಿಶೇಷವಾಗಿ ಮಹಿಳೆಯರಿಗೆಂದೇ ಮೀಸಲಾಗಿದ್ದು, 15 ವರ್ಷ ಮೇಲ್ಪಟ್ಟ ಎಲ್ಲಾರೂ ಈ ಅಭಿಯಾನದಲ್ಲಿ ಭಾಗವಹಿಸಬಹುದು.
ತರಗತಿಯಲ್ಲಿ ಭಾಗವಹಿಸುವ ಮಹಿಳೆಯರಿಗೆ ಶಾಸ್ತ್ರೀಯ ಸಂಗೀತದ ಹಿನ್ನೆಲೆಯ ಅವಶ್ಯಕತೆ ಇಲ್ಲ ಎಂಬುದು ಈ ಅಭಿಯಾನದ ವಿಶೇಷ. ವೃತ್ತಿನಿರತ ಮತ್ತು ಗೃಹಿಣಿಯರೂ ಸಹ ಈ ಅಭಿಯಾನದಲ್ಲಿ ಭಾಗವಹಿಸಬಹುದಾಗಿದೆ. ಆಗಸ್ಟ್ ತಿಂಗಳ 7ನೇ ತಾರೀಖಿನಿಂದ ಈ ಅಭಿಯಾನ ಚಾಲನೆ ಗೊಳ್ಳಲಿದೆ ಎಂಬುದು ಮಹತ್ತರ ಸಂಗತಿ.
ಪ್ರತಿ ಭಾನುವಾರವೂ ಸಮಯಾನುಸಾರವಾಗಿ ಐದು ಪ್ರತ್ಯೇಕ ಆನ್ ಲೈನ್ ತರಗತಿಗಳು ಇರಲಿವೆ. ಅಂತೆಯೇ ಅನುಕೂಲ ಇದ್ದವರು ಆಫ್ ಲೈನ್ ತರಗತಿಗಳಲ್ಲೂ ಪಾಲ್ಗೊಳ್ಳಬಹುದು.
ವಿಶೇಷವಾಗಿ ಆಫ್ ಲೈನ್ ತರಗತಿಗಳನ್ನು “ಧಾರ್ಮಿಕ ಪ್ರವಾಸ” ದ ರೀತಿಯಲ್ಲಿ ರೂಪಿಸಲಾಗಿದೆ. ಇದು ಪ್ರತಿ ಮಾಸಾಂತ್ಯದಲಿ ಧಾರ್ಮಿಕ ಕ್ಷೇತ್ರಗಳು ಹಾಗೂ ಐತಿಹಾಸಿಕ ದೇಗುಲಗಳಲ್ಲಿ ನಡೆಯಲಿದೆ. ತಿಂಗಳಿಡೀ ಕಲಿತ ಕೃತಿಗಳನು ಒಂದು ದೇಗುಲ ಅಥವಾ ಐತಿಹಾಸಿಕ ತಾಣದಲಿ ಸಮರ್ಪಣೆ ಮಾಡಿ ಮುಂದಿನ ಕಲಿಕೆಗೆ ಸ್ಪೂರ್ತಿ ಪಡೆಯಲಾಗುತ್ತದೆ.
ಈ ಅಭಿಯಾನದಲ್ಲಿ ಪಾಲ್ಗೊಳ್ಳುವ ಯಾವುದೇ ಆಸಕ್ತರು ಆನ್ ಲೈನ್ ಅರ್ಜಿಯನ್ನು ಭರಿಸುವುದು ಕಡ್ಡಾಯ. ಆಗಸ್ಟ್ 1ನೇ ತಾರೀಖಿನೊಳಗೆ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಸಕ್ತರು ವೆಬ್ ಸೈಟ್’ಗೆ ಭೇಟಿ ನೀಡಿ, ಅಲ್ಲಿಯೇ ಅರ್ಜಿ ತುಂಬಿ ಸಲ್ಲಿಸಬಹುದು.
ಗುರುಗುಹ ಗಾಯನ ಅಭಿಯಾನದಲ್ಲಿ ಪಾಲ್ಗೊಳ್ಳಿ. ಪುರಂದರ ದಾಸರ ಕೀರ್ತನೆ ಕಲಿತು ದೈವ ಕೃಪೆಗೆ ಪಾತ್ರರಾಗಬಹುದು. ಮನೆ ಮನೆಗಳಲಿ ಗಾಯನದ ಮಾಧುರ್ಯ ಹೊಮ್ಮಿಸಬಹುದು. ಇಂದಿನ ಮೊಬೈಲ್ ಯುಗದಲ್ಲಿ ಮರೆತು ಹೋಗುತ್ತ ಇರುವ ಗಾಯನ ಪರಂಪರೆ ಉಳಿಸಿ ಬೆಳೆಸುವುದು ಮಾತೆಯರಿಂದ ಮಾತ್ರ ಸಾಧ್ಯ. ಈ ಉಚಿತ ಅಭಿಯಾನಕೆ ನಿಮ್ಮ ಸಹಕಾರ ದೊಡ್ಡ ಕೊಡುಗೆಯಾಗಲಿದೆ.
ವೆಬ್ ಸೈಟ್ ಲಿಂಕ್ ಇಲ್ಲಿದೆ – http://www.bhakthisankeerthana.com/
ಇದನ್ನೂ ಓದಿ – ಜೆಎನ್ಎನ್ ಕಾಲೇಜಿನಲ್ಲಿ ‘ಉತ್ತಾನ 2022’ಗೆ ಬಿಗ್ ಬಾಸ್ ಖ್ಯಾತಿಯ ಶಮಂತ ಗೌಡ ಚಾಲನೆ
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422