SHIVAMOGGA LIVE NEWS | 28 ಮಾರ್ಚ್ 2022
ಬ್ಯಾಂಕ್ ಹೆಸರಿನಲ್ಲಿ ಬಂದ ನಕಲಿ ಮೆಸೇಜ್ ಲಿಂಕ್ ಕ್ಲಿಕ್ ಮಾಡಿ, ನಿವೃತ್ತ ನೌಕರರೊಬ್ಬರ ಬ್ಯಾಂಕ್ ಖಾತೆಯಿಂದ ಒಂದೇ ಗಂಟೆಯಲ್ಲಿ ಹತ್ತು ಭಾರಿ ಹಣ ಕಡಿತವಾಗಿದೆ.
ಏನಿದು ಪ್ರಕರಣ?
ಶಿವಮೊಗ್ಗದಲ್ಲಿ ಇರುವ ನಿವೃತ್ತ ನೌಕರರೊಬ್ಬರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಹೆಸರಿನಲ್ಲಿ ಮೆಸೇಜ್ ಬಂದಿತ್ತು. ‘ಬ್ಯಾಂಕ್ ಖಾತೆಗೆ ಈ ಕೂಡಲೆ ಪ್ಯಾನ್ ಕಾರ್ಡ್ ನಂಬರ್ ನಮೂದು ಮಾಡಬೇಕು. ಇದಕ್ಕಾಗಿ ಮೆಸೇಜ್’ನಲ್ಲಿರುವ ಲಿಂಕ್ ಕ್ಲಿಕ್ ಮಾಡಿ’ ಎಂದು ತಿಳಿಸಲಾಗಿತ್ತು.
ಒಟಿಪಿ ಎಂಟ್ರಿ ಮಾಡಿ
ಬ್ಯಾಂಕ್’ನಿಂದಲೆ ಬಂದಿರುವ ಮೆಸೇಜ್ ಎಂದು ಭಾವಿಸಿದ ನಿವೃತ್ತ ನೌಕರ, ಲಿಂಕ್ ಕ್ಲಿಕ್ ಮಾಡಿದ್ದಾರೆ. ಒಟಿಪಿ ಮೆಸೇಜ್ ಬಂದಿದೆ. ಒಟಿಪಿ ನಂಬರನ್ನು ಎಂಟ್ರಿ ಮಾಡಿದ್ದಾರೆ. ಇದಾಗಿ ಕೆಲವೆ ನಿಮಿಷದಲ್ಲಿ ಹಣ ಕಡಿತವಾಗಲು ಆರಂಭವಾಗಿದೆ.
10 ಭಾರಿ ಹಣ ಕಟ್
ಒಟಿಪಿ ಎಂಟ್ರಿಯಾದ ಬಳಿಕ ಒಂದೇ ಗಂಟೆಯಲ್ಲಿ ಹತ್ತು ಭಾರಿ ಹಣ ಕಡಿತವಾಗಿದೆ. ಒಟ್ಟು 1,62,600 ರೂ. ಹಣ ಕಡಿತವಾಗಿರುವ ಮೆಸೇಜು ಬಂದಿವೆ. ಇದರಿಂದ ಆತಂಕಗೊಂಡ ನಿವೃತ್ತ ನೌಕರ, ಕೂಡಲೆ ಬ್ಯಾಂಕ್’ನ ಕಾಲ್ ಸೆಂಟರ್’ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಖಾತೆಯನ್ನು ಬ್ಲಾಕ್ ಮಾಡಿಸಿದ್ದಾರೆ.
ಘಟನೆ ಸಂಬಂಧ ಶಿವಮೊಗ್ಗದ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – shivamoggalive@gmail.com
WhatsApp Number – 7411700200
- ಶಿವಮೊಗ್ಗದ ಒಂದು ರೈಲು ಎರಡು ದಿನ ಭಾಗಶಃ ರದ್ದು, ಕಾರಣವೇನು?
- ಅಡಿಕೆ ಧಾರಣೆ | 20 ಜನವರಿ 2025 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?
- ಮೆಗ್ಗಾನ್ ಆಸ್ಪತ್ರೆ ಬಳಿ ATMನಲ್ಲಿ ಹಣ ಬಿಡಿಸಿದ ರೈತ, ಮರುದಿನ ಕಾದಿತ್ತು ಆಘಾತ, ಆಗಿದ್ದೇನು?
- ಕುವೆಂಪು ವಿವಿಯಿಂದ ಮೂವರಿಗೆ ಗೌರವ ಡಾಕ್ಟರೇಟ್, ಯಾರಿಗೆಲ್ಲ ಪ್ರದಾನ ಮಾಡಲಾಗ್ತಿದೆ?
- ಶಿವಮೊಗ್ಗ ಜಿಲ್ಲೆ, ಇವತ್ತು ಯಾವ್ಯಾವ ತಾಲೂಕಿನಲ್ಲಿ ಎಷ್ಟಿರುತ್ತೆ ತಾಪಮಾನ?
- ಮಕ್ಕಳಿಗೆ ಚಿನ್ನದ ಸರ ಹಾಕುವ ಪೋಷಕರೆ ಹುಷಾರ್, ಶಿವಮೊಗ್ಗದಲ್ಲಿ ಎರಡು ಪ್ರತ್ಯೇಕ ಕೇಸ್ ದಾಖಲು