ಶಿವಮೊಗ್ಗ LIVE
ಶಿವಮೊಗ್ಗ: ಡಾ. ಅಂಬೇಡ್ಕರ್ ಭವನಕ್ಕೆ ಜಾಗ ಮಂಜೂರು ಮಾಡಿಕೊಡುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಗಾಜನೂರು ಗ್ರಾಮದಿಂದ ಜಿಲ್ಲಾ ಪಂಚಾಯಿತಿ ಕಚೇರಿವರೆಗೆ ಕಾಲ್ನಡಿಗೆ ಜಾಥಾ (Padayathre) ನಡೆಸಲಾಯಿತು.
ಗಾಜನೂರು ಗ್ರಾಮ ಪಂಚಾಯಿತಿಯ ಎ.ಕೆ, ಎ.ಡಿ ಕಾಲೋನಿ ಪಕ್ಕದಲ್ಲಿರುವ ಹಳೆಯ ದೊಡ್ಡಿ ಖಾಲಿ ಜಾಗವನ್ನು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಭವನಕ್ಕೆ ಮಂಜೂರು ಮಾಡಿಕೊಡುವಂತೆ ಆಗ್ರಹಿಸಲಾಯಿತು. ಜಿಲ್ಲಾ ಪಂಚಾಯಿತಿ ಸಿಇಒ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಗಾಜನೂರು ಗ್ರಾಮ ಪಂಚಾಯಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿಯ ಆದಿ ಕರ್ನಾಟಕ ಹಾಗೂ ಆದಿ ದ್ರಾವಿಡ ಜನಾಂಗದ ಸುಮಾರು 150ಕ್ಕೂ ಹೆಚ್ಚು ಕುಟುಂಬಗಳ ವಾಸವಾಗಿವೆ. ಪ್ರತಿ ಮನೆಯಲ್ಲಿ ಎರಡು ಮೂರು ಕುಟುಂಬಗಳು ವಾಸವಾಗಿವೆ. ಈ ಜನಾಂಗದವರಿಗೆ ಶುಭ ಕಾರ್ಯಗಳನ್ನು ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಸಭಾಂಗಣವಿಲ್ಲ. ಆದ್ದರಿಂದ ಡಾ. ಅಂಬೇಡ್ಕರ್ ಭವನಕ್ಕೆ ಜಾಗ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.
ದಲಿತ ಸಂಘರ್ಷ ಸಮಿತಿ ಪ್ರಮುಖರಾದ ಹಾಲೇಶಪ್ಪ, ಶಿವಾಜಿ, ಮೂರ್ತಿ, ನಾಗರಾಜ್, ಪ್ರಭು, ರಾಜ್‌ಕುಮಾರ್, ಆನಂದ್, ಶೇಷಪ್ಪ, ಪರಮೇಶ್ವರ ಸೂಗೂರು, ರಂಗಪ್ಪ ಸೇರಿ ಹಲವರು ಇದ್ದರು.

ಇದನ್ನೂ ಓದಿ » ಶಿವಮೊಗ್ಗ KSRTC ಬಸ್ ನಿಲ್ದಾಣದಲ್ಲಿ ಮಹಿಳೆ ಅಸ್ವಸ್ಥ, ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವು
Padayathre
LATEST NEWS
- ಮಹಿಳೆಯರಿಗೆ ಗುಡ್ ನ್ಯೂಸ್, ಶಿವಮೊಗ್ಗದಲ್ಲಿ ಜನವರಿ 17ರಿಂದ ಮೇಳ, ಏನೇನೆಲ್ಲ ಇರಲಿದೆ?

- ಭದ್ರಾ ನಾಲೆಗೆ ಹಾರಿ ಗೃಹಿಣಿ ಆತ್ಮಹತ್ಯೆ ಕೇಸ್, ಪಾಂಡಿಚೇರಿಯಲ್ಲಿ ಪತಿ ಅರೆಸ್ಟ್

- ಶಿವಮೊಗ್ಗದಲ್ಲಿ ಡಾಗ್ ಶೋ, ರಿಜಿಸ್ಟರ್ ಮಾಡಿಕೊಳ್ಳಲು ಸೂಚನೆ, ಯಾವಾಗ? ಎಲ್ಲಿ ನಡೆಯುತ್ತೆ?

- ಫೋನ್ ಕರೆ, ಶಿವಮೊಗ್ಗದಿಂದ ವ್ಯಕ್ತಿ ದೌಡು, ಆನವಟ್ಟಿ ಮನೆ ಬಳಿ ಕಾದಿತ್ತು ಶಾಕ್

- ಕೋಣಂದೂರು ಸುತ್ತಮುತ್ತ ಇವತ್ತು ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ? ಇಲ್ಲಿದೆ ಊರುಗಳ ಪಟ್ಟಿ

About The Editor
ನಿತಿನ್ ಆರ್.ಕೈದೊಟ್ಲು





