SHIVAMOGGA LIVE NEWS | 4 SEPTEMBER 2023
SHIMOGA : ಮಳೆ (Rain) ಕೈಕೊಟ್ಟು ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದೆ. ಈ ಮಧ್ಯೆ ಶೇ.92ರಷ್ಟು ಭತ್ತ (paddy) ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ನಾನಾ ಮೂಲದಿಂದ ನೀರಿನ ವ್ಯವಸ್ಥೆ ಮಾಡಿಕೊಂಡು ಬಿತ್ತನೆ ಪೂರ್ಣಗೊಳಿಸಿದ್ದಾರೆ. ಈಗಲು ರೈತರು (Farmers) ಮಳೆಯ ನಿರೀಕ್ಷೆಯಲ್ಲಿದ್ದಾರೆ.
ಮುಂಗಾರು ಪೂರ್ವ ಮತ್ತು ಮುಂಗಾರು ಮಳೆ ಕೈ ಕೊಟ್ಟಿದೆ. ಇದರಿಂದ ಜಿಲ್ಲೆಯ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಈ ನಡುವೆಯು ಜಿಲ್ಲೆಯ 72,135 ಹೆಕ್ಟೇರ್ನಲ್ಲಿ ಭತ್ತ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ.
ಇದನ್ನೂ ಓದಿ – ವಿದ್ಯಾರ್ಥಿ ಬ್ಯಾಗಿನಲ್ಲಿ ನಾಗರ ಹಾವು, ಸಹಪಾಠಿ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿತು
ಯಾವ್ಯಾವ ತಾಲೂಕಿನಲ್ಲಿ ಎಷ್ಟಾಗಿದೆ?
ಶಿವಮೊಗ್ಗ ಜಿಲ್ಲೆಯ 77,640 ಹೆಕ್ಟೇರ್ನಲ್ಲಿ ಭತ್ತ ಬಿತ್ತನೆಯ ಗುರಿ ಇದೆ. ಈವರೆಗೆ 72,135 ಹೆಕ್ಟೇರ್ನಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿ ಶೇ.92ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ.
ಶಿವಮೊಗ್ಗ ತಾಲೂಕಿನಲ್ಲಿ 9,900 ಹೆಕ್ಟೇರ್ ಪೈಕಿ 9620 ಹೆಕ್ಟೇರ್ನಲ್ಲಿ ಭತ್ತ ಬಿತ್ತನೆಯಾಗಿದೆ. ಭದ್ರಾವತಿಯಲ್ಲಿ 5350 ಹೆಕ್ಟೇರ್ ಪೈಕಿ 4925, ತೀರ್ಥಹಳ್ಳಿಯಲ್ಲಿ 8210 ಹೆಕ್ಟೇರ್ ಪೈಕಿ 7500 ಹೆಕ್ಟೇರ್, ಸಾಗರದಲ್ಲಿ 12550 ಹೆಕ್ಟೇರ್ ಪೈಕಿ 12060 ಹೆಕ್ಟೇರ್, ಹೊಸನಗರದಲ್ಲಿ 8150 ಹೆಕ್ಟೇರ್ ಪೈಕಿ 7800 ಹೆಕ್ಟೇರ್, ಶಿಕಾರಿಪುರದಲ್ಲಿ 13000 ಹೆಕ್ಟೇರ್ ಪೈಕಿ 10000 ಹೆಕ್ಟೇರ್, ಸೊರಬದಲ್ಲಿ 20480 ಹೆಕ್ಟೇರ್ ಪೈಕಿ 20230 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಭಿತ್ತನೆ ಮಾಡಲಾಗಿದೆ.
ಇದನ್ನೂ ಓದಿ – ನಾಟಿ ಮಾಡಿದ್ದ 300 ಅಡಿಕೆ ಗಿಡಗಳು ನಾಶ, ರೈತನಿಗೆ ಜೀವ ಬೆದರಿಕೆ ಆರೋಪ
ಮಳೆ ಇಲ್ಲದೆ ರೈತರು ಹೈರಾಣು
ಜಿಲ್ಲೆಯಲ್ಲಿ ಮಳೆ ಕೈಕೊಟ್ಟಿದ್ದರಿಂದ ರೈತರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಭತ್ತ ನಾಟಿಗೆ ಸಸಿ ಬಿಟ್ಟುಕೊಂಡು ನೀರಿಲ್ಲದೆ ಪರಿತಪಿಸಿದ್ದಾರೆ. ಸಸಿ ಒಣಗಿ ನಾಟಿ ಮಾಡಲಾಗದೆ ರೈತರು ಒದ್ದಾಡಿದ್ದಾರೆ. ಹಾಗೋ ಹೀಗೋ ನೀರು ಒದಗಿಸಿಕೊಂಡು ನಾಟಿ ಮಾಡಿದ್ದರು ಪುನಃ ನೀರು ಅವಶ್ಯಕತೆ ಎದುರಾಗಿದ್ದು ರೈತರಿಗೆ ಸವಾಲಾಗಿದೆ.
ಬೋರ್ ನೀರು, ಮೋಟರ್ಗೆ ದುಡ್ಡು
ಜಿಲ್ಲೆಯ ವಿವಿಧೆಡೆ ರೈತರು ಕೊಳವೆ ಬಾವಿ, ಬಾವಿ, ಕೆರೆ, ಹಳ್ಳದ ನೀರನ್ನು ನಂಬಿಕೊಂಡು ಬಿತ್ತನೆ ಕಾರ್ಯ ಮಾಡಿದ್ದಾರೆ. ಮೋಟರ್ ಮತ್ತು ಬೋರ್ ವ್ಯವಸ್ಥೆ ಇರುವವರು ತಮ್ಮ ಜಮೀನಿಗೆ ನೀರು ಹಾಯಿಸಿಕೊಳ್ಳುತ್ತಿದ್ದಾರೆ. ಈ ವ್ಯವಸ್ಥೆ ಇಲ್ಲದವರು ಮೋಟರ್ ಮತ್ತು ಬೋರ್ ಹೊಂದಿರುವವರಿಂದ ಪೈಪ್ ಲೈನ್ ಹಾಕಿ ಜಮೀನಿಗೆ ನೀರು ಹಾಯಿಸುತ್ತಿದ್ದಾರೆ. ಹಲವು ಕಡೆ ನೀರು ಹಾಯಿಸಲು ಗಂಟೆ ಲೆಕ್ಕದಲ್ಲಿ ಬಾಡಿಗೆಯನ್ನು ಪಾವತಿಸುತ್ತಿದ್ದಾರೆ.
ಆಗಸ್ಟ್ ತಿಂಗಳ ಕೊನೆಗೆ ಮಳೆಯಾಗುವ ಸಂಭವವಿದೆ ಎಂದು ಹೇಳಲಾಗಿತ್ತು. ಇದನ್ನು ನಂಬಿ ಹಲವು ರೈತರು ಭತ್ತ ನಾಟಿ ಮಾಡಿದ್ದರು. ಆದರೆ ನಿರೀಕ್ಷೆ ತಲೆಕೆಳಗಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಉತ್ತಮ ಮಳೆಯಾದರೆ ಅಲ್ಪಸ್ವಲ್ಪ ಬೆಳೆ ಉಳಿಸಿಕೊಳ್ಳಬಹುದು ಎಂದ ಲೆಕ್ಕಾಚಾರದಲ್ಲಿ ರೈತರು ಆಗಸದತ್ತ ಮುಖ ಮಾಡಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200