ಶಿವಮೊಗ್ಗ : ಮಹಾನಗರ ಪಾಲಿಕೆಯನ್ನು ಮೂರು ವಿಭಾಗವಾಗಿ ವಿಂಡಿಸಲಾಗಿದೆ. ಪ್ರತ್ಯೇಕ ವಿಭಾಗಗಳು ಇಂದಿನಿಂದ ಕಾರ್ಯಾರಂಭ ಮಾಡಲಿವೆ. ಪ್ರತಿ ವಿಭಾಗಕ್ಕು ನಿಗದಿತ ವಾರ್ಡ್‌ಗಳನ್ನು (Wards) ಹಂಚಿಕೆ ಮಾಡಲಾಗಿದೆ.
ಇನ್ನು, ಪ್ರತಿ ವಿಭಾಗಕ್ಕು ಪ್ರತ್ಯೇಕ ಅಧಿಕಾರಿಗಳನ್ನು ನೇಮಿಸಿ ಪಾಲಿಕೆ ಕಮಿಷನರ್ ಡಾ. ಕವಿತಾ ಯೋಗಪ್ಪನವರ್ ಆದೇಶಿಸಿದ್ದಾರೆ.
ಇದನ್ನೂ ಓದಿ » ಇವತ್ತಿನಿಂದ ಶಿವಮೊಗ್ಗ ಮಹಾನಗರ ಪಾಲಿಕೆ 3 ವಲಯವಾಗಿ ವಿಂಗಡಣೆ, ಎಲ್ಲೆಲ್ಲಿ ಹೊಸ ಕಚೇರಿ ಶುರು?
ಯಾವ್ಯಾವ ವಲಯಕ್ಕೆ ಯಾವ ವಾರ್ಡ್?
ವಲಯ 1 : ವಿನೋಬನಗರದ ಶುಭಮಂಗಳ ಕಲ್ಯಾಣ ಮಂದಿರದ ಬಳಿ ಪಾಲಿಕೆ ಕಟ್ಟಡದಲ್ಲಿ ಉತ್ತರ ವಲಯ ಕಚೇರಿ.
» ಯಾವೆಲ್ಲ ವಾರ್ಡ್ ಸೇರಲಿದೆ? : ಈ ವಲಯಕ್ಕೆ ಒಟ್ಟು 11 ವಾರ್ಡ್‌ಗಳು (Wards) ಸೇರಲಿವೆ.
» ವಾರ್ಡ್ 1. ಸಹ್ಯಾದ್ರಿ ನಗರ, ವಾರ್ಡ್ 2. ಅಶ್ವಥ್ ನಗರ, ವಾರ್ಡ್ 3. ಶಾಂತಿನಗರ, ವಾರ್ಡ್ 4 ಮಲ್ಲೇಶ್ವರ ನಗರ, ವಾರ್ಡ್ 6 ಗಾಡಿಕೊಪ್ಪ, ವಾರ್ಡ್ 7 ಕಲ್ಲಹಳ್ಳಿ, ವಾರ್ಡ್ 8 ಜೆ.ಪಿ.ಎನ್.ನಗರ, ವಾರ್ಡ್ 9 ಗಾಂಧಿ ನಗರ, ವಾರ್ಡ್ 32 ಟಿಪ್ಪುನಗರ, ವಾರ್ಡ್ 33 ಸವಾಯಿಪಾಳ್ಯ, ವಾರ್ಡ್ 34 ವಿದ್ಯಾನಗರ.

ವಲಯ 2 : ಗೋಪಿ ವೃತ್ತದ ಬಳಿ ಪಾಲಿಕೆಗೆ ಸೇರಿದ ದೇವರಾಜ ಅರಸು ವಾಣಿಜ್ಯ ಸಂಕೀರ್ಣ ಕಟ್ಟಡದ ಮೊದಲ ಮಹಡಿಯಲ್ಲಿ ಕೇಂದ್ರ ವಲಯ ಕಚೇರಿ ಸ್ಥಾಪಿಸಲಾಗಿದೆ.
ಯಾವೆಲ್ಲ ವಾರ್ಡ್ ಸೇರಲಿದೆ? : ಈ ವಲಯಕ್ಕೆ ಒಟ್ಟು 11 ವಾರ್ಡ್‌ಗಳು ಸೇರಲಿವೆ.
ವಾರ್ಡ್ 5 ಗುಡ್ಡೆಕಲ್ಲು, ವಾರ್ಡ್ 10 ರವೀಂದ್ರನಗರ, ವಾರ್ಡ್ 11 ಬಸವನಗುಡಿ, ವಾರ್ಡ್ 20 ಹೊಸಮನೆ, ವಾರ್ಡ್ 21 ದುರ್ಗಿಗುಡಿ, ವಾರ್ಡ್ 22 ಗಾಂಧಿ ಬಜಾರ್ ಪಶ್ಚಿಮ, ವಾರ್ಡ್ 26 ಅಶೋಕ ನಗರ, ವಾರ್ಡ್ 29 ಆಜಾದ್ ನಗರ, ವಾರ್ಡ್ 30 ಸೀಗೆಹಟ್ಟಿ, ವಾರ್ಡ್ 31 ಗೋಪಿಶೆಟ್ಟಿಕೊಪ್ಪ, ವಾರ್ಡ್ 35 ಸೂಳೇಬೈಲು.
ವಲಯ 3 : ಇಮಾಮ್ ಬಾಡಾ ಬಳಿ ಸ್ಮಾರ್ಟ್ ಸಿಟಿಯಿಂದ ಅಭಿವೃದ್ಧಿಪಡಿಸಲಾದ ಕಟ್ಟಡದಲ್ಲಿ ದಕ್ಷಿಣ ವಲಯ ಕಚೇರಿ.
ಯಾವೆಲ್ಲ ವಾರ್ಡ್ ಸೇರಲಿದೆ? : ಈ ವಲಯಕ್ಕೆ ಒಟ್ಟು 13 ವಾರ್ಡ್‌ಗಳು ಸೇರಲಿವೆ.
ವಾರ್ಡ್ 12 ಟ್ಯಾಂಕ್ ಮೊಹಲ್ಲಾ, ವಾರ್ಡ್ 13 ಅರಮನೆ ಪ್ರದೇಶ, ವಾರ್ಡ್ 14 ವಿದ್ಯಾನಗರ, ವಾರ್ಡ್ 15 ಹರಿಗೆ, ವಾರ್ಡ್ 16 ಮಲವಗೊಪ್ಪ, ವಾರ್ಡ್ 17 ಗೋಪಾಲಗೌಡ ಬಡಾವಣೆ, ವಾರ್ಡ್ 18 ವಿನೋಬನಗರ, ವಾರ್ಡ್ 19 ಶರಾವತಿ ನಗರ, ವಾರ್ಡ್ 23 ಗಾಂಧಿ ಬಜಾರ್ ಪೂರ್ವ, ವಾರ್ಡ್ 24 ಕೆ.ಹೆಚ್.ಬಿ.ಗೋಪಾಳ, ವಾರ್ಡ್ 25 ಜೆ.ಪಿ.ನಗರ, ವಾರ್ಡ್ 27 ಮಿಳಘಟ್ಟ, ವಾರ್ಡ್ 28 ಆರ್.ಎಂ.ಎಲ್.ನಗರ.
mahanagara palike wards for 3 new divisions established for the ease of administration.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200